Sunday, 29 September 2013

ಯಾವ ಜನ್ಮದ ಮೈತ್ರಿಯೋ...











ಸ್ನೆಹದ ಕಸಿ  ಚಿಗುರಿ, ಹೆಮ್ಮರವಾಗಿ,
ಮುಗಿಲೆತ್ತರಕೇರಿ, ಸರ್ವಕಾಲದಲು
ಸದಾ ಹಸಿರು, ಹೂ ಕಂಪಿನಿಂದ ರಾರಾಜಿಸುತಿರುವ ಈ ಮೈತ್ರಿ,
ಬಾಳ ಪಯಣದಲಿ ಯಾವ ಜನ್ಮದ ಮೈತ್ರಿಯಾಗಿ
ನಮ್ಮನು ಬಂಧಿಸಿಹುದೊ ಕಾಣೆ...

ಬಿರು ಬಿಸಿಲಿಗೆ ನೆರಳಾಗಿ,
ಸಿಡಿಲ ಮಳೆಯಲಿ ಮುಂಗಾರಿನ ಹನಿಯಾಗಿ,
ನಾ ಮತ್ತೆ ಚಿಗುರಿ... ನಲಿಯಲು
ಆಸರೆಯಾದ ಈ ಮೈತ್ರಿ... ಯಾವ ಜನ್ಮದ ಮೈತ್ರಿಯಾಗಿ
ನಮ್ಮನು ಬಂಧಿಸಿಹುದೊ ಕಾಣೆ...

ಪ್ರಕೃತಿಯ ರಮಣೀಯ ತಾಣದಲಿ
ತ್ರಿಲೋಕ ಸುತ್ತಿಸಿ... ಮರೆಯಲಾರದ
ಸವಿನೆನಪೊಂದ ಕರುಣಿಸಿದ ಈ ಮೈತ್ರಿ...
ಯಾವ ಜನ್ಮದ ಮೈತ್ರಿಯಾಗಿ
ನಮ್ಮನು ಬಂಧಿಸಿಹುದೊ ಕಾಣೆ...

No comments:

Post a Comment