ಮಾನವೀಯತೆಗೆ ಮಾರಕವಾದ ನನ್ನ ಪ್ರೀತಿಯ
ಕುಸುಮಗಳು
ಹಾಯ್ ಫ್ರೆಂಡ್ಸ್ ... ಇದೇನು? ಪರಿಚಯನೇ ಇಲ್ಲಾ
ಫ್ರೆಂಡ್ಸ್ ಅಂತಿದೀನಿ ಅಂತ ಆಶ್ಚರ್ಯಾನಾ... ಹಾಗನ್ನೋದು ಸಹಜ ಬಿಡಿ... ನಾವು ಎಷ್ಟೇ
ಪ್ರೀತಿ-ವಿಶ್ವಾಸದಿಂದ ನಿಮ್ಮನ್ನ ನೋಡಿದ್ರೂ ನಿಮ್ಮಲ್ಲಿ ಕೆಲವ್ರಿಗೆ ನಮ್ಗೆ ತೊಂದ್ರೆ ಕೊಡ್ದೆ
ಇರೋಕೆ ಬರಲ್ಲಾ... ಇದೇ ವಾತಾವರಣದಲ್ಲಿ ನಮ್ಮಮ್ಮ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಲೈಬ್ರರಿ ಪಕ್ಕ ಏಳು ಮರಿಗಳಿಗೆ ಜನ್ಮ ನೀಡಿದ್ಲು.
ನಾವು ಅಮ್ಮನ ಜೊತೆ ಸುಖವಾಗಿದ್ವಿ... ನಾವು ಯಾರ್ಗೂ ತೊಂದ್ರೆ
ಕೊಟ್ಟೊರೇ ಅಲ್ಲಾ... ಆದ್ರೆ ಮಂಗಳವಾರ, ಸೆಪ್ಟೆಂಬರ್ 3, 2013 ರಂದು ಕಾಲೆಜ್ ಕ್ಯಾಂಪಸ್ಗೆ ನಗರಸಭೆಯವ್ರು
ಬಂದು ನಮ್ಮಮ್ಮ ಹಾಗೂ ಸುಮಾರು ಏಳೆಂಟು ಜೀವಕ್ಕೆ ವಿಷ ಹಾಕಿದ್ರು... ನಮ್ಮಮ್ಮ ಒದ್ದಾಡ್ತಿದ್ದಿದ್ದು
ನೋಡಿ ಕಾಲೇಜ್
ವಿದ್ಯರ್ಥಿಗಳು ಡಾಕ್ಟರ್ನ ಕರ್ಕೊಂಡು ಬಂದ್ರು... ಅವ್ರು ಏನೂ
ಮಾಡ್ಲಿಕ್ಕಾಗಲ್ಲಾ ಅಂದಾಗ, ಬೈಕ್ನಲ್ಲಿ ಆಸ್ಪತ್ರೆಗೆ ಕರ್ಕೊಂಡು ಹೋದ್ರು... ಆದ್ರೂ ನಮ್ಮ
ಪ್ರೀತಿಯ ಅಮ್ಮ ಉಳಿಯಲಿಲ್ಲಾ...
ಈ
ಪ್ರಪಂಚಕ್ಕೆ ಬಂದು 15 ದಿನ ಆಗಿದ್ದ ನಾವು ಹಸಿವಿನಿಂದ
ಅಮ್ಮ ಬರೋದ್ನೇ ಕಾಯ್ತಾ ಇದ್ವಿ... ಆದ್ರೆ ಅಮ್ಮಾ ಬರ್ಲೇ ಇಲ್ಲಾ... ಬದಲಿಗೆ ಹಾಲು
ಉಣಿಸಿ ಹಸಿವು ನೀಗಿಸಿ ಅಮ್ಮನ ಅಕ್ಕರೆಯನ್ನ ತೋರಿದ್ದು... ನಮ್ಮ ಪ್ರೀತಿಯ ವಿದ್ಯಾರ್ಥಿಗಳು.
ನಮ್ಮನ್ನಗಲಿದ ಎಲ್ಲರಿಗೂ ಶಾಂತಿ ಕೋರಿ ಮೌನಾಚರಣೆ ಮಾಡಿ ಭೂತಾಯಿಯ ಮಡಿಲಲ್ಲಿ ಮಲಗಿಸಿದ್ರು.
ಅಂದು ಮಧ್ಯಾಹ್ನ ಶ್ಯಾಮ ಅವ್ನ ದೋಸ್ತ್ (ಗುಡ್ಡಿ) ನೋಡ್ಲಿಕ್ಕೆ ಕಾಲೇಜ್ಗೆ ಬಂದಾಗ ನಮ್ಮನ್ನ ನೋಡಿ ಎಷ್ಟು ಚಂದ ಮರಿಗಳು ಅಂದಾಗ ನಮ್ಗು ಸಕ್ಕತ್
ಖುಷಿಯಾಗಿತ್ತು...
ಸಂಜೆ ಶ್ಯಾಮನ ದೋಸ್ತ್ ಫೋನ್ ಮಾಡಿ ನಮ್ಮ
ವಿಚಾರ ಹೇಳ್ದಾಗ ಮರುಗಿ... ಒಂದು ಮರಿನ ನಾ ಕರ್ಕೊಂಡು
ಹೋಗ್ತೇನೆ ... ನಾಳೆ ಬರ್ತೀನಿ ಅಲ್ಲಿವರ್ಗೂ ನೋಡ್ಕೊಳಿ
ಅಂತ ಅವ್ನ ದೋಸ್ತ್ ಗೆ ಹೇಳ್ದ... ದೋಸ್ತ್ ಮನೇಲಿ ರಾಖಿ ಇರೋದ್ರಿಂದ ದೋಸ್ತ್ ನನ್ನ
C ಶರತ್ (ವಿದ್ಯಾರ್ಥಿ) ರೂಂ ಗೆ ಕಳ್ಸಿದ್ಲು. ಶರತ್
ಗೆ ... ಪಾಪ ತುಂಬಾ ತೊಂದ್ರೆ ಕೊಟ್ಟೆ, ಆದ್ರೂ ಏನೂ ಹೇಳ್ದೆ
ಸಮಾಧಾನವಾಗಿದ್ದ.
ಮರು ದಿನ ಬೆಳಿಗ್ಗೆ ಶರತ್ ನನ್ನ ಮತ್ತೆ ಕಾಲೇಜ್ಗೆ ಕರ್ಕೊಂಡು
ಬಂದು ದೋಸ್ತ್ಗೆ ಕೊಟ್ಟ... ಶ್ಯಾಮ ಬರೋದ್ರೊಳ್ಗೆ ನನ್ಗೆ ಸ್ನಾನ ಮಾಡ್ಸಿ... ಹಾಲು-ಬಿಸ್ಕೆಟ್
ಕೊಟ್ಟು ಎಲ್ರೂ ಪ್ರೀತಿಯಿಂದ ನೋಡ್ಕೊಂಡಿದ್ರು... ಆದ್ರೆ ಶ್ಯಾಮ ನನ್ನ ಕರ್ಕೊಂಡ್ ಹೋಗ್ಲಿಕ್ಕೆ
ಬಂದಾಗ ನನ್ನ ಅಗಲಿಕೆ ಎಲ್ಲರನ್ನೂ ಬೇಜಾರಾಗಿಸಿತ್ತು...
ಹೂಂ... ನಾನು, ಶ್ಯಾಮ್ ಹಾಗು ದೋಸ್ತ್ ಸಿಟಿ ಬಸ್ ಹತ್ತಿ ಬಸ್
ಸ್ಟ್ಯಾಂಡ್ ತಲ್ಪಿದ್ವಿ... ರಿಪ್ಪನ್ ಪೇಟೆ ಬಸ್ ನಮ್ಗಾಗಿ ಕಾಯ್ತಾ ಇತ್ತು... ಎಲ್ಲವೂ ಹೊಸ
ಅನುಭವ ಆಗಿದ್ದ ನನ್ಗೆ ಭಯ ಶುರು ಆಗಿತ್ತು... ಆದ್ರೆ ಇವ್ರಿಬ್ರು ಇರೋದ್ರಿಂದ ಯಾವ್ದೆ ಯೋಚ್ನೆ
ಮಾಡ್ದೆ ಹಾಗೆ ಮಲ್ಗಿದ್ದೆ... ಆ ಡ್ರೈವರ್ ಹಾಕೋ ಬ್ರೇಕ್ ಗೆ ಒಮ್ಮೆ ಬೆಚ್ಚಿ ಅಲ್ಲೆ ಸುಸ್ಸು
ಮಾಡ್ದೆ... ಅ ಟೈಮ್ನಲ್ಲಿ ಶ್ಯಾಮ ಟಿಷ್ಯು ಪೇಪರ್ನಿಂದ ಸರಿಯಾದ್ ಸಮಯಕ್ಕೆ ಮ್ಯಾನೇಜ್ ಮಾಡಿದ್
ನೋಡಿ ಎಲ್ರೂ ನಕ್ಕಿದ್ರು... ಅಷ್ಟೆಲ್ಲಾ ಮ್ಯಾನೇಜ್ ಮಾಡಿದ್ರು ಶ್ಯಾಮನ ಜೀನ್ಸ್ ಸ್ವಲ್ಪ ನೆಂದಿತ್ತು... ನಂದೇನು
ತಪ್ಪಿಲ್ಲಾ... ಡ್ರೈವರ್ ಹಾಗಾ ಬ್ರೇಕ್ ಹಾಕೋದು... ನಾನು ಮೊದಲನೆ ಸಲ ಬಸ್ನಲ್ಲಿ ಹೋಗ್ತಿರೋದು ಅಂತ ... ನೋಡ್ಕೊಂಡು
ನಿದಾನಕ್ಕೆ ಹೋಗದಲ್ವಾ... ಅಬ್ಬಾ... ಅಂತೂ ಇಂತು ನಮ್ ಸ್ಟಾಪ್ ಬಂತು...
ನನ್ಗಾಗಿ ಮನೆ ಬಾಗಿಲು ತೆಗ್ದೇ ಇತ್ತು... ತೆರೆದಿದೆ
ಮನೆ ಓ ಬಾ ... ಅಥಿತಿ... ಅಲ್ರಿ... ನನ್ನನ್ನ
ಎನ್ ಗೆಸ್ಟ್ ಅನ್ಕೊಂಡ್ರಾ... ನಾನು ಕೂಡ ಶ್ಯಾಮನ
ಮನೆಯ ಒಬ್ಬ ಸದಸ್ಯ... ಶ್ಯಾಮ ಹಾಗು ಅಪ್ಪ-ಅಮ್ಮ
ನನ್ಗೆ “ಜಿಮ್ಮಿ” ಅಂತ ನಾಮಕರಣ
ಮಾಡಿದ್ರು...
ಈ ಕುಟುಂಬದ ಸದಸ್ಯನಾಗೋಕೆ ನಾನ್ ಪುಣ್ಯ ಮಾಡಿದ್ದೆ
ಅಂತ ನಾನಂದ್ರೆ ... ನಾನ್ ಇವ್ರ ಕುಟುಂಬಕ್ಕೆ ಬರೋದ್ಕೆ ಇವ್ರು ಪುಣ್ಯ ಮಾಡಿದ್ರು ಅಂತಾರೆ... ಏನೇ ಇರ್ಲಿ, ಇವ್ರು ಮಾಡ್ತಿರೋ ಆರೈಕೆಗೆ - ಪ್ರೀತಿಗೆ ನಾನು ಮಾತ್ರ ಸದಾ ಚಿರಋಣಿ...
ಖುಷಿಯಾಯಿತು... ನಮ್ಮ ಅಮ್ಮ ಕೂಡ ಮರಳಿ ಜನ್ಮ ಪಡೆದು
ನಮ್ಮ ಹಾಗೆ ಸಂತೋಷದಿಂದ ಇರ್ಲಿ ಅನ್ನೊದೇ ಆಸೆ...
ಶ್ಯಾಮನ
ಕುಟುಂಬದಲ್ಲಿ ಒಬ್ಬನಾಗಲಿಕ್ಕೆ ಹಾಗು ನನ್ನ ತಂಗಿಯರ ಆಶ್ರಯಕ್ಕೆ ಸಹಾಯ ಮಾಡಿದ ಎಲ್ರಿಗೂ
ತುಂಬಾ ಥ್ಯಾಂಕ್ಸ್... ನಿಮ್ಮ ಬಾಳು ಸದಾ ವಸಂತವಾಗಲಿ...
ಮಾನವೀಯತೆಯ ಈ ನಿಮ್ಮ ಪ್ರೀತಿ ಪ್ರತಿಯೊಬ್ಬರ ಬಾಳಿನಲ್ಲೂ
ಜ್ಞಾನ ಜ್ಯೊತಿಯನ್ನು ಬೆಳಗಿಸಿ ಮಾನವೀಯತೆಯನು
ಕಲಿಸಲಿ ...
ನಿಮ್ಮ ಪ್ರೀತಿಯ
ಜಿಮ್ಮಿ...
No comments:
Post a Comment