Saturday, 19 October 2013


ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ / ಸ್ಪಷ್ಟ ಸಾಕ್ಷಿಇರದ ಒಂದು ಸಾವಿರ ಟನ್ ಚಿನ್ನ...?

ಮಾನವ ತನ್ನದನ್ನು ಬಿಟ್ಟು ಕಾಣದ  ಸ್ವತ್ತಿಗೆ ಬಾಯ್ತೆಗೆದು ಕುಳಿತಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಲ್ಲಿದೆ.
ಭಾರತದ ಗಣ್ಯರು ಸ್ವಿಸ್ ಬ್ಯಾಂಕ್ ನಲ್ಲಿ ಇಟ್ಟಿರುವ ಕಪ್ಪು ಹಣ ಸುಮಾರು 1456 ಬಿಲಿಯನ್ ಡಾಲರ್  ಇದು ನಮ್ಮ ದೇಶದ ಟ್ಟು ಸಾಲದ 13 ಪಟ್ಟು ಹೆಚ್ಚಿದ್ದು ಈ ಮಾಹಿತಿಗೆ ಪುರಾವೆಗಳು ದೊರೆತಿದ್ದರು, ಸರ್ಕಾರ ಅದನ್ನು ತನ್ನ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಮರಳಿ ಭಾರತಕ್ಕೆ ತರುವಲ್ಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಕಾರಣ ತನ್ನ ಸ್ವತ್ತು ದೇಶದ ಸುಧಾರಣೆಗಾಗಿಯೇ?... ಬೇಡ.. ಎಂಬ ಮಹದಾಸೆಯಿಂದ...
19ನೇ ಶತಮಾನದಲ್ಲಿ ಉತ್ತರ ಪ್ರದೇಶದ ದೌಂಡಿಯಖೇರ್ ಹಳ್ಳಿಯನ್ನು ಆಳುತ್ತಿದ್ದ ರಾವ್ ರಾಮ್ ಸಿಂಗ್ ಸುಮಾರು ಒಂದು ಸಾವಿರ ಟನ್ ಚಿನ್ನವನ್ನು ಭೂಮಿಯಲ್ಲಿ ಹುದುಗಿಸಿಟ್ಟಿದ್ದನ್ನು ಯೋಗಿ ಸ್ವಾಮಿ ಶೊಬನ್ ಸರಕಾರ್ ಕನಸಿನಲ್ಲಿ ಕಂಡ ನಿಧಿಗೆ ಸರ್ಕಾರ ಬಾಯ್ತೆಗೆದು ಕುಳಿತಿದೆ. ಒಂದು ಸಾವಿರ ಟನ್ ಚಿನ್ನ ಇರುವುದಕ್ಕೆ ಯಾವುದೇ ಸ್ಪಷ್ಟ ಆಧಾರವಿಲ್ಲವಾದರೂ ಒಬ್ಬ ಸಾಧು ಕಂಡ ಕನಸಿನ ಆಧಾರದ ಮೇರೆಗೆ ಒಂದು ತಿಂಗಳೊಳಗೆ ಕಾರ್ಯಾಚರಣೆ ಮುಗಿಸಲು ಪಣ ತೊಟ್ಟಿರುವುದು ನಿಜವಾಗಿಯೂ ಪ್ರಶಂಸನೀಯ...  ಹಣ ಎಂದರೆ ಹೆಣಾನೂ ಬಾಯ್ಬಿಡತ್ತೆ ಅನ್ನೋ ಗಾದೆ ಮಾತು ಬರಿ ಮಾತಲ್ಲಾ ... ಉದಾಹರಣೆಗಳು ತುಂಬಾ ಇವೆ. ಅದರಲ್ಲಿ ಇದೂ ಕೂಡ ಒಂದು.

ಇದರ ಪರಿಣಾಮವೇನು?  ಸುಮಾರು ಒಂದು ಸಾವಿರ ಟನ್ ಚಿನ್ನ ಅಂದರೆ... ಭೂತಾಯಿಯ ಮಡಿಲನ್ನು ಎಷ್ಟು ಆಳದವರೆಗೆ ಅಗೆಯಬೇಕು... ಇವರ ದುರಾಸೆಗೆ ಭೂಮಿಯ ಇನ್ನೊಂದು ತುದಿಯವರೆಗೂ ಕಾರ್ಯ ಜರುಗುವುದಂತು ನಿಜ. ಇದರ ಕಾರ್ಯಾಚರಣೆಗೆ ತಗಲುವ ವೆಚ್ಚ ... ಪರಿಶ್ರಮ ಬಂಡೆಮೇಲೆ ಮಳೆ ಸುರಿದಂತೆ...  ವಿನಾಶಕಾಲೆ ವಿಪರೀತ ಬುದ್ದಿ ಎನ್ನುವುದು ಇದಕ್ಕೆ. ಪ್ರಳಯದ ಮುನ್ಸೂಚನೆಯನ್ನು ಮಾನವ ತಾನಾಗಿಯೇ ಬರಮಾಡಿಕೊಂಡಿದ್ದಾನೆ. ಒಂದು ಸಾವಿರ ಟನ್ ಚಿನ್ನ ಸಿಗಲಿ... ಸಿಗದೇ ಇರಲಿ... ಪ್ರಕ್ರುತಿಯ ವಿಕೋಪಕ್ಕೆ ಎಡೆಮಾಡಿರುವ ಈ ನಿರ್ಧಾರ ಪ್ರಳಯ ಆಗುವುದು ಕಟು ಸತ್ಯ ಎಂಬುದನ್ನು ಸಾಬೀತು ಮಾಡಿದೆ. "ಮ್ಯಕನಸ್ ಗೋಲ್ಡ್" ಚಿತ್ರ ವೀಕ್ಷಿಸಿದವರಿಗೆ ಇದು ನಿಜ ಎಂದು ಒಪ್ಪಿಕೊಳ್ಳುವಲ್ಲಿ ಎರೆಡು ಮಾತಿಲ್ಲ...