Wednesday, 7 March 2012

ಕೊಡಚಾದ್ರಿ ... (ತ್ರಿಲೋಕ ಸುತ್ತಿದ ಅನುಭವ)



ಹಲೋ  maddy  ಬೈಕ್ನಲ್ಲಿ ಕೊಡಚಾದ್ರಿ ಹೋಗುವ ಅಂತ ಗುರು phone ಮಾಡಿ ಕೇಳ್ದಾಗ ಸಕತ್  ಖುಷಿಲಿ ಹೂ ಅಂದೇ. ಆಮೇಲೆ ಯಾಕೋ ಹೆದರಿಕೆ ಶುರು ಆಯಿತು. ಮನೇಲಿ ಏನ್ ಹೇಳ್ತಾರೋ ಅಂತ. ಆದ್ರೂ ಗುರು ಇದಾನೆ ಅಂದ್ರೆ ಒಂದು ಧೈರ್ಯ ನಂಗೆ. ಅಮ್ಮನ ಹತ್ರ ಹೋಗಿ ಹೇಳ್ದೆ .. ಹೂ ಸರಿ ಹೋಗಿ ಬಾ ಅಂದ್ರು... ಬೈಕ್ ನಲ್ಲಿ ಅಂದೆ... ಆ...! ಬೈಕ್ನಲ್ಲಾ ... ಯಾರ ಜೊತೆ ಅಂದ್ರು... ಗುರು, ಶ್ಯಾಮ, ರಂಗ ಅಂದೆ. ಹೂ ಸರಿ ಹುಷಾರು ಅಂತ permission ಕೊಟ್ರು. ಅಮ್ಮಂಗೆ ಬಿಟ್ರೆ ಯಾರಿಗೂ ಬೈಕ್ ನಲ್ಲಿ ಹೋಗ್ತಿರೋದು ಅಂತ ಗೊತ್ತಿರ್ಲಿಲ್ಲ. ಬೈಕ್ ಅಂತ ಹೇಳಿದ್ರೆ ಅಪ್ಪ permission ಕೊಡ್ತಿರ್ಲಿಲ್ಲ. ಅಮ್ಮಂಗೆ ನನ್ನ ಮೇಲೆ ವಿಶ್ವಾಸ... ಎಲ್ಲೇ ಹೋದ್ರು ಜಯಿಸಿಕೊಂಡು ಬರ್ತೀನಿ ಅನ್ನೋ ಭರವಸೆ. ಹೊರಡೋ ಹಿಂದಿನ ದಿನ Blackey (ಕಪ್ಪುಗಿಲ್ರಿ  black colour ಗೂ ಇವನಿಗೂ ಗುರುಗೂ ಇವರ hostel ಗೂ ಒಂತರ ನಂಟು ಅದ್ಕೆ) ಶ್ಯಾಮ ಮನೆಗೆ ಬಂದಿದ್ದ. ಅಮ್ಮ ತಿನ್ಲಿಕ್ಕೆ ಏನೋ ಕೊಟ್ಟಿದ್ರು. ನನ್ನ Rockey room ನಲ್ಲಿದ್ದ. (ನನ್ನ ಜೀವ... ನನ್ನ pet). ನಾ ಬಂದಿದೀನಿ ಅಂತ ಗೊತ್ತಾಗಿ ಕೂಗಡ್ಲಿಕ್ಕೆ ಶುರು ಮಾಡ್ಕೊಂಡಿದ್ದ. ಅಮ್ಮ ಅಡಿಗೆ ಮನೆಯಿಂದ ಒಂದು ಕೈನಲ್ಲಿ ಟೀ ಕಪ್ ಇನ್ನೊಂದು ಕೈನಲ್ಲಿ 5 -6 beans ಹಿಡ್ಕೊಂಡು ಬಂದ್ರು. ಇದನ್ನಾ ನೋಡಿ Blackey ಇದೇನಪಾ ಇವರ ಮನೆಯಲ್ಲಿ  ಹೊಸ system ಎಲ್ರು ಮನೇಲಿ ಟೀ ಜೊತೆ ಬಿಸ್ಕೆಟ್ ಕೊಡ್ತಾರೆ ಆದ್ರೆ ... ಇಲ್ಲಿ beans...! ಅಷ್ಟೊತ್ತಿಗೆ ಅಮ್ಮ ಅವನಿಗೆ ಟೀ ಕೊಟ್ಟು Rockey  ಗೆ beans ಕೊಡಲಿಕ್ಕೆ ರೂಂ ಗೆ ಹೋದರು. ಹಾ... beans ಅಂದ್ರೆ ನನ್ನ Rockey ಗೆ ತುಂಬಾ ಇಷ್ಟ ಅದ್ಕೆ. ಸದ್ಯ ಬಚಾವಾದೆ ಅಂತ ಒಂದೇ ಉಸಿರು ಬಿಟ್ಟಿದ್ದ Blackey. ಅ ಸನ್ನಿವೇಶ ... ಅವನ್ನ ನೆನೆಸಿಕೊಂಡರೆ ನಮ್ಮಮ ಈಗಲೂ ಹಾಸ್ಯ ಮಾಡ್ತಾರೆ. ನಮ್ಮ ಅಮ್ಮಂಗೆ ಶ್ಯಾಮ ಅಂದ್ರೆ ಓ beans ಅಲಾ ಅಂತಾರೆ. ಅಷ್ಟು famous ಆಗಿದಾನೆ. ಹೊರಡಬೇಕಿದ್ರೆ ಅಮ್ಮ ಹುಷಾರಾಗಿ ಹೋಗಿ ಬನ್ನಿ ಅಂತ ಹೊರಗಡೆ ಬಂದು ಹೇಳಿದ್ರು. ಹೂ ಆಂಟಿ ನಾಳೆ ಬೆಳಗ್ಗೆ ಬರ್ತೀನಿ ಅಂತ ಹೋರಾಟ. ಬೆಳಗ್ಗೆ ಸುಮಾರು 2 -15 ಗೆ ಬೈಕ್ ದೂರದಲ್ಲೇ ನಿಲ್ಸಿ ಮನೆ ಹತ್ರ ಬಂದಿದ್ದ. ಕೊರೆಯೋ ಚಳಿಲಿ full pack ಆಗಿ ಇನ್ನೊಂದು ಸವಾರಿ ಗುರು ಮತ್ತೆ ರಂಗ ready  ಇದ್ರು. ಯಾರು ಇಲ್ಲ ರಸ್ತೇನೆ ನಮ್ಮದಾಗಿತ್ತು. 
ಜಿನಿ ಜಿನಿ ಜಿನಿಗೋ ಮಳೆ... ಕೈ ರೋಮವೆಲ್ಲವೂ ಎಳೆ ಎಳೆಯಾಗಿ ಬತ್ತದ ಪೈರಿನಂತೆ ಬಾಗುತ್ತಿತು. ಶಿವಮೊಗ್ಗದಿಂದ ಆಯನೂರಿನ ಹಾದಿಯಲ್ಲಿ ಜೋಳದ ತೆನೆ ಕಾಣಿಸಿದ್ದೇ ತಡ ಯಾರಗೂ ತೊಂದ್ರೆ ಕೊಡದೆ self  service hotel ಗೆ entry ಕೊಟ್ಟಹಾಗೆ ಹೋಗಿ parcel ತೊಗೊಂಡು ಹೊರಟ್ವಿ. ಅದು without payment ... ಹಲೋ ಕದ್ದಿದಲ್ರೀ ... high jump ಮಾಡಿ ಕತ್ತಲಲ್ಲಿ ಕಷ್ಟ ಪಟ್ಟು ಕಿತ್ತಿದ್ದು. 
ಮುಂದೆ ಹೊಗ್ತಿದ್ಹಾಗೆ ಕಾಣ್ಸಿದ್ದು... ಹುಲಿನೂ ಅಲ್ಲ... ಸಿಂಹಾನೂ ಅಲ್ಲ.. ಅಯನೂರಿನ ನರಿ. ಬೆಳ್ಳಂಬೆಳಗ್ಗೆ ನರಿ ನೋಡಿದ್ರೆ ತುಂಬಾ ಒಳ್ಳೇದಂತೆ ಅಂತ Blackey ಹೇಳಿದ್ದಷ್ಟೇ... ಬೈಕ್ ಇಂದ ಇಬ್ರೂ ದಿಕ್ಕಾಪಾಲಾಗಿ ಉತ್ತರ-ದಕ್ಷಿಣಕ್ಕೆ ಬಿದ್ದಿದ್ವಿ. ಇಬ್ರೂ ಹೆಂಗೊ ಎದ್ವಿ ಆದ್ರೆ third party ಮಾತ್ರ ಇನ್ನೂ ಹಾಗೆ ಮಲಗಿದ್ರು. ಬೈಕ್ ಅನ್ಕೊಂಡ್ರಾ ... ಆ ... ಹಾ... head light  ಇಲ್ಲದ four wheeler ... black colour ... ಹೆಸರು AMBA.  ಇದು ಯಾವ್ದೋ ಹೊಸ ಕಾರ್ ಅಂದ್ಕೊಂಡ್ರಾ ... ಅಲ್ರೀ... ಇದು road ನಲ್ಲಿ ಪುಕ್ಕಟೆ traffic police ಕೆಲಸ ಮಾಡುವ ದನ. ಪಾಪ ಯಾರ ಸಹಾಯವೂ ಇಲ್ಲದೆ 5 x 4 ಅಡಿಯ ದೇಹ ಕಷ್ಟ ಪಟ್ಟು ತನ್ನ ಕಾಲ್ಮೇಲೆ ಹೇಗೋ ನಿಂತ್ಕೊಳ್ತು. digree  ಮುಗಿಸಿ ತನ್ನ ಕಾಲ್ಮೇಲೆ ತಾನು ನಿಂತ್ಕೊಂಡೆ ಅನ್ನೋ ಖುಷಿ ಕೇವಲ ವಿದ್ಯಾರ್ಥಿಗಳಲ್ಲಿ ಮಾತ್ರ ಅಲ್ಲಾ... ಅಂದು ಪುನರ್ಜನ್ಮ ಪಡೆದ ದನದ ಮುಖದಲ್ಲೂ ಕಾಣಿಸ್ತಿತ್ತು. 
ಗುರು, ರಂಗ ಯಾವಾಗ spot ಗೆ ಬಂದ್ರು ಅಂತ ನನಿಗಂತೂ ಗೊತ್ತಾಗಲಿಲ್ಲ. ನನಗಿಂತ ಜಾಸ್ತಿ ಏಟು ಬಿದ್ದಿದ್ದು Blackey ಗೆ. ಎಷ್ಟೇ ಬೇಗ 108 ಬಂದು ಕೆಲಸ ಶುರು ಮಾಡೋ speed ನಲ್ಲಿ ಗುರು ಮತ್ತೆ ರಂಗ   Blackey ಗೆ  first -aid ಶುರು ಹಚ್ಕೊಂಡ್ರು. Book bind  ಮಾಡೋಕೆ gum tape ಹಚ್ಚೋತರ Blackey ಗೆ  ಆದ ಗಾಯದ ಮೇಲೆ  ಅಂಟಿಸ್ತಾ ಹೋದ್ರು. Blackey ಗೆ ಏನನ್ಸ್ತೋ ಗೊತ್ತಿಲ್ಲಾ... ನನಗೆ ಮಾತ್ರ ಯಮದೂತನಿಂದ escape ಆದ ಕರಾಳ ಅನುಭವ ಅದು. 

ಉ..ಆಹ್ ಆಚ್ ... ಅಂತ ನಮ್ಮ ಬೈಕ್ ಪಯಣ ಮುಂದೆ ಸಾಗಿತು. ಕತ್ಲಲ್ಲಿ ರಂಗನ ಬೈಕ್ head light  Blackey ಗೆ ಗಾಡಿ ಓಡಿಸಲಿಕ್ಕೆ ಸ್ಸತ್ ಕೊಡ್ತಿತ್ತು. ಸೂರ್ಯೋದಯ ನೋಡುವ ಕುತೂಹಲದಿಂದ ಸಾಗಿದ ನಮಗೆ ಇನ್ನೂ  ರಂಗನ ಬೈಕ್ head light  ದಾರಿ ತೋರಿಸ್ತಿತ್ತು ಅಂತ ಅಂದ್ಕೊಂಡ್ರಾ... ಸೂರ್ಯ ಕಾಣಿಸದೆ ಇದ್ರೂ ಅವನ ಬೆಳಕು ಮಾತ್ರ ಸುರ್ಯನ್ಗೆ good morning ಆಗಿ ತುಂಬಾ ಹೊತ್ತಾಗಿದೆ ಅಂತ ನಮಗೆ ಮನವರಿಕೆ ಮಾಡಿತು. 

ಕೊಚೆಲಿ circus ಮಾಡ್ಕೊಂಡು ಇನ್ಯಾವ ಅವನ್ತರವೂ ಆಗೋದು ಬೇಡ ಅಂತ ಬೈಕ್ side ನಲ್ಲಿ ನಿಲ್ಲಿಸಿ ಬೆಟ್ಟ ಹತ್ತೋಕೆ ಶುರು ಮಾಡಿದ್ವಿ. ನರಿ ಆಯಿತು... ದನ ಆಯಿತು ಇನ್ನೇನೂ ಅಂದ್ಕೊಂಡು ಮುಂದೆ ನೋಡಿದ್ರೆ ಏನಪ್ಪಾ ಅದು ಹಸಿರ ಹುಲ್ಲಿನ ಹಾಸಿನ ಮೇಲೆ ರಾಶಿ ರಾಶಿಯಾಗಿ ಬಿದ್ದಿತ್ತು automatic syringe . Blood  collect ಮಾಡ್ಕೊಂಡು report ಕೊಡದೆ ಮೂರ್ತಿ ಸಿಕ್ಕದಾದ್ರು ಕೀರ್ತಿ ದೊಡ್ಡದು ಎಂಬ ಗತ್ತಿನಿಂದ ಮೆರೆಯುತ್ತಿದ್ದ ಅ Leech ... Doctor  ಹೆಸರಲ್ರೀ ಅದೇ ಜಿಗಣೆ ..ಹಿಮ್ಳ ಅಂತಾರಲ ಅದು. ನಮಗಂತೂ ಇಷ್ಟ ಇಲ್ಲಾ ಅಂದ್ರೂ Blood Donate ಮಾಡೋ ಗತಿ ಬಂದಿದ್ದು. ಮೊದ್ಲೇ ಅದನ್ನಾ ನೋಡಿದ್ರೆ ನನಗೆ ಅಸಹ್ಯ ... ನಾ ಗುರು ಅಂದಿದ್ದೆ ತಡ ಪಾಪ ಗುರು ಅದನ್ನಾ ಕಿಟ್ಟಿ ಬಿಸಾಕ್ತಿದ್ದ.... Really  Guru  you  are  my  savior . 
ಕೊಡಚಾದ್ರಿಗೆ ಸಾಗೊವಾಗ ಸಾಮಾನ್ಯವಾಗಿ ಎಲ್ರೂ ಕೈನಲ್ಲಿ ನಾ ಕಂಡಿದ್ದು bottle . ಯಾವ bottle ಅಂತ ಹೇಳೋ ಅವಶ್ಯಕತೆ ಇಲ್ಲಾ ಅನ್ಕೊತಿನಿ. ನಮ್ಮ ಕೈನಲ್ಲಿ  bottle ಅಲ್ರೀ ... ಮೊಳಕೆ ಕಾಳು ಉಪ್ಪು - ಖಾರ ಮತ್ತೆ ಲಿಂಬು. ಮೊಳಕೆ ಕಾಳೆನೋ ಖಾಲಿ ಆಯಿತು. ಆದ್ರೆ ಈ ತ್ರೀಮೂರ್ತಿಗಳು polio drops ತಾರಾ ಒಂದು ಹನಿ ಲಿಂಬು ಒಂದು ಕಿಟಕಿ ಉಪ್ಪು ಅಂತ ಶುರು ಮಾಡ್ಕೊಂಡ್ರು. ಪಾಪ ರಂಗ ಬೇಡ ಅಂದ್ರೂ Blackey , ಗುರು ರಂಗನಿಗೆ ಸ್ವಲ್ಪ taste ನೋಡು ಅಂತ ಕೊಟ್ರು... ಅದು ಯಾವ range ಗೆ ಅವನಿಗೆ affect ಮಾಡ್ತು ಅಂದ್ರೆ ಲಿಂಬು ಸಿಪ್ಪೆ ಮಾತ್ರ ರಂಗನ ಕೈನಲ್ಲಿತ್ತು. ಅದು ಅರ್ದ break ಆಗಿರೋ Tennis Ball ಅನ್ನೋ ಮಟ್ಟಿಗೆ ಬಂದಿತ್ತು ಅದರ ಗತಿ. 
ಹಾಗೂ ಹೀಗೂ ಕೊಡಚಾದ್ರಿಯ ತುತ್ತ ತುದಿಯನೇರಿದ ನಮಗೆ ಸುಂದರ ಹಸಿರಿನ ಹಾಸು, ಮಂಜಿನ ಮುಸುಕು ತನ್ನ ವಿಸ್ಮಯ ಜಗತ್ತಿಗೆ ನಮ್ಮನ್ನ ಬರಮಾಡಿಕೊಂಡಿತು. ಜಿಗಿ ಜಿಗಿ ಮಳೆ, ತಣ್ಣನೆಯ ಗಾಳಿ ... ಯಮ ಲೋಕದ ಅನುಭವದಿಂದ ಸ್ವರ್ಗ ಲೋಕದ ಅನುಭವ ಮೂಡಿಸಿತು. ಬಿಸಿ ಬಿಸಿಯಾದ 30ml  ನಮ್ಮ ಮೈ ಸೇರ್ದಾಗ್ಲೆ ನಾವು ಚಳಿ ಇಂದ ಚೆತರ್ಸ್ಕೊಂಡಿದ್ದು... ಓ brand ಯಾವ್ದು ಅಂತ ಹೇಳಲಿಲ್ಲ ಅಲ್ವಾ... ಅದೇ ಬಣ್ಣ, ರುಚಿ ಮತ್ತು ಶಕ್ತಿ ಅಂತ ಮೂರೊತ್ತು TV ನಲ್ಲಿ ತೋರ್ಸಲ್ವಾ ಅದೇ ಟೀ. 
ವಿಸ್ಮಯ ಜಗತ್ತಿಗೆ bye  ಮಾಡುತ್ತಾ ಏರಿದ ಬೆಟ್ಟ ಮತ್ತೆ ಇಳಿಯಲಿಕ್ಕೆ ಶುರು ಮಾಡಿದ್ವಿ. ಇವರ ಕಣ್ಣಿಗೆ ಎಲ್ಲಿಂದ ಅ ಹಸಿರು ಹಾವು ಕಾನಿಸ್ತೋ ಗೊತ್ತಿಲ್ಲ... ಹೂವಿನ ಬಳ್ಳಿಯಂತೆ ಕೈನಲ್ಲಿ ಹಿಡ್ಕೊಂಡು ತಮ್ಮ study  ಶುರು ಮಾಡ್ಕೊಂಡ್ರು. .. ಏನ್ ಧೈರ್ಯಶಾಲಿಗಳು ಆಲ್ವಾ... ಜೀವ ಇಲ್ಲದ ಹಾವನ್ನ ಕೈನಲ್ಲಿ ಹಿಡಿಯೋದು ಅಂದ್ರೆ...  

ಮರಳಿ ಗೂಡಿಗೆ ಅಂತ ನಮ್ಮ ಪ್ರಯಾಣವು ಮನೆ ಕಡೆ ಸಾಗಿತು. ಮತ್ತೆ ಬೈಕ್ ಸಂಚಾರ ಶುರು ಆಯಿತು. ಅದೇ ದಾರಿ... ಅದೇ ಕತ್ತಲು... ಮತ್ತೆ ಯಮದೂತನ ಭಯ ಶುರುವಾಯಿತು ನನಗೆ. ಸದ್ಯ Traffic Police ಆಗ್ಲೇ ಮನೆ ಸೇರಿದ್ರು... ಬಚಾವಾದೆ. 
ಕೊನೆಗೂ ಸುರಕ್ಷಿತವಾಗಿ ತಲುಪಿದ ನನಗೆ ನಿಜವಾಗಿಯೂ ಪುನರ್ಜನ್ಮ ಸಿಕ್ಕಂತಾಗಿತ್ತು. ಒಂದೇ ದಿನದಲ್ಲಿ ಭೂಲೋಕ... ಯಮಲೋಕ... ಸ್ವರ್ಗಲೋಕ ವೀಕ್ಷಿಸಿ ... ಅನುಭವಿಸಿದ ಪ್ರತಿ ಕ್ಷಣದ ಅನುಭವ ಅನುಭವಿಸಿದವರಿಗೇ ಗೊತ್ತು... ಏನೇ ಹೇಳಿ ಇಂತಹ ಅನುಭವ ಇದ್ರೇನೆ ಅದು ಜೀವನ... ಏನಂತೀರ?

1 comment:

  1. bidi... nammavra jote 5 min idre sigo khusi, koti kotru baralla.. innu istondu adventure madi bandidira andre, navenu yelak agutte..

    ReplyDelete