ಓ ಮನಸೇ ... ಓ ಮನಸೇ ...
ಎಲ್ಲರಲೂ ನೀನಿರುವೆ,
ಹೇಗಿರುವೆ ಎಲ್ಲಿರುವೆ ನಾನಂತೂ ಅರಿಯೆ...
ಸುಖ ದುಃಖದ ಕನ್ನಡಿಯು ನೀನು...
ಆಸೆ ನಿರಾಸೆಯ ಕುಡಿ ಚಿಗುರುವುದು ನಿನ್ನಲಿ...
ಚಿಗುರೊಡೆದ ಅನುಭವವ ನಾ ಕಂಡೆ...
ನೀ ಎಲ್ಲಿರುವೆ ಓ ಮನಸೇ...
ಎಲ್ಲದಕು ಕಾರಣನು ನೀನು
ಪ್ರೀತಿ ವಿಶ್ವಾಸದ ಬೆಸುಗೆಯು ನೀನು
ನೀನು ಹೇಗಿರುವೆ ನಿನ್ನ ರೂಪವಾದರು ಏನು ?
ಕವಿಯು ಬಣ್ಣಿಸಿಹನು ನಿನ್ನ ನಾನಾ ರೂಪ
ಹೂವಾಗಿಹೆ ... ಮಗುವಾಗಿಹೆ ... ಕಲ್ಲಾಗಿಹೆ ಕವಿಯ ಕವನದಲಿ...
ಕವಿಯ ಕವನದಲಿ ನಿನ್ನ ಕಂಡರೂ ... ನಾ ಕಾಣಬಯಸುವೆ ನಿನ್ನ ನಿಜ ರೂಪ...
ಓ ಮನಸೇ ... ಓ ಮನಸೇ ...
ಎಲ್ಲಿರುವೆ ... ಹೇಗಿರುವೆ ... ನಾನಂತೂ ಅರಿಯೆ..
No comments:
Post a Comment