ಕಾಕ್ಟೇಲ್ ಆಫ್ ಮೈ ಲೈಫ್
ಮಧ್ಯರಾತ್ರಿ 12 ಗಂಟೆ ಸಮಯ...!!! ಯಾರೋ ಜೋರಾಗಿ ಬಾಗಿಲು ತಟ್ಟಿದ ಶಬ್ದ... ಎಲ್ಲರ
ನಿದ್ರೆಗೆ ಬ್ರೇಕ್ ಹಾಕಿ ಹೃದಯ ಬಡಿತ ಜೋರಾಗಿಸಿತ್ತು.
ಅಣ್ಣ ಕಿಡ್ಕಿನಲ್ಲಿ ನೋಡಿ
ನಿನ್ನ ಫ್ರೆಂಡ್ಸ್ ಬಂದಿದಾರೆ ಅಂದ...
ಇಷ್ಟೊತ್ನಲ್ಲಾ….!!!? ಅದೇ
ನನ್ನ ಎರಡ್ ತರ್ಲೆ ಗುರು – ಶ್ಯಾಮ ಅಂತ ಮನ್ಸು ಹೇಳ್ತಿತ್ತು… ಎದ್ದು ಬಾಗಿಲು ತೆಗಿದ್ರೆ… ಅದೇ ತರ್ಲೆಗಳು
ನನ್ನೆದ್ರಿಗೆ ನಿಂತಿದ್ರು… ಇವ್ರಿಬ್ರನ್ನ ನೋಡಿದ್ ಖುಷಿಲಿ ಏನ್ ಹೇಳ್ಬೇಕು ಅಂತಾನೇ ತೋಚ್ಲಿಲ್ಲಾ…
“Happy
Birthday to you... Happy Birthday to you... Happy Birthday to you dear Guddi” ಅಂತ ಇವ್ರಿಬ್ರು ಹಾರೈಸಿದ್ದೇ ತಡ ಎಲ್ಲಿದ್ನೋ ಏನೋ ಮಳೆರಾಯ ಖುಷಿ ತಡಿಲಿಕ್ಕಾಗ್ದೆ ನಮ್
ಜೊತೆ ಸೇರಿದ್ದ... ಈ ಸಲ ಮಳೆರಾಯಾನೋ ಇನ್ ಯಾವತ್ತೂ ಮಳೆ ಬೇಕು ಅನ್ಬಾರ್ದು ಅನ್ನೊ ರೀತಿ
ಸುರಿತಿದ್ದ… ಇಂಥ ಮಧುರ ಕ್ಷಣ ನನ್ ಲೈಫ್ನಲ್ಲಿ ನನಿಗೆ ಸಿಕ್ಕಿದ್ದು ಇದೇ ಮೊದ್ಲು... J ಜೀವಕ್ಕೆ ಜೀವ ಕೊಡೊ ಇವ್ರನ್ನಾ ಪಡೆದ
ನನ್ಗೆ ನಿಜವಾಗ್ಲೂ ಹೆಮ್ಮೆ ಅನ್ಸತ್ತೆ…
ಇಷ್ಟೊತ್ನಲ್ಲಿ ಹಾಗೆ wish ಮಾಡಿ ಹೋಗೋರಲ್ಲಾ ಅಂತ ಗೊತ್ತಿತ್ತು... ಆದ್ರೆ ಕೈನಲ್ಲಿ ಏನೂ
ಇಲ್ದೆಇರೋದ್ ನೋಡಿ ಎಲ್ಲೊ ಒಂದ್ಕಡೆ ಸಮಾಧಾನ ಇತ್ತು...
ಅಷ್ಟ್ರಲ್ಲಿ ನನ್ನ ಕಣ್ಣಿಗೆ ಕ್ರೋಟಾನ್
ಗಿಡದ ಪಕ್ಕ ಏನೋ ಬಿಳಿ ಕವರ್ ಕಾಣಿಸ್ತು... ಸಮಾಧಾನವಾಗಿದ್ದ ನನ್ಗೆ ಮತ್ತೆ ಭಯ ಶುರುವಾಯ್ತು.
ಕೇಕ್ ಕವರ್ ಕಣ್ರೀ ... ಇವ್ರು ತಿನ್ಸೊದ್ಕಿಂತ ಮೆತ್ತೊದ್ಕೆ ತಂದಿದಾರೆ ಅಂತ confirm ಆಯ್ತು. ಕೇಕ್ ಕಟ್ ಮಾಡಿ ಒಬ್ರಿಗೊಬ್ರು
ತಿನ್ಸಿದ್ದಷ್ಟೆ ಗೊತ್ತು... ಇಬ್ರು ಸೇರಿ ನನ್ಗೆ jam ಹಚ್ಚಿದ್
ಬ್ರೆಡ್ getup ಕೊಟ್ಟಿದ್ರು...
ಒಂಟಿ ಗುಬ್ಬಿ...L ಎರಡ್ ಜಿಮ್ ಮಾಡಿ ಬೆಳ್ಸಿರೋ ಈ ಘಟಾನ್ ಘಟಿಗಳಿಗೆ ಏನ್ ಮಾಡಿರತ್ತೆ
ಅನ್ಕೊಂಡ್ರಾ... ಹೂಂ ನಾವು ನಮ್ ತಂಟೆಗ್ ಬಂದೋರ್ನಾ ಹಾಗೆ ಬಿಡೋ ಜಾಯ್ಮಾನ್ದೋರೇ ಅಲ್ಲಾ ಕಣ್ರೀ...
ಸುತ್ತಿ ಬಳ್ಸಿಯಾಕ್ರೀ? ಇದುವರ್ಗೂ ನಂಗ್ ಕೇಕ್ ಮೆತ್ತೊಕ್ ಬಂದೋರು ನನ್ನ ಒಂದ್ ಆವಾಜ್ ಗೆ
ಸುಮ್ನಾಗಿದ್ರು... ಆದ್ರೆ ಇವತ್ತು ಈ ತರ್ಲೆಗಳು ಮಾಡಿದ್ದು ನನಿಗ್ ಇಷ್ಟಾ ಇಲ್ದೆ ಇರೋದಾದ್ರು...
ಇವರ ಪ್ರೀತಿ - ವಿಶ್ವಾಸ ಆವಾಜ್ ಹಾಕೊ ಯೋಚ್ನೆ ಮಾಡಕ್ಕೇ ಬಿಡ್ಲಿಲ್ಲಾ... ಇದೇ ಕಣ್ರೀ ನಿಜವಾದ
ಪ್ರೀತಿ...J ಇಲ್ಲಿ ಇಷ್ಟ - ಗಿಷ್ಟ ಅನ್ನೋ ಪ್ರಮೇಯಾನೇ ಬರಲ್ಲಾ... ಹಾಗಂತ
ಮೂರ್ನೆ ತರ್ಲೆ ನಾನ್ ಸುಮ್ನಿರ್ತೀನಾ... ಆ ಎರ್ಡ್ ತರ್ಲೆಗಳ್ಗೂ ನನ್ getup ಕೊಡೋದ್ರಲ್ಲಿ ಒಂದ್ rangeಗೆ success ಆಗಿದ್ದೆ... J
ಹೂಂ ... ಹಚ್ಚೋದೇನೋ ಹಚ್ದೆ... ಆದ್ರೆ ಕೊನೆಗೆ ನಾನೆ ಆ ತರ್ಲೆಗಳ್ಗೆ
ಸ್ನಾನ ಮಾಡ್ಸೋ ಹಾಗಾಯ್ತು... ಅಯ್ಯೋ ನನ್ಗೇನ್ ಕಷ್ಟ ಆಗ್ಲಿಲ್ಲಾ ಬಿಡಿ... ನನ್ ರಾಖಿಗೆ ನಾನೆ
ಸ್ನಾನ ಮಾಡ್ಸೋದಾ... ಇವ್ರೇನು ಅನ್ಸ್ತು... ಪಾಪ ರಾಖಿ ತರ್ಲೆ ಮಾಡ್ದೆ descent ಆಗಿರ್ತಿದ್ದ...
ಆದ್ರೆ ಈ ಕಪಿಗಳು ಅಲ್ಲೂ ನೀರೆರ್ಚಾಡ್ಲಿಕ್ಕೆ ಶುರು ಮಾಡಿದ್ರು... ಮುಖಕ್ಕೆ ಸೀಗೆಪುಡಿ
ಹಚ್ಕೊಂಡಿದ್ದ ಗುರು ಸ್ವಲ್ಪ ಹೊತ್ತು ಕಣ್ ಬಿಡ್ಲಿಕ್ಕಾಗ್ದೆ ಸುಮ್ನಿದ್ದಾ... ಪಕ್ದಲ್ಲೆ ಇದ್ದ
ನಾವು silent ಆಗಿ
ಅವ್ನನ್ನೇ ನೋಡ್ತಿದ್ವಿ... ಏಯ್ ... ಏಯ್ ... ಏನಾಯ್ತ್ರೋ... ಯಾರೂ ಏನೂ ಮಾತಾಡ್ತಿಲ್ಲಾ...
ನನ್ಗೇನೂ ಕಾಣ್ಸ್ತಿಲ್ಲಾ... ನೀರ್ ಹಾಕ್ರೋ... ಅಂದ... ಪಾಪ ಗುರುಗೆ ಒಳ್ಳೆ ಪೀಕ್ಲಾಟ
ಆಗಿತ್ತು ... ಆದ್ರೆ ಆ ಸೀನ್ ನೋಡಿದ್ ನಮಿಗ್ ಮಾತ್ರ ಮಸ್ತ್ ಕಾಮಿಡಿಯಾಗಿತ್ತು... ಯಾರಿಗ್ ಸಿಗತ್ರಿ ಇಂತ ಅದ್ರುಷ್ಟ...
JJJ
ಮುಖಕ್ಕೆ ನೀರ್ ಹಾಕಿದ್ಮೇಲೆ ಅಯ್ಯೊ ನಿನ್ ಕೈನಾ ... ನಾನೆಲ್ಲೊ ರಾಖಿ
ಅನ್ಕೊಂಡೆ ಅಂದ... ಇಷ್ಟ್ ಭಯ ಇರ್ಬೇಕ್ರೀ... ನನ್
ರಾಖಿ ಅಂದ್ರೆ ಜಿಮ್ ಮಾಡಿ ಬೆಳ್ಸಿರೋ ಎಂಥಾ ದೇಹಾನೂ ನಡ್ಗತ್ರೀ...
ಫ್ರೆಶ್ ಆಗಿ ಸ್ನಾನ ಮಾಡ್ಕೊಂಡು ಮೀಟ್ರ್ ಹೊಡಿತಿದ್ವಿ... ಅಷ್ಟೊತ್ಗೆ ಶ್ಯಾಮ - ಗುರು
ಏನೋ ತೋರ್ಸ್ತೀನಿ ಅಂದ್ಯಲೊ ಅಂದ ... ಈ ನಮ್ ತರ್ಲೆ ಆಟದಲ್ಲಿ ಒಂದು ಜೀವ ನೀರಲ್ಲಿ ಬಿದ್ದು
ಒದ್ದಾಡ್ತಿರೋದು ನಮ್ಗಳಿಗೆ ಗೊತ್ತೇ ಆಗ್ಲಿಲ್ಲಾ... ಆಗ್ಲೇ ಗುರುಗೆ ಗೊತ್ತಾಗಿದ್ದು ಕಳೆದ ಎರಡ್
ತಿಂಗ್ಳ ಹಿಂದಷ್ಟೇ ಸದಾ ಅವ್ನ ಜೊತೆಗಿದ್ದ ಒಂದು ಜೀವಕ್ಕೆ ಏನೂ ಆಗ್ಬಾರ್ದು ಅಂತ ಒಂದು safe place ಅಲ್ಲಿ ಬಿಟ್ಟಿದ್ದೆ ಅಂತ... ಆದ್ರೆ ಆ ಜಾಗ ಎಷ್ಟು safe ಆಗಿತ್ತು
ಅಂದ್ರೆ... ಆ ಜೀವ ಸುಮಾರು ಒಂದ್ ಗಂಟೆ ನೀರಲ್ಲಿ
ಈಜ್ತಾ.. ಈಜ್ತಾ... ಮಂದಹಾಸ ಬೀರ್ತಾ ಸೂರ್ಯನ levelಗೆ ಬೆಳಕ್
ಕೊಡ್ತಾ ಕೋಮ ಸ್ಟೇಜಲ್ಲಿತ್ತು. ಆ ಜೀವಾನ ಉಳ್ಸೋಕೆ ಇವ್ರು ಪಟ್ಟ ಸಹಾಸ ಅಷ್ಟಿಷ್ಟಲ್ರೀ...
ಶ್ಯಾಮ three fin air blower ನ ಒಂದೇ ಕೈನಲ್ಲಿ
ಹಿಡ್ಕೊಂಡು ಸುಮಾರ್ ಹೊತ್ತು ಒಣಗ್ಸ್ದ ... ಬಿಸಿ ಮಾಡಿದ್ರೆ ಸರಿ ಹೋಗತ್ತೆ ಅಂತ 60 ಹಾಕಿನೂ ಟ್ರೈ
ಮಾಡ್ದ ... ಆದ್ರೆ ಆ ಜೀವ table fan, 60 volt bulb heatಗೂ ಮಿಸ್ಕಾಡ್ದೆ ಚಮ್ಮಕ್ ಚಲ್ಲೊ... ತರ ಫೋಸ್ ಕೊಟ್ಟು ಕಣ್ಣಿಗೆ
ಕುಕ್ತಿತ್ತು...
ಬೆಳಿಗ್ಗೆ ಮೂರುವರೆ ಆಗಿತ್ತು... ಗುರು ಶ್ಯಾಮ ನಾಳೆ ಬೆಳಿಗ್ಗೆ
ಸಿಗ್ತೀವಿ ಅಂತ ಆ ಜೀವಾನೂ ಕರ್ಕೊಂಡು ರಿಪ್ಪನ್ ಪೇಟೆಗ್ ಹೊರ್ಟ್ರು... ಅವತ್ತು ಭಾನ್ವಾರ
ಆದ್ರಿಂದ ಶಾಪ್ ಎಲ್ಲಾ ಕ್ಲೋಸ್ ಆಗಿತ್ತು...
ಅದ್ಕೆ ಗುರು ನಾನ್ ನಾಳೆ ಬೆಂಗಳೂರ್ ಗೆ ಹೋಗಿ checkup ಮಾಡ್ಸ್ತಿನಿ ಏನೂ ಆಗಲ್ಲಾ ಅಂದ. ಸರಿ ಅಂತ ಮೂರು ಜನ ನಮ್ ಮಾಮೂಲ್ 5 ಸ್ಟಾರ್ ಗೆ ಹೋಗಿ light, king, beautyನ order ಮಾಡಿದ್ವಿ...
ನಮ್ ಬಗ್ಗೆ ಅಪಾರ್ಥ ಮಾಡ್ಕೋಬೇಡ್ರೀ... ಸ್ವಲ್ಪ ಬಿಡ್ಸಿ ಹೇಳ್ತೀನಿ ತಾಳಿ... Light House, King Maker, Costal Beauty ಇವೆಲ್ಲಾ ನಮ್ ಶಿಮೊಗ್ಗದ ನೆಹರೂ ರೋಡ್ನ ಪಂಚತಾರದಲ್ಲಿರೋ ಐಸ್ ಕ್ರೀಮ್
brandಗಳು
ಕಣ್ರೀ... ಆ ರುಚಿ ಸವಿತಾ... ಹಳೆ ತರ್ಲೆ ನೆನ್ಪನ್ನಾ ಮೆಲ್ಕ್ ಹಾಕ್ತಾ... ಕಡೆಗೆ ಒಂದ್ fresh grapes wine ... cold coffee ಹಾಕಿ ಅಲ್ಲಿಂದ ಹೊರಟ್ವಿ...
ಮೂರು ತರ್ಲೆಗಳ ಒಂದು ಫೋಟೊ ತೆಗ್ಸ್ಕೋ ಬೇಕು ಅಂತ ನನ್
ದೋಸ್ತ್ ಶ್ಯಾಮ್ ಗೆ ತುಂಬಾ ಆಸೆ ಆಗಿತ್ತು... ಆದ್ರೆ ಎನ್ ಮಾಡೊದು Sunday holiday...
ಅನ್ನೊದಕ್ಕಿಂತ ನಮ್ ಫೋಟೊ ತೆಗ್ಯೊ ಭಾಗ್ಯ ಯಾವ್ ಸ್ಟುಡಿಯೋದೋರ್ಗೂ ಇರ್ಲಿಲ್ಲಾ ಅಂತಾನೇ ಹೇಳ್ಬೋದ್ರೀ...
ಸಣ್ಣಗೆ ಬರ್ತಿದ್ದ ಮಳೆ ಜೋರಾಯ್ತು... ಅಲ್ಲೆ
ವೆಂಕಟೇಶ್ವರ ಸ್ವೀಟ್ ಸ್ಟಾಲ್ ಹತ್ರ ನಿಂತ್ಕೊಂಡ್ವಿ... ಹೇಳ್ಬೇಕಾ.. ಸ್ಪೆಷಲ್ ಮೈಸೂರ್ ಪಾಕ್
ನಮ್ಮನ್ನಾ ರಾ... ರಾ... ಅಂತ ಕರಿತಾ ಇತ್ತು... ನನ್ ದೋಸ್ತ್ ಪಾಪ ಕರಗಿ ನೀರಾಗಿ ಏಯ್ ಬರ್ರೊ
ಒಳಗೆ ಹೋಗುವ ಅಂತ ಕರ್ಕೊಂಡು ಹೋದ... ಮೈಸೂರ್ ಪಾಕ್ ತಿಂದು, ಅಲ್ಲೆ ಶ್ಯಾಮನ mobile ಅಲ್ಲಿ photo session ಮುಗ್ಸ್ಕೊಂಡು
ಹೊರಗ್ ಬಂದ್ವಿ... ದೋಸ್ತ್ ಹಾಗೆ ಮನೆಗೆ ಹೋಗ್ತೀನಿ ಅಂದ... ಅವ್ನಿಗೆ bye ಮಾಡಿ ನಾನು
ಗುರು ಬೀರೂರ್ ಟ್ರೈನ್ ಬರೋದು ಇನ್ನೂ ಒಂದು ಗಂಟೆ ಇದೆ ಅಂತ ರೈಲ್ವೆ ಸ್ಟೇಷನ್ಗೆ ನೆಡ್ಕೊಂಡು
ಹೊರಟ್ವಿ... ಗುರುಗೆ ಟ್ರೈನ್ ಹತ್ಸಿ... ನಾನು ಮನೆಗೆ ಹೊರಟೆ... ಮೂರೂ ತರ್ಲೆಗಳು ಮನೆಗ್ ಹೋದ್ರು... ಮನ್ಸಲ್ಲಿ ಕೋಮಾದಲ್ಲಿರೊ ಜೀವ
ಬೇಗ ಮಾತಾಡೋಹಾಗ್ ಆಗ್ಲಿ ಅಂತ...
ಗುರು ಮನೆಗ್ ಹೋಗಿ ಆ
ಜೀವಕ್ಕೆ ಒಂದು dose
ಕೊಟ್ಟ ನೋಡಿ... ನನ್ನ ಅಣ್ಣನ TVS – XL ಗಾಡಿ front ಬ್ಯಾಗ್ನಲ್ಲಿ ತುಂಬ್ಕೊಂಡಿದ್ದ ಮಳೆ ನೀರ್ ಕುಡ್ಕೊಂಡು coma stageಗೆ ಹೋಗಿದ್ದ ಜೀವ full charge ಆಗಿ "am all right" ಅಂತ ನಮ್ಗೆ call ಮಾಡ್ದಾಗ ಆದ ಖುಷಿ ಅಷ್ಟಿಷ್ಟಲ್ಲಾ... J
ಹೂಂ... ಈ ಜೀವ ಗುರು ಲೈಫ್ ಗೆ ಕಾಲಿಟ್ಟು 2 ತಿಂಗ್ಳಾಗಿತ್ತು... ಸದಾ
ಅವ್ನ ಜೊತೆನೇ ಇರ್ತಿದ್ದ ಆ ಜೀವ ಬೇರೆ ಯಾರೂ ಅಲ್ಲಾ ಕಣ್ರೀ... ಅವ್ನು ಇಷ್ಟ ಪಟ್ಟು ತೊಗೊಂಡ Samsung Galaxy – S3 mobile. ಏನ್ Samsung ಅವ್ರೆ ಏನೋ ಒಳ್ಳೆ ಮೊಬೈಲ್ ಅಂತ free
of cost publicity ಕೊಟ್ರೆ... Ad cost ಕೊಡೊದಿರ್ಲಿ, ಒಂದು thanks ಕೂಡ ಇಲ್ವಲ್ರೀ... ಹೋಗ್ಲಿ ಬಿಡಿ... ನಮ್ ಕಡೆಯಿಂದ ನಿಮ್ಗೊಂದು Ad gift... ಇಟ್ಕೊಳಿ... ಮಜಾ
ಮಾಡಿ...
ಏನೇ ಹೇಳಿ ಒಂದಂತು ಸತ್ಯ ನಾವು ಎಲ್ಲೇ ಹೋದ್ರು... ಏನೇ ಎಡ್ವಟ್
ಮಾಡಿದ್ರು... ಕೊನೆಗೆ ಸಿಗೋದು ಮಾತ್ರ ಮಸ್ತ್ ಖುಷಿ... ಯಾಕಂದ್ರೆ...
“ಎಡವಟ್ ಈಸ್ ದ
ಸೀಕ್ರೇಟ್ ಆಫ್ ಅವರ್ ಖುಷಿ ಕಣ್ರೀ...
ಹೂಂ... ಓದಾಯ್ತಲ್ವಾ...
ಬೇಜಾರಾಗ್ಬೇಡ್ರೀ... ನನ್ದೊಂದು small request ... ಈ ನಮ್ಮ ಪ್ರೀತಿ ವಿಶ್ವಾಸದ ಭಾಂಧವ್ಯ ಪ್ರತಿ ಜನ್ಮದಲ್ಲಿಯೂ
ಹೀಗೆ ತರ್ಲೆ ಮಾಡ್ಕೊಂಡು ಒಟ್ಗೆ ಇರ್ಲಿ ಅಂತ ಹಾರೈಸಿ... thanks ಕಣ್ರೀ...
ಹಲೋ... ಇನ್ನೂ ಮುಗ್ದಿಲ್ಲ
ಸ್ವಲ್ಪ ತಾಳ್ರಿ...
ಕಳೆದ ವರ್ಷ ಇದೇ ಜುಲೈ 28ಕ್ಕೆ ಅಪ್ಪಂಗೆ ಹುಷಾರಿಲ್ದೆ ಆಸ್ಪತ್ರೆಗೆ ಸೇರ್ಸಿದ್ವಿ... ಅಲ್ಲಿಂದ
ನನ್ನ ಪಾಲಿಗೆ ಆಸ್ಪತ್ರೆ ಅನ್ನೊದು ಮನೆ
ಆಗಿತ್ತು. ಏನಾದ್ರು ಖುಷಿ ವಿಚಾರ ಇದ್ರೂ... ಖುಷಿಪಡ್ಲಿಕ್ಕೆ ಯೋಚಿಸ್ತಿದ್ದೆ...
ಯಾಕಂದ್ರೆ ಒಂದು ಕ್ಷಣ ಖುಷಿ ಸಿಕ್ಕಿದ್ರೆ... ಇನ್ನೊಂದು ಕ್ಷಣ ದುಃಖ ಅನ್ನೊದು ನನ್ಗೆ ಕಟ್ಟಿಟ್ಟ
ಬುತ್ತಿಯಾಗಿತ್ತು... ಖುಷಿ ಇರ್ಲಿ ... ದುಃಖ ಇರ್ಲಿ... ಗುರು - ಶ್ಯಾಮಂಗೆ phone ಮಾಡಿ ಹೇಳ್ತಿದ್ದೆ...
ಶನಿವಾರ, 19ನೇ ಜನವರಿ 2013ಕ್ಕೆ
ಬೆಳಿಗ್ಗೆ 3 ಗಂಟೆ
ಅಷ್ಟೊತ್ಗೆ ಅಪ್ಪ ಮಂಚದಿಂದ ಬಿದ್ರು... ತಲೆಗೆ ತುಂಬಾ ಏಟಾಗಿತ್ತು...
ಆಸ್ಪತ್ರೆಗೆ ಸೇರ್ಸಿದ್ವಿ... ಡಾಕ್ಟ್ರು scan ಮಾಡಿ... stitch ಹಾಕಿ ಏನೂ problem ಇಲ್ಲಾ ಅಂತ
ಹೇಳಿ ಕಳ್ಸಿದ್ರು... ಅವತ್ತು ನನ್ ದೋಸ್ತ್ ಶ್ಯಾಮ ನನ್ಗ್ ಒಂದು message ಕಳ್ಸಿದ್ದ... “Remember am always there for you...” ಅಂತ..
ಒಂದು ವಾರದ ನಂತರ... ಅದೇ
ಶನಿವಾರ 26 ಜನವರಿ 2013ಕ್ಕೆ ಮಲ್ಗಿದ್ದ
ನನ್ನ ಅಪ್ಪ ಬೆಳಿಗ್ಗೆ 4 ಗಂಟೆಗೆ ಶಾಂತವಾಗಿ ಚಿರ ನಿದ್ರೆಯಲ್ಲಿ ಸಾಗಿದ್ರು... ಜೀವನದಲ್ಲಿ
ಅಪ್ಪನ್ನಾ ಕಳೆದುಕೊಂಡ ನನ್ಗೆ ಏನೂ ತೋಚ್ತಾನೇ ಇರ್ಲಿಲ್ಲಾ... ಗುರು - ಶ್ಯಾಮಂಗೆ phone ಮಾಡ್ದೆ...
ಮಾತಾಡ್ಲಿಕ್ಕಾಗ್ತಿರ್ಲಿಲ್ಲಾ... ಆದ್ರೂ ಅಪ್ಪ ನಮ್ ಜೊತೆ ಇಲ್ಲಾ ಅಂತ ಹೇಳಿ ಕಟ್ ಮಾಡ್ದೆ...
ಗುರು ಇರೋದು ಬೆಂಗಳೂರಲ್ಲಿ ... ಶ್ಯಾಮ ರಿಪ್ಪನ್ ಪೇಟೆಲಿ... ಒಂಟಿಯಾಗಿ ನೋವಲ್ಲಿದ್ದ ನನ್ಗೆ
ದುಃಖ ಹೊರಾಗ್ ಹಾಕ್ಲಿಕ್ಕೂ ಆಗ್ತಿರ್ಲಿಲ್ಲಾ... ಆ ಸಮಯದಲ್ಲಿ ನನ್ನ ನೋವನ್ನ ಅರ್ಥ ಮಾಡ್ಕೊಂಡು
ನನ್ನ ದುಃಖನಾ ಹೊರಗ್ ಹಾಕ್ಲಿಕ್ಕೆ ಹೆಗಲು ಕೊಟ್ಟಿದ್ದು ಇದೇ ನನ್ನ ಎರಡ್ ತರ್ಲೆಗಳಾದ ಗುರು -
ಶ್ಯಾಮ... ಅವತ್ತಿನ ದಿನ ಎಲ್ಲಾ ಕಾರ್ಯ ಮುಗಿಯೋವರ್ಗೂ ಮನೆ ಮಗನಿಗಿಂತ ಹೆಚ್ಚಾಗಿದ್ದ ನನ್ನ
ದೋಸ್ತ್ ನಿಜವಾದ ಪ್ರೀತಿ - ವಿಶ್ವಾಸ - ಗೆಳೆತನ
ಅಂದ್ರೆ ಏನು ಅನ್ನೊದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ...
ಭಾನುವಾರ ಬೆಳಗ್ಗೆ ಬೆಂಗಳೂರಿಂದ ನನ್ನ ಗುರು - ನನ್ನ
ತಮ್ಮನ್ನ ನೋಡಿ ಅವ್ನ ಜೊತೆ ಮಾತಾಡ್ದಾಗಾನೆ ನನ್ನ ಹ್ರುದಯ ಬಡಿತ ಮತ್ತೆ ಶುರುವಾಗಿದ್ದು... ಮುಂದಿನ ಎಲ್ಲಾ ಕಾರ್ಯ ಮುಗಿಯೋತನ್ಕ, ತಮ್ಮ ಕೆಲ್ಸ
ಬಿಟ್ಟು ನನ್ಗೋಸ್ಕಾರ ಇವ್ರು ಮಾಡಿದ್ನಾ ನಾನು ಏಳೇಳು ಜನ್ಮದಲ್ಲೂ ತೀರ್ಸೋಕಾಗಲ್ಲ...
ಆ ಘಟನೆಯ ನಂತರ ಜೀವನದಲ್ಲಿ ಏನೂ
ಬೇಡ ಅನ್ನೋ ಮನಸ್ಸಿಂದ ನನ್ನ ಜೀವನ ಸಾಗಿತ್ತು... ಈ ವರ್ಷದ ಹುಟ್ಟು ಹಬ್ಬ ಕೂಡ ಯಾಕಾದ್ರು ಬಂತೋ
ಅನ್ಸಿತ್ತು... ಏನೂ ಬೇಡದ ಮನ್ಸಿಂದ ಮಲ್ಗಿದ್ದ ನನ್ಗೆ ಎಲ್ಲಾ ದುಃಖನು ಮರೆತು ಖುಷಿಯಿಂದ ಇರೋ
ಹಾಗ್ ಮಾಡಿದ್ದು ಇದೇ ನನ್ ತರ್ಲೆ ಗುರು - ಶ್ಯಾಮ...
ಮಧ್ಯರಾತ್ರಿ 12 ಗಂಟೆಗೆ ಮಳೇಲಿ ಸುಮಾರು 7 ಕಿ.ಮೀ. ನೆಡ್ಕೊಂಡು ಬಂದು...
ಬೈಕ್ನಲ್ಲಿ ಬಂದಿದೀವಿ ಅಂತ ಸುಳ್ಳು ಹೇಳಿ... ಅಮ್ಮಾ ಈ ಮಳೇಲಿ ಬಂದಿದೀರಲೋ ಅಂದಿದ್ಕೆ... ಶ್ಯಾಮ
ಈ ಮಳೇಲೆ ನೀವ್ ನಿಮ್ಮ ಮಗ್ಳನ್ನಾ ಹೆತ್ತಿದಿರಾ... ನಮ್ದೇನು? ಅಂತ ಅಮ್ಮಂಗೆ ತರ್ಲೆ ಉತ್ರ
ಕೊಟ್ಟು, ನನ್ಗೆ ಎಂದೂ ಮರೆಯಲಾಗದ ಮಧುರ
ಕ್ಷಣಗಳನ್ನ ನನ್ನ ಹುಟ್ಟು ಹಬ್ಬಕ್ಕೆ ಉಡುಗೋರೆಯಾಗಿ ಕೊಟ್ಟ ಈ ತರ್ಲೆಗಳನ್ನ ಪಡ್ದಿರೋ ನಾನು
ನಿಜವಾಗಿಯೂ lucky ಕಣ್ರೀ...
ಪ್ರೀತಿ
ಹಾಗೂ ವಿಶ್ವಾಸದ ಈ ತರ್ಲೆಗಳ ಬಾಂಧವ್ಯನೇ ನನ್ನ ಬಾಳಿನ ಸಿರಿ ಕಣ್ರೀ... ಈ ಸಿರಿತನ ಸದಾ ನನ್ಜೊತೆ
ಪ್ರತಿ ಜನ್ಮದಲ್ಲೂ ಇರ್ಬೇಕು ಅನ್ನೋದೆ ನನ್ನ ಆಸೆ ಕಣ್ರೀ...J