ನನ್ನಯ ಬಾಳಿನಲ್ಲಿ ನನ್ನ ಭಾವನೆಗೆ ಸ್ಪಂದಿಸಿ ವಿಶ್ವಾಸದ ಹಾಗು ಪ್ರೀತಿಯ ಬೆಸುಗೆಯನ್ನು ನಿಸ್ವಾರ್ಥದಿಂದ ಬೆಸೆದ ಅಪೂರ್ವ ಹಾಗು ವಿಸ್ಮಯದ ಗೆಳೆಯರ ಪರಿ ಇದು. ವಿಶ್ವಾಸ ಹಾಗು ಪ್ರೀತಿಯ ಸಿರಿಯನ್ನು ನಿಸ್ವಾರ್ಥದಿಂದ ಕರುಣಿಸುವ ಪ್ರಾಣಿಗಳೆಂದರೆ ನನಗೆ ತುಂಬಾ ಪ್ರೀತಿ. ನನ್ನ ಮನೆಯ ಹತ್ತಿರ ನನಗೆ ಮೊದಲು ಹತ್ತಿರ ಆಗಿದ್ದು Don. ತುಂಬಾ simple ಯಾರಿಗೂ ತೊಂದರೆ ಕೊಡ್ತಿರ್ಲಿಲ್ಲ. ಮನೆಯಲ್ಲಿ ಎಲ್ಲರು ಅವನ ಹತ್ರ ಹೋಗಬೇಡ ಅಂತ ಬೈತಿದ್ರು. ಆದರು ನಾನು ಸುಮ್ನಿರ್ತಿರ್ಲಿಲ್ಲ. ಮನೇಲಿ ಯಾರಿಗೂ ಗೊತ್ತಿಲ್ಲದಹಾಗೆ ಚಪಾತಿ ಹಾಲು ಹಾಕ್ತಿದ್ದೆ. ಒಂದು ಆಶ್ಚರ್ಯ ಅಂದ್ರೆ ಇವನು ಬೋಗಳಿದ್ದೆ ನೋಡಿಲ್ಲ. ಇವನು ಏನ್ ಮಾಡಿದ್ರು ಸುಮ್ನಿರ್ತಾನೆ ಅಂತ ಕಣ್ಣ ಹತ್ತಿರ ಬೆರಳಿಡಲಿಕ್ಕೆ ಹೋದ ಆಗಲೇ ಗೊತ್ತಾಗಿದ್ದು ಅವನ ಸಿಟ್ಟು ಏನು ಅಂತ ಅವತ್ತೇ first ಅವನು ಬೊಗಳಿದ್ದು. ಗಾಯ ಮಾಡಿಕೊಂಡು ಬಂದ್ರೆ ಅವನಿಗೆ ನಂದೇ treatment. ನಾನು ಏನೇ ಮಾಡಿದ್ರು ಅವನ ಒಳ್ಳೆದಿಕ್ಕೆ ಅಂತ ಅವನಿಗೆ ಅನ್ಸಿತ್ತು ಅನ್ಸತ್ತೆ ಸುಮ್ನೆ ಇರ್ತಿದ್ದ. ಸ್ವಲ್ಪ ದಿನದ ನಂತರ ಒಂದು ವಾರ ಆದ್ರೂ ಮನೆಕಡೆ ಬಂದಿರಲಿಲ್ಲ. ನನ್ನ ಒಂದು ಕೂಗಿಗೆ ಓಡೋಡಿ ಬರ್ತಿದ್ದೊನು ಎಷ್ಟು ಕೂಗಿದ್ರೂ ಕಾಣಿಸಲಿಲ್ಲ. ಆಮೇಲೆ ಗೊತ್ತಾಯಿತು municipality ಅವರು ಅವನ್ನ ಕರಕೊಂಡು ಹೋಗಿದಾರೆ ಅಂತ. life ನಲ್ಲಿ ಒಬ್ಬ friend ಕಳಕೊಂಡು ತುಂಬಾ ಬೇಜಾರಾಗಿತ್ತು.
ಅನಂತರದ ಸಮಯದಲ್ಲಿ ಪರಿಚಯ ಆಗಿದ್ದು Mounty. ಪ್ರತಿ ದಿನ ಕಾಲೇಜ್ ಗೆ ಹೋಗ್ಬೇಕಿದ್ರೆ ಬಸ್ ಸ್ಟಾಪ್ ತನಕ ಬಿಟ್ಟು ಹೋಗ್ತಿದ್ಲು. ಮನೆ ಹತ್ರ ಎಲ್ಲೇ ಹೋದರು ನನಜೋತೆ ಬರ್ತಿದ್ಲು. ಒಂದು ದಿನ ರಾತ್ರಿ walk ಹೋಗ್ಬೇಕಿದ್ರೆ ಕಬ್ಬಿನ ಗಾಡಿಇಂದ ಕಬ್ಬು ಕಿತ್ತಿ ತಿಂತಿದ್ದೆ. ಜೊತೆಗಿದ್ದ Mounty ತನಿಗೂ ಬೇಕು ಅಂತ jump ಮಾಡಿ ಕೊಡು ಅಂತ ಹಟ ಮಾಡ್ಲಿಕ್ಕೆ ಶುರು ಮಾಡ್ದ. ನನಗೆ ಕೊಡಲಿಕ್ಕೆ ಹೆದರಿಕೆ ಆದ್ರೂ ಅವನು ಮಾಡೋದು ನೋಡ್ಲಿಕ್ಕಾಗದೆ ಒಂದು ಸಣ್ಣ ತುಂಡು ಕೊಟ್ಟೆ. ನನಿಗೆ ನಂಬಲಿಕ್ಕಾಗಲಿಲ್ಲ. ಸಿಪ್ಪೆಲಿರೋ ರಸ ಹೀರ್ಕೊಂಡು ಸಿಪ್ಪೆ ಬಿಸಾಕ್ತಿದ್ಲು... ತಾನು ಮರಿ ಹಾಕೋ time ನಲ್ಲೂ ಕೂಡ ನನ್ನ ಎದುರಿಗೆ ಬಂದು ಬೌ ಬೌ ಅಂತ ಅಂದ್ಲು... ನಾನು ಎನಿಕ್ಕೆ ಅಂತ ಅವಳ ಹಿಂದೆ ಹೋದೆ. ಪಕ್ಕದ ಮನೆ car shed ನಲ್ಲಿ ಜಾಗ ಮಾಡಿಕೊಂಡು ಮಲಗಿದ್ಲು. ನಾನು ಸ್ವಲ್ಪ ಹೊತ್ತು ಅಲ್ಲೇ ಇದ್ದೆ 4 ಮರಿ ಹಾಕಿದ್ಲು ಹಸಿವಾಗಿರತ್ತೆ ಅಂತ ಚಪಾತಿ ಕೊಟ್ಟೆ ಹತ್ರ ಹೋದರು ಏನು ಮಾಡಲಿಲ್ಲ ಸುಮ್ನೆ ಊಟ ಮಾಡಿದ್ಲು.
ಮನೇಲಿ ನಾನು ಇವರ ಜೊತೆ ಇಷ್ಟೊಂದು attachment ಇಟ್ಕೊಂಡಿರೋದು ನೋಡಿ uncle ಒಬ್ರು ನಮ್ಮ ಮನೇಲಿ German Shepherd - Doberman cross breed ಇದೆ ಬೇಕಾ ಅಂದ್ರು. ಸಕತ್ ಖುಷಿಲಿ ನಾನೇ uncle ಮನೆಗೆ ಹೋಗಿ ಒಂದು ಸಣ್ಣ bag ನಲ್ಲಿ ಕರಕೊಂಡು ಬಂದೆ. ಅವನೇ ನನ್ನ Rockey. Actually ಅವಳು but ನಾನು ಮಾತಾಡ್ಬೇಕಿದ್ರೆ ಅವನು ಅಂತಾನೆ use ಮಾಡ್ತೇನೆ.
ನಮ್ಮ ಮನೇಲಿ ನಾನು ಕೊನೆಯ ಮಗಳಾಗಿದ್ದೆ ಆದ್ರೆ Rockey ಬಂದಮೇಲೆ ಇವನು ನಮ್ಮೆಲ್ಲರ ಮುದ್ದಿನ ಮಗುವಾಗಿದ್ದ. ನಾನು ಇವನಿಗೆ ಮನೆಗೆ ಕರಕೊಂಡು ಬಂದಿದ್ದು ಜನವರಿ 5 1998. ಹಾಗಾಗಿ ಅವತ್ತೇ ಅವನ Birthday Celebrate ಮಾಡೋದು. Birthday ಗೆ ಅವನಿಗೆ ಇಷ್ಟ ಇರೋ ಎಲ್ಲ items ಕೊಡ್ತೀನಿ. Military Discipline ಇವನಿಗೆ ಅದೆಲಿಂದ ಬಂದಿತ್ತೋ ಗೊತ್ತಿಲ್ಲ. ಬೆಳಿಗ್ಗೆ ಒಂದು egg ಒಂದು glass ಹಾಲು... ಬರಿ ಹಾಲು ಕೊಟ್ರೆ bowl ಕಡೆ ತಿರುಗಿ ಕೂಡ ನೋಡ್ತಿರ್ಲಿಲ್ಲ. ಚಪಾತಿ ಕೊಟ್ರೆ ಮಾತ್ರ ತಿಂತಿದ್ದ. ಅಮ್ಮ ಒಂದು ದಿನ ರಾಗಿ ತುಂಬಾ ಒಳ್ಳೇದು ಅಂತ ರೊಟ್ಟಿ ಮಾಡಿ ಕೊಟ್ರು ಅದನ್ನ ನೋಡ್ತಿದ್ದಹಾಗೆ ಕೂಗಾಡ್ಲಿಕ್ಕೆ ಶುರು ಮಾಡ್ದ. ಯಾವ ಕ್ಯಾಲೆಂಡರ್ ಕೂಡ ನೋಡ್ದೆ ಇವತ್ತು Sunday ಅಂತ ಮಂಚದ ಕೆಳಗೆ ಕೂತ್ಕೊತಿದ್ದ ಯಾಕೆಂದರೆ ಅವತ್ತು ಸ್ನಾನ ಮಡ್ಸ್ತಾರೆ ಅಂತ. ಹಾಗಂತ ನೀರಿಗೆ ಏನು ಹೆದರ್ತಿರ್ಲಿಲ್ಲ. ಎಂಥಾ ಜೋರು ಮಳೆ ಇದ್ರು morning, evening and night walk ಆಗ್ಲೇ ಬೇಕಿತ್ತು. ಮಳೆ ಅಂತ ಕೆಲವಸಲ rain coat ಹಾಕಿ ಕರ್ಕೊಂಡ್ಹೋದ್ರೆ ಸಲೀಸಾಗಿ ಬರ್ತಿದ್ದ. ಸ್ನಾನ ಆದಮೇಲೆ towel ಇಂದ ವರಸ್ಕೊಲ್ದೆ ಒಳಗೆ ಹೋಗ್ತಿರ್ಲಿಲ್ಲ. ಕೈನಲ್ಲಿ brush (comb) ಹಿಡ್ಕೊಂಡ್ರೆ ಎದ್ರಿಗೆ ಬಂದು ಕೂತ್ಕೊತಿದ್ದ brush ಮಾಡು ಅಂತ. ನಾನು college ಇಂದ bicycle ನಲ್ಲಿ ಮನೆಗೆ ಬರ್ಬೇಕಿದ್ರೆ ಕೆಲವಸಲ ಅವನು walk ಮುಗಿಸಿ ಮನೆಗೆ ಹೊರಡೋವಾಗ ನಮ್ಮ race ಶುರು ಆಗೋದು. ಯಾವದೇ ಕಾರಣಕ್ಕೂ ಸೋಲ್ತಿರ್ಲಿಲ್ಲ ಪ್ರತಿಯೊಂದರಲ್ಲೂ ತಾನೇ first ಇರ್ಬೇಕು ಅವನಿಗೆ. ನನಗಿಂತ ಮೊದ್ಲು ಮನೆ ಸೇರ್ತಿದ್ದ.
ಇವನದೊಂದು specialty ಏನಂದ್ರೆ ಮಲ್ಗೊದಿಕ್ಕೆ ಹಾಸಿಗೆ ದಿಂಬು ಇರಲೇ ಬೇಕು. ಮಲಗಿದ್ದಾಗ ಎಬ್ಬಿಸಿದ್ರೆ ತುಂಬಾ ಸಿಟ್ಟು. ಒಮ್ಮೆ ಎಲ್ಲರು ಹೊರಗೆ ಹೋಗಿದ್ವಿ ಮನೇಲಿ ಅಣ್ಣನ ಜೊತೆ ಅವನೊಬ್ನೆ ಇದ್ದ. ನಾವು ಮನೆಗೆ ಬಂದ ಮೇಲೆ ಖುಷಿಲಿ ಕುಣಿದಾಡಿದ ಆಮೇಲೆ ಬಿಟ್ಟು ಹೊಗಿದಕ್ಕೆ table ಮೇಲೆ ಇಟ್ಟಿದ್ದ paper ಗಳನ್ನ officer ತರ ಬಿಸಾಕಿದ್ದ. ಬೇರೆ ಮಕ್ಕಳನ್ನ ಎತ್ಕೊಳೋ ತಪ್ಪು ಮಾತ್ರ ನಾನು ಯಾವತ್ತು ಮಾಡ್ತಿರಲಿಲ್ಲ. ಏಕಂದ್ರೆ ಒಂದು ಸಲ ಅನುಭವ ಆಗಿತ್ತು. ಪಕ್ಕದ ಮನೆ ಆಂಟಿ ಮಗುನ ಎತ್ತ್ಕೊಂಡಿದ್ದು ನೋಡಿ ಮನೆಗೆ ಬಂದಮೇಲೆ ಸಿಟ್ಟಿನಲ್ಲಿ bow bow... bow.. boww.... ಅಂದ... ಇವನು ಏನು ಮಗುಗಿಂತ ಕಡಿಮೆ ಇರ್ಲಿಲ್ಲ. ಹೊರಗೆ ಹೋಗುವ ಬಾ ಅಂದ್ರೆ ಎರೆಡು ಕಾಲು ಕೊರಳಿಗೆ ಹಾಕಿ ಎತ್ಕೋ ಅಂತಿದ್ದ. ಮನೇಲಿ ಯಾವಾಗ್ಲೂ ನಾನು ಅವನು football ಆಡ್ತಿದ್ವಿ. ಅವನಿಂದ ball pass ಆಗೋಕೆ ಬಿಡ್ತಿರಲಿಲ್ಲ. Really good goal keeper.
ಒಮ್ಮೆ ಮನೆಗೆ uncle ಬಂದಿದ್ರು. ಸಾಮಾನ್ಯವಾಗಿ ಯಾರೇ ಬಂದ್ರು ಅವರು ಹೋಗೋವರೆಗೂ ರೂಂ ನಲ್ಲಿ ನನ್ನ ಜೊತೆ ಇರ್ತಾನೆ. ಆದ್ರೆ uncle 2 ದಿನ ಇದ್ರು. ಒಂದು ದಿನ ಹೇಗೋ manage ಮಾಡ್ದೆ. ಎಲ್ರೂ ಒಟ್ಟಿಗೆ ಕೂತಾಗ ಅವನಿಗೂ chain ಹಾಕಿ ಕೂರ್ಸ್ಕೊತಿದ್ದೆ. ಅವರು ಎದುರಿಗೆ ಇದ್ರು ಏನು ಮಾಡ್ದೆ ಸುಮ್ನೆ ಕೂತಿದ್ದ. 2 ದಿನ ಆಗಿದೆ ಏನು ಮಾಡಲ್ಲ ಅಂತ ಅಣ್ಣ chain ಬಿಚಿದ್ದ. uncle ತಿಂಡಿ ತಿಂದು plate ತೊಲಿಲಿಕ್ಕೆ ಅಂತ ಹೊರಗೆ ಹೋದರು. ಅವರು ಹೋಗೋವರೆಗೂ ಸುಮ್ನೆ ಕೂತಿದ್ದ. ಅವರು ಮತ್ತೆ kitchen ಗೆ plate ಇಡಲಿಕ್ಕೆ ಬಂದಾಗ ಒಂದು ಚೂರು ಶಬ್ದ ಮಾಡ್ದೆ ಹೋಗಿ ಕಾಲಿಗೆ ಬಾಯಿ ಹಾಕಿದ್ದ. ನಾನು ಅಲ್ಲೇ ಇದ್ದೆ ಅವನಿಗೆ ಹಿಡ್ಕೊಂಡೆ ಬಚಾವ್.
ಸ್ವಲ್ಪ ದಿನದಿಂದ ನನ್ನ Rockey ಗೆ ಹುಷಾರಿರಲಿಲ್ಲ. Sept 5 2006 ಅಮ್ಮ ಮಧ್ಯಾಹ್ನ ಚಪಾತಿ ತಿನ್ಸ್ತಾ ಇದ್ರು. ನಾನು ಹೊರಗೆ ಗಾರ್ಡನ್ನಲ್ಲಿದ್ದೆ. ಕಿಡಕಿ ಹತ್ರ ಬಂದು ನಾನು ಬರ್ತೀನಿ ಅಂತ ಸನ್ನೆ ಮಾಡಿದ. ಸರಿ ಅಂತ chain ಹಾಕಿ ಹೊರಗೆ ಕರಕೊಂಡು ಹೋದೆ. ಸ್ವಲ್ಪ ದೂರ ಹೋಗಿ vomit ಮಾಡಿ ಸುಸ್ತಾಗಿ ನನ್ನ ತೊಡೆ ಮೇಲೆ ಮಲಗಿದ. ಅಕ್ಕನಿಗೆ ನೀರು ತರಲಿಕ್ಕೆ ಹೇಳಿ doctor ಗೆ ಫೋನ್ ಮಾಡ್ಲಿಕ್ಕೆ ಹೇಳ್ದೆ. ನೀರು ಕುಡಿದು ನನ್ನನ್ನೇ ನೋಡ್ತಾ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು .... ಅಂತ ನನ್ನ ಮಡಿಲಲ್ಲಿ ಚಿರ ನಿದ್ರೆಯಲಿ ಸಾಗಿದ್ದ. ನನ್ನ ಹೃದಯ ಬಡಿತ ತಟಸ್ಥವಾಗಿ ದೇಹ ಇದ್ರು ಜೀವ ಇಲ್ಲದಂತಾಗಿತ್ತು ನನ್ನ ಪರಿಸ್ಥಿತಿ. ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವುದು ಹೊದ್ದು ಮಲಗು ಮಗುವೆ ಅಂತ ಜೋಗುಳ ಹಾಡಿ ಮಲಗಿಸ್ತಾ ಇದ್ದೆ ಆದರೆ ಇಂದು ಭೂತಾಯಿಯ ಮಡಿಲಲ್ಲಿ ಚಿರನಿದ್ರೆಯಲ್ಲಿದ್ದ. ಆಗಸವು ಕೂಡ ನನ್ನ Rockey ಗೆ ತುಂತುರು ಮಳೆ ಇಂದ ಕಂಬನಿಯ ಮಿಡಿದಿತ್ತು.
ಈ ಪರಿಸ್ಥಿತಿ ಇಂದ ನನಿಗೆ ಹೊರಗೆ ಬರಲಿಕ್ಕೆ ಆಗ್ತಿರ್ಲಿಲ್ಲ. ಈ ಸಮಯದಲ್ಲಿ ನನಗೆ ಸಹಾಯ ಮಾಡಿದ್ದು ನನ್ನ Lucy. ನನ್ನ ಅಕ್ಕ ರಾಜೇಶ್ವರಿ ಪ್ರೀತಿ ಇಂದ ಹಾಗೆ ಕರಿತೀನಿ. ಮನೇಲಿ ಯಾರಿಗೂ ಗೊತ್ತಿಲ್ಲದಹಾಗೆ ಐದು ಸಾವಿರ ಕೊಟ್ಟು German Shepard ಮರಿ ಕೊಡ್ಸಿದ್ಲು. ಒಂದು ತಿಂಗಳ ಮರಿ ಕರಕೊಂಡು ಬಂದೆ. ಇವನು ಕೂಡ Rockey ನೆ. ಇವನ Birthday August 2 ಅವತ್ತಿಂದ ಇವತ್ತಿನವರೆಗೂ ನಾ ಮನೇಲಿದ್ದಾಗ ಒಂದು ಕ್ಷಣ ಕೂಡ ನನ್ನ ಬಿಟ್ಟಿರಲ್ಲ. ನಾ ಮಲಗಿದಾಗ ಮಲಗ್ತಾನೆ ನಾ ಎದ್ದಾಗ ಏಳ್ತಾನೆ ಒಂದು ಕ್ಷಣ ಕಾಣಿಸಲಿಲ್ಲ ಅಂದ್ರೆ ಹುಡುಕಾಡ್ಲಿಕ್ಕೆ ಶುರು...
ಪ್ರತಿ Sunday ನನಗೆ ಸ್ವಲ್ಪ ಕೆಲಸ ಜಾಸ್ತಿ ಆದ್ರೂ ಸುಸ್ತು ಅಂತ ಅನ್ಸಲ್ಲ.. ಏಕೆಂದರೆ ಪ್ರತಿ ಹೆಜ್ಜೆಗೂ ನನ್ನ ಜೊತೆ ಹೆಜ್ಜೆ ಇಡೋ ಇವನ ಪ್ರೀತಿ ಎಲ್ಲಾನು ಮರೆಸುತ್ತದೆ. ಪ್ರತಿ ದಿನ ನಾ ಸ್ನಾನಕ್ಕೆ ಹೋದಾಗ್ಲು ಕೂಡ ನನ್ನ ಜೊತೆ ಬರ್ತಾನೆ... ಇವನು ಮಲಗೋದು ಕೂಡ ನನ್ನ ಪಕ್ಕದಲ್ಲೇ. ತನಗೆ ನಿದ್ದೆ ಬಂದಿಲ್ಲ ಅಂದ್ರು ನಾನು ಎಳೋವರೆಗೂ ಪಕ್ಕದಲ್ಲೇ ಇರ್ತಾನೆ. ನನಗೆ ಎಚ್ಚರ ಆಗಿದೆ ಆದ್ರೂ ಸುಮ್ನೆ ಮಲಗಿದಿನಿ ಅಂತ ಗೊತ್ತಾದ್ರೆ ಮಾತ್ರ ಎಳ್ಸೋತನಕ ಬಿಡಲ್ಲ. ಮನೇಲಿ ಯಾರಿಗಾದ್ರು ಹುಷಾರಿಲ್ಲ ಅಂದ್ರೆ ನಾವು ಹೇಳೋದೇ ಬೇಡ ಅವನೇ ಅರ್ಥ ಮಾಡ್ಕೊಂಡು ತೊಂದ್ರೆ ಕೊಡದೆ ದೂರ ಇರ್ತಾನೆ.
ಯಾವುದಕ್ಕೆ first priority ಕೊಡ್ಬೇಕು ಅಂತ ತುಂಬಾ ಚೆನ್ನಾಗಿ ಗೊತ್ತು ಇವನಿಗೆ. ಅಮ್ಮ ನಮಿಗೇನಾದ್ರು snacks ಕೊಟ್ರೆ ಅವನಿಗೆ beans, pedegree ಕೊಡ್ತಾರೆ. ಆದ್ರೆ first ನಮ್ಮ ಹತ್ರ ಹಟ ಮಾಡಿ ತಿಂಡಿ ಇಸ್ಕೊಂಡು ಆಮೇಲೆ ತನಿಗೆ ಕೊಟ್ಟಿರೋ items ಹೇಗಿದ್ರು ತನಿಗೆ ಅಂತ ತಿಂತಾನೆ. ನಮ್ಮ ಅಮ್ಮನಿಗೆ ತುಂಬಾ ಚೆನ್ನಾಗಿ blackmail ಮಾಡ್ತಾನೆ. ಏನಾದ್ರು ಸಾಮಾನು ಎತ್ಕೊಂಡು ಹೋಗಿ ದೂರದಲ್ಲಿ ಇಟ್ಕೊಂಡು ಕೂತ್ಕೊತಾನೆ. ಅಮ್ಮ biscuit ಕೊಡೊತನಕ ಬಿಡಲ್ಲ.
ನೀರು ಮತ್ತೆ ball ಅಂದ್ರೆ ತುಂಬಾ ಇಷ್ಟ. ಸುಮಾರು 10 -12 ball ಹಾಳುಮಾಡಿದ್ದಾನೆ. ಈಗ steel ಚೊಂಬು, ತೆಂಗಿನಕಾಯಿನೆ ಅವನಿಗೆ ball. ಕಾಲೇಜ್ ಗೆ ಹೋಗ್ಬೇಕಿದ್ರೆ ಸುಮ್ನೆ ಇರ್ತಾನೆ. ಮನೆ ಹತ್ರ ಹೊರಗೆ ಹೋದ್ರೆ ಅದು ಹೇಗೆ ಅರ್ಥ ಆಗತ್ತೋ ಗೊತ್ತಿಲ್ಲ ಕೂಗಾಡ್ತಾನೆ. ಇವನು ಕೂಡ special ನೆಲದ ಮೇಲೆ ಏನಾದ್ರು ಹಾಸಿದರೆ ಮಾತ್ರ ನೆಲದ ಮೇಲೆ ಕೂರೋದು. chair mele ಶಿಸ್ತಿಂದ ಕುತ್ಕೊತಾನೆ. ಮಲಗಲಿಕ್ಕೆ ಹಾಸಿಗೆ ದಿಂಬು ಬೇಕು... ಇರಲಿಲ್ಲ ಅಂದ್ರೆ ಮಂಚದ ಪಟ್ಟಿನೆ ಅವನಿಗೆ ದಿಂಬು.
ನನ್ನ Rockey ಗೆ pinky ಅಂದ್ರೆ ತುಂಬಾ ಸಿಟ್ಟು. ಹಾ. .. Pinky, Minni ಇವರ ಬಗ್ಗೆ ನಾನು ಹೇಳಲೇ ಬೇಕು. ಇವರದು ತುಂಬಾ ದೊಡ್ಡ ಕುಟುಂಬ. ಒಂದು ವಾಮರ ಸೈನ್ಯನೇ ಮನೆಗೆ ಬರತ್ತೆ. ಒಂದು ವಿಚಿತ್ರ ಅಂದ್ರೆ ಎಲ್ಲರ ಮನೇಲಿ ಕದ್ದು ರಂಪ ಮಾಡಿ ಬಾರೋ ಇವರು ನಮ್ಮ ಮನೆಗೆ ಬಂದು ಶಬ್ದ ಮಾಡಿ ನಾವು ಬಂದಿದಿವಿ ಅಂತ signal ಕೊಡ್ತಾರೆ. Rockey ಗೆ ಗೊತ್ತಿಲ್ಲದಹಾಗೆ ಚಪಾತಿ ಕೊಡ್ತೀನಿ ಗೋರ್ .. ಅಂದ್ರೆ thanks ಹೇಳಿ ಹೋಗ್ತಾರೆ. Rockey Pinky, Minni ಬಂದಿದಾರೆ ಅಂದ್ರೆ ಓಡಿ ಹೋಗಿ terrase ನೋಡಿ ಓಡಿಸಲಿಕ್ಕೆ ಹೋಗ್ತಾನೆ.
Beans, water melon,pedigree, egg, cake, bone stick ಅಂದ್ರೆ ತುಂಬಾ ಇಷ್ಟ. ಇವನ ಬಗ್ಗೆ ಸಾಮಾನ್ಯವಾಗಿ ಎಲ್ರಿಗೂ ಗೊತ್ತು. ನನಿಗೆ ಯಾರೇ ಫೋನ್ ಮಾಡ್ಲಿ ಇವನ ಬಗ್ಗೆ ಕೇಳ್ದೆ ಇರಲ್ಲ.
ಮನೇಲಿ ಎಲ್ರೂ ಯಾಕೆ ತಂದೆ ಅಂತ ಬೈತಿದ್ರು. ಆದ್ರೆ ಎಲ್ಲರ ಮನಸ್ಸು ಒಲಿಸುವುದರಲ್ಲಿ ಯಶಸ್ವಿಯಾದ ನನ್ನ Rockeyಗೆ ಬೇರೆ ಹೆಸರು ಇಡಲಿಕ್ಕೆ ನನಗೂ ಮನಸ್ಸಿರಲಿಲ್ಲ. ನಾವಿಬ್ಬರು ಎರಡು ದೇಹ ಒಂದು ಜೀವ ಅಂತಾನೆ. ಒಬ್ಬರನ್ನೊಬ್ಬರು ಅರ್ಥಮಾಡ್ಕೋ ಬೇಕು ಅಂದ್ರೆ communication ತುಂಬಾ important ಅಂತಾರೆ. ಆದರೆ ನಮ್ಮ ನಡುವಿನ ಬಂಧನಕ್ಕೆ ಯಾವ language ಅವಶ್ಯಕತೆಯೂ ಇಲ್ಲ. ನನ್ನ ಉಸಿರಾಗಿ ನನ್ನ ಪ್ರತಿ ಹೆಜ್ಜೆಗೂ ಸಾತ್ ಕೊಡ್ತಿದ್ದಾನೆ. ಎಲ್ರೂ ಸಾಮಾನ್ಯವಾಗಿ ಪ್ರತಿ ದಿನ ಜೋತೆಲಿದ್ರೆ ಪ್ರೀತಿ ಕಡಿಮೆ ಅದರ ಅರಿವು ದೂರ ಇದ್ದಾಗ ಮಾತ್ರ ಗೊತ್ತಾಗೋದು ಅಂತಾರೆ. ಆದ್ರೆ ನಮ್ಮಿಬ್ಬರ ವಿಷಯದಲ್ಲಿ ಇದು not applicable. ನನಗೆ ಮತ್ತೆ ಜೀವ ತುಂಬಿದ ನನ್ನ Lucy ಗೆ ಎಷ್ಟು thanks ಹೇಳಿದ್ರು ಕಡಿಮೆ.
Thanks a lot Lucy... Love you....
ಪ್ರತಿ ಸಲವೂ ಏನಾದ್ರು wish ಕೇಳಬೇಕು ಅಂದ್ರೆ ನಾನು ಕೇಳೋದು ಮಾತ್ರ ಒಂದೇ ಒಂದು ... ಸಾವು ಅನ್ನೋದು ಸಹಜ ಅದು ಈಗಲಾದರು ಬರಲಿ ಯಾವಗ್ಲಾದ್ರೂ ಬರಲಿ ಹೆದರಿಕೆ ಇಲ್ಲ ಆದ್ರೆ ನಾನು ಮತ್ತೆ ನನ್ನ Rockey ಇಬ್ರು ಒಟ್ಟಿಗೆ ಚಿರನಿದ್ರೆಯಲ್ಲಿರಬೇಕು ಅಂತ.
ಯುಗ ಯುಗಗಳೇ ಸಾಗಲಿ...ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ... ನಮ್ಮ ಪ್ರೀತಿ ಶಾಶ್ವತ
ರವಿ ಸಾಗರ ಕೆರಳಲಿ ... ನಮ್ಮ ಪ್ರೇಮ ಶಾಶ್ವತ...
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ...