Thursday, 12 December 2013

ನಮ್ಮ ಗೂಡು...













ನಾವು ಹಾಗು ನಮ್ಮದೊಂದು ಪುಟ್ಟ ಗೂಡು
ಆಗಸಕು ವಿಶಾಲವಾದುದು ನಮ್ಮಯ ಗೂಡು...
ಪ್ರೀತಿ ವಿಶ್ವಾಸದ ಬೆಸುಗೆಯ ಅಂದದ ಗೂಡು... ಚಂದದ ಗೂಡು ...

ನಿನ್ನಯ ಪ್ರೀತಿಯಲಿ ಅರಳಿಹೆನು ನಾ ತಾವರೆಯಾಗಿ
ತಾವರೆಗೆ ನೀನಾಗಿಹೆ ಬಾಳಜ್ಯೋತಿ...

ನನ್ನಯ ಸರ್ವಸ್ವವೂ ನೀನು... ನಿನ್ನಯ ಸರ್ವಸ್ವವೂ ನಾನು
ನನಗಾಗಿ ನೀನು... ನಿನಗಾಗಿ ನಾನು...

ನಮ್ಮಿಬ್ಬರಿಗಾಗಿಹುದು ನಮ್ಮದೊಂದು ಪುಟ್ಟ ಗೂಡು.