Thursday, 21 November 2013

ಎರೆಡೂ ಕೈ ಸೇರಿದ್ರೇನೇ ಚಪ್ಪಾಳೆ...

ಓ ಟೈಟಲ್ ನೋಡಿ ಏನ್ ಫುಲ್ ಖುಷಿನಾ... ಯಾರ್ದಪ್ಪಾ ಲವ್ ಸ್ಟೋರಿ ಅಂತ ಕುತೂಹಲ ಶುರುವಾಯ್ತಾ...
ತಪ್ಪು ನಿಮ್ದಲ್ಲಾ ಬಿಡಿ... ಸಾಮಾನ್ಯವಾಗಿ ಈ ಗಾದೆಯ ಪ್ರಯೋಗ ಆಗೋದು ಇಂತಹ ಪ್ರಮೇಯದಲ್ಲೇ...

ಲವ್ - ಪ್ರೀತಿ ಅಂದಾಕ್ಷಣ ಹುಡುಗ - ಹುಡುಗಿ ಅನ್ನೋದ್ ಬಿಟ್ಟು ಬೇರೆ ಯೋಚ್ನೆನೇ ಬರಲ್ಲಾ... ಇದಕ್ಕೆ ಕಾರಣ ನಮ್ಮ ಸಮಾಜನಾ?... ಖಂಡಿತ ಇಲ್ಲಾ. ಈ ಸಮಾಜದಲ್ಲಿರೋ ನಾವುಗಳು. ಒಡ ಹುಟ್ದೋರಾಗ್ಲಿ... ಒಡನಾಡಿಗಳಾಗ್ಲೀ... ಯಾವುದೇ ಒಂದು ಸಂಬಂಧ  ಬಲವಾಗಿರ್ಬೇಕು ಅಂದ್ರೆ ಎರಡು ಮನಸ್ಸುಗಳ ನಡುವೆ ಅದೇ ಭಾವನೆ... ಅಷ್ಟೇ ಪ್ರೀತಿ-ವಿಶ್ವಾಸ ಇದ್ರೆ ಮಾತ್ರ ಸಾಧ್ಯ.

ಒಂದು ಅಯಸ್ಕಾಂತ ಇನ್ನೊಂದು ಕಬ್ಬಿಣ ಆದ್ರೆ ಆ ಸಂಬಂಧಕ್ಕೆ ಅರ್ಥಾನೇ ಇರಲ್ಲಾ... ಅಯಸ್ಕಾಂತ ಕಬ್ಬಿಣಕ್ಕೆ ಹೋಗಿ ಅಂಟ್ಕೊಂಡ್ರೂ... ಕಬ್ಬಿಣ ಅಯಸ್ಕಾಂತಕ್ಕೆ ಹೋಗಿ ಅಂಟ್ಕೊಂಡ್ರೂ... ಈ ಬಂಧನಕ್ಕೆ ಮೂಲ ಕಾರಣ ಅಯಸ್ಕಾಂತಾನೇ...
ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನಾವು ಪ್ರೀತ್ಸೋರ್ಗಿಂತ ನಮ್ಮನ್ನ ಪ್ರೀತ್ಸೊರು ನಮ್ಮ ಬಾಳ ಪಯಣದಲ್ಲಿ ಸದಾ ಇರ್ಲಿ ಅಂತ ಆಶಿಸ್ತೀವಿ.

ಒಂದು ಕೈ ಇನ್ನೊಂದು ಕೈ ಗೆ ರಭಸದಿಂದ ಬಂದು ಸೇರಿದ್ರೆ ಅದು ಚಪ್ಪಾಳೆ ಆಗಲ್ಲಾ... ಎರಡೂ ಕೈಗಳು ಒಂದೇ ಸಮನಾಗಿ ಒಂದೇ ವೇಗದಲ್ಲಿ ಬಂದು ಸೇರಿದಾಗ ಮಾತ್ರ ಅದು ಸಾಧ್ಯ. ಪ್ರೀತಿ - ವಿಶ್ವಾಸ ಅನ್ನೋದು ಕೇಳಿ ಪಡ್ಕೊಳಕ್ಕೆ ಅದು ಮಾರುಕಟ್ಟೆಯಲ್ಲಿ ಸಿಗೋ ವಸ್ತು ಅಲ್ಲಾ... ತಂದೆ - ತಾಯಿ ತಮ್ಮ ಮಕ್ಕಳ ಮೇಲೆ ಪ್ರೀತಿಯೆಂಬ ಮಳೆಯನ್ನೇ ಸದಾ ಸುರಿಸ್ತಾರೆ...   ಅಷ್ಟೇ ಪ್ರೀತಿ ಮಕ್ಕಳು ಆವರಿಗೆ ತೋರಿಸಿದ್ರೆ ಅವರಿಗಾಗುವ ಖುಷಿನಾ ಅವರ ಕಣ್ಣಿನಲ್ಲಿ ಮಾತ್ರ ನೋಡಲು ಸಾಧ್ಯ. ಇದು ಒಂದು ಉದಾಹರಣೆ ಮಾತ್ರ.

ಸಂಬಂಧ ಎಂದಾಕ್ಷಣ ತಂದೆ-ತಾಯಿ, ಅಣ್ಣ - ತಮ್ಮ, ಅಕ್ಕ-ತಂಗಿ, ಗಂಡ-ಹೆಂಡತಿ... ಅಷ್ಟೇ ಅಲ್ಲ... ಮಾನವರಾಗಿ ಹುಟ್ಟಿದ ನಮಗೆ ಆ ಭಗವಂತ ಎಣಿಸಲಾರದಷ್ಟು ಸಂಬಂಧವೆಂಬ ಮಾಲೆಯನ್ನೇ ಕರುಣಿಸಿದ್ದಾನೆ.  ಒಂದು ಮಾಲೆ ಸೃಷ್ಠಿಯಾಗಬೇಕಾದ್ರೆ ಪ್ರತಿಯೊಂದು ಹೂ ಕೂಡ ದಾರವೆಂಬ ಪ್ರೀತಿ-ವಿಶ್ವಾಸದ ಬಂಧನದಲ್ಲಿದ್ದರೆ ಮಾತ್ರ ಸಾಧ್ಯ. ಹಾಗೆ ನಾವು ಕೂಡ.

ಪ್ರತಿಯೊಂದು ಸಂಬಂಧಕ್ಕೂ  ತನ್ನದೇ ಆದ ಚೌಕಟ್ಟಿದೆ. ಆ ಚೌಕಟ್ಟಿನಲ್ಲಿ ಪ್ರೀತಿ-ವಿಶ್ವಾಸದ ಬಲ ಒಂದಿದ್ರೆ ಸ್ನೇಹ ... ಪ್ರೀತಿ... ವಿಶ್ವಾಸದ ಭಾಂದವ್ಯಕ್ಕೆ ಅರ್ಥ ಕಲ್ಪಿಸಲು ಸಾಧ್ಯ.  ಈ ಅರ್ಥಪೂರ್ಣವಾದ ಸಂಬಂಧ ನಮ್ಮ ಸಮಾಜದಲ್ಲಿ ಸೃಷ್ಠಿಯಾಗಬೇಕು ಅಂದ್ರೆ, ಅದು ಸಮಾಜವನ್ನ ನಿರ್ಮಿಸಿರುವ ನಮ್ಮಿಂದ ಮಾತ್ರ ಸಾಧ್ಯ.


ಹನಿ... ಹನಿ... ಸೇರಿದ್ರೆನೇ ನದಿ - ಸರೋವರ ಸೃಷ್ಠಿಯಾಗೋದು. ಹಾಗೆ ಸಣ್ಣ ಸಣ್ಣ ಖುಷಿ - ನಿಸ್ವಾರ್ಥದ ಪ್ರೀತಿ ಇದ್ರೆ ಮಾತ್ರ   ಪ್ರೀತಿಯೆಂಬ ಸಬಂಧದ ಸರೋವರ ನಿರ್ಮಾಣವಾಗಲು ಸಾಧ್ಯ. 
 ನಿಮ್ಮ ಪ್ರೀತಿ - ವಿಶ್ವಾಸನ ಸದಾ 
Active ಮೋಡ್ ಗೆ push ಮಾಡಿ
 ಸದಾ ನೀವೂ ಖುಷಿ ಪಡಿ ನಿಮ್ಮವರನೂ ಖುಷಿಪಡಿಸಿ...