ಜೀವನ????
ಎಲ್ರೂ ಜೀವನಾನು ನಾಲ್ಕರಿಂದ ಶುರುವಾಗಿ ಎಂಟಕ್ಕೆ ಮುಕ್ತಾಯ ಆಗತ್ತೆ... ಇದ್ನೇ ಜೀವನ ಅನ್ನೋದು...
ಎನ್ ಮಾರಯ್ರೆ... ಇದ್ನೇ ಅರ್ಥ ಮಾಡ್ಕೊಳಿಲ್ಲ ಅಂದ್ರೆ ಇದು ಒಂದು ಜೀವನಾನ... ಹಾಗಂತ ಹೇಳಿ ನಿಮ್ಮ
ಜೀವನದಲ್ಲಿ ಬೇಜಾರ್ ಮಾಡ್ಸಿದ್ರೆ ನಂಮ್ದೂ ಒಂದು ಜೀವನಾನ ಅನ್ಸತ್ತೆ... ಹಾಗಾಗಿ ನಾವು ನೇರವಾಗಿ ಜೀವನಕ್ಕೆ
ಬರೋಣ... ಏನಂತೀರಾ..?
ಜೀವನ ಅಂದ್ರೆ ಏನು??? ಉತ್ತರ ಮಾತ್ರ ಎಲ್ರಿಂದಾನೂ ಸಿಗತ್ತೆ... ಆದ್ರೆ ಯಾವುದನ್ನೂ ತಪ್ಪು ಅಂತ
ಹೇಳೋಹಾಗಿಲ್ಲ... ಯಾಕಂದ್ರೆ ಎಲ್ರೂ ಉತ್ತರಾನೂ ಒಂದ್ರೀತಿ ಸರೀನೆ... ಅಂದ್ರೆ ಅವರವರ ಅಭಿಪ್ರಾಯದಂತೆ
.. ಸರೀನೆ... ನೀವ್ tension ಮಾಡ್ಕೋಬೇಡಿ... ಯಾರ್ ಏನೇ ಹೇಳ್ಲಿ
ನಾನ್ ನಿಮ್ಗೆ ಎಲ್ರೂ ಒಪ್ಪೊಅಂತ ಉತ್ತರಾನೇ ಹೇಳ್ತೀನಿ...
ಸರಳವಾಗಿ ಹೇಳ್ಬೇಕು ಅಂದ್ರೆ ಅಂಬೆಗಾಲಿಟ್ಕೊಂಡು ನಾಲ್ಕ್ ಜನ ಹೊತ್ಕೊಂಡು ಹೋಗೊವರೆಗೂ ನಾವು ಸಾಗಿ
ಬಂದ ಹಾದಿನೇ ... ಜೀವನ ಅನ್ನೋದು.
ಏನೇ ಅಂದ್ರೂ ನಾವು ಸಾಗೋ ಹಾದಿಲಿ ಕಾಲಚಕ್ರ ಉರುಳಿದಹಾಗೆ ಜೀವನದ ಬಗ್ಗೆ ನಾವು ಕೊಡೊ ಉತ್ತರಾನೂ
ಕೂಡ ಬೇರೆಯಾಗಿರತ್ತೆ... ನಿಜತಾನೆ...?
ಜೀವನದ ಬಗ್ಗೆ ಸಾಮನ್ಯವಾಗಿ ಯೋಚನೆ ಬರೋದು ಗಂಡು ಮಕ್ಕಳಿಗೆ ಮೀಸೆ ಚಿಗುರಿದಾಗ... ಹೆಣ್ಣು ಮಕ್ಕಳು
ನಾಚ್ಕೊಳೊಕೆ ಶುರು ಮಾಡ್ದಾಗ... ಈಗಿನ ಕಾಲದಲ್ಲಿ ... ಅಯ್ಯೊ ಹೋಗ್ಲಿಬಿಡಿ... ಹೆಣ್ಮಕ್ಳು ನಾಚ್ಕೊಳಲ್ಲಾ ಅಂದ ಮಾತ್ರಕ್ಕೆ ಜೀವನದ ಬಗ್ಗೆ ಯೋಚನೆ ಮಾಡಲ್ಲಾ
ಅಂತ ಅಲ್ಲಾ ... ಈ ಗಂಡ್ಮಕ್ಳಿಗೆ ಮೀಸೆ ಬರೋ ವಯಸ್ಸಿದ್ಯಲಾ
ಅದೇ ವಯಸ್ಸಿಗೆ ಇವರೂ ಯೋಚನೆ ಮಾಡ್ಲಿಕ್ಕೆ ಶುರು ಮಾಡೊದು.
ಜೀವನದಲ್ಲಿ ಪ್ರತಿಯೊಬ್ರೂ ಮರಳಿ ಪಡೆಯಬಯಸುವ ಅಮೂಲ್ಯವಾದ ಕ್ಷಣ ಅಂದ್ರೆ... ಯಾಕೆ... ಏನ್ ಯೋಚ್ನೆ
ಮಾಡ್ತಿದಿರಾ... ಪಕ್ಕದ ಮನೆ ಮಾವಿನ ಮರ ಹತ್ತಿ ಕಾಯಿ ಕದ್ದಿದ್ದಾ... ನೆವ ಹೇಳಿ ಶಾಲೆಗೆ ಚಕ್ಕರ್
ಹಾಕಿ ಚಡ್ಡಿದೋಸ್ತ್ ಜೊತೆ ಚಿನ್ನಿ-ದಾಂಡ್ ಆಡಿ ಕಿಡಕಿ ಗಾಜ್ ಮುರ್ದಿದ್ದಾ.. . ಹಲೋ... ಮುಂದೆ ನಾ
ಬರ್ದಿರೋದು ಓದೋದು ಬಿಟ್ಟು ಮರಳಿ ಬಾಲ್ಯಕೆ ಅಂತ flash back ಹೋಗ್ಬಿಟ್ರಾ...
ಇನ್ನೂ ಈಗ ಶುರು ಮಾಡಿದೀನಿ... ನಾನ್ ಮುಗ್ಸಿದ್ ಮೇಲೆ ನೀವ್ ಶುರು ಮಾಡ್ಕೋಳಿ ಬೇಡ ಅನ್ನಲ್ಲಾ...
ಯಾಕಂದ್ರೆ... ಫಿಲ್ಮ್ ತರ ಮೂರು ಗಂಟೇಲಿ ನಿಮ್ lifelife ನ ಬಾಲ್ಯ ಖಂಡಿತ ಮುಗಿಯಲ್ಲಾ ಅಂತ
ನಂಗೊತ್ರೀ... ಒಂದು ಮಾತಂತೂ ನಿಜ ... ಆ ವಯಸ್ಸಿನಲ್ಲಿ ನಾವು ಯಾವತ್ತಾದ್ರೂ ಜೀವನದ ಬಗ್ಗೆ ಯೋಚನೆ
ಮಾಡಿದೀವಾ... ಖಂಡಿತಾ ಇಲ್ಲಾ...
ಮೊದ್ಲಿಗೆ ನಾನು ಜೀವನದ ಬಗ್ಗೆ ಒಬ್ಬೊಬ್ರುದು ಒಂದೊಂದು ಉತ್ತರ ಇರತ್ತೆ ಅಂತ ಹೇಳಿದ್ದೆ ಅಲ್ವಾ...
ಆದ್ರೆ ಎಲ್ರಿಂದಾನೂ ಒಂದೇ ಉತ್ತರ ಸಿಗೋದು ಇನ್ನೂ
ಈ ಮೀಸೆ ಬರ್ದೆಇರೊ .... ಮುಗ್ದ ಮಕ್ಕಳಿಂದ... ಉತ್ತರ ಏನಿರ್ಬೊದು ಅಂತ ಯೋಚ್ನೆ ಮಾಡ್ತಿದಿರಾ...
ಅಷ್ಟೆಲ್ಲಾ ತಲೆಕೆಡ್ಸ್ಕೊಬೇಡ್ರೀ... ಮಕ್ಕಳು ಯಾವಾಗ್ಲೂ ಸರಳವಾಗೇ ಉತ್ತರ ಕೊಡ್ತಾರೆ...
“”ಗೊತ್ತಿಲ್ಲಾ............” “ ಅಪ್ಪ ಅಮ್ಮಾನೂ ದಿನಬೆಳಗಾದ್ರೆ ಜೀವನ... ಜೀವನ... ಜೀವನ...
ಅಂತಾನೇ ಇರ್ತಾರೆ ... ದಿನಾ ಅವರ ಮಾತು ಕೆಳಿದ್ರೂ ಅರ್ಥ ಆಗಲ್ಲ ಇನ್ನೇನ್ ಹೇಳ್ತಾರೆ... ಹೋಗ್ಲಿ ಬಿಡಿ...
ಇದೇ ಕುಡಿ ಬೆಳೆದು ಗಿಡವಾಗಿ .... ಹೆಮ್ಮರವಾಗಿ
ನೆಲಕ್ಕುರುಳುವ ಕಾಲಕ್ಕೆ ತಾನು ನಡೆದುಬಂದ ಹಾದಿಯಲ್ಲಿ ತಾನು ನಿರ್ಲಕ್ಷಿಸಿದ ಮಧುರ ಕ್ಷಣಗಳಿಗೆ ಪರಿತಪಿಸುವುದು...
ಈ ಶರವೇಗದ ಜೀವನನೂ ಒಂದು ಜೀವನಾನ???
ಪ್ರತಿಯೊಬ್ಬರಿಗೂ ಅವರದೇ ಆದ ಜೀವನ ಅಂತಿದೆ... ಬೇರೆಯವರ ಜೀವನ ನೋಡಿ ತಾನು ಹಾಗೆ ಇರಬೇಕೆನ್ನುವ
ಮೂರ್ಖತನದ ಜೀವನ ನಮ್ಮದಾಗಬಾರದು. ನಮ್ಮ ಜೀವನದ ಅವಧಿನ
ಕಾಲದಲ್ಲಿ ... ವರ್ಷದಲ್ಲಿ ಅಳೆಯೊದಕ್ಕಿಂತ ಎರಡು ಕ್ಷಣ ಸಿಗೋ ಖುಷಿಲಿ ಜೀವನ ಸಾಗಿಸೋದಿದೆಲಾ ಅದೇರಿ
ನಿಜವಾದ ಜೀವನ... ನಾವು ನಮ್ಮ ಖುಷಿಗೋಸ್ಕಾರ ನಾವ್ ಜೀವನ ಮಾಡ್ಬೆಕು... ಹಲೋ... ಸ್ವಲ್ಪ ಬೇರೆ ಅವರ
ಖುಷಿ ಬಗ್ಗೆನೂ ಗಮನ ಇರಲಿ... ಆಗ್ಲೇ ನಮ್ಮ ಜೀವನಕ್ಕೆ ನಿಜವಾದ ಅರ್ಥ ಬರೋದು. ಜೀವನದಲ್ಲಿ ಖುಷಿನ
ಹುಡುಕೊ ಪ್ರಯತ್ನ ಮಾಡದೇ ಪ್ರತಿ ಕ್ಷಣಾನೂ ನಿಮಗಾಗಿ ನಿಮ್ಮವರಿಗಾಗಿ ಬಾಳಿ...
ಏನೋ ನನಗನ್ಸಿದ್ನಾ ಹೇಳಿದೀನಿ... ಜೀವನ ಅಂದ್ರೆ ಏನೂಂತ ಅರ್ಥ ಮಾಡ್ಕೊಳೊ ಯೋಚನೆನೇ ಜೀವನಾ ಆಗ್ದೆ...
ಜೀವನದ ಹಾದಿಯಲಿ ಕಳೆದ ಮಧುರ ಕ್ಷಣಗಳು ನಿಮ್ಮ ಬಾಳಿಗೆ ಜೀವನದ ಸ್ಪೂರ್ತಿಯಾಗಿರಲಿ...
ಕೊನೆಲಿ ಒಂದು ಮಾತು...
ಜೀವನದ ಬಗ್ಗೆ ತುಂಬಾ ಯೊಚನೆ ಬರ್ತಿದಿಯಾ...
ಇದೇರೀ.... ನೀವ್ ಮಾಡೊ ದೊಡ್ಡ ತಪ್ಪು... ಏನೊ ನನಿಗನ್ಸಿದ್ ನಾ ಬರ್ದೆ... ನೀವೂ ಓದಿದ್ರೀ... ಏನೇನೊ ಯೊಚ್ನೆ ಮಾಡಿ ಜೀವನಾನೆ ಯೊಚನೆಯಾಗದೆ ಪ್ರತಿ ಕ್ಷಣಾನೂ
ನಿಮ್ಮ ಬಾಳಿನ ಖುಷಿಲಿ ಸಾಗಿ... ಬಿಂದಾಸ್ ಆಗಿರಿ... ಅದೇರಿ ನಿಜವಾದ ಜೀವನ... ಅರ್ಥ ಮಾಡ್ಕೊಬಾರ್ದು...
ಅರ್ಥ ಹುಡುಕ್ಬಾರ್ದು... ಅನುಭವದ ಪ್ರತಿ ಮೆಟ್ಟಿಲು ನಮ್ಮ ಜೀವನವಾಗಬೇಕು... ಏನಂತೀರಾ...????