Tuesday, 28 February 2012

ಹೊಸ ಚಿಗುರುಗಳ ನಡುವೆ
ನಿನ್ನಯ ಮೊಗದಲಿ ಕಾಣುತಿರುವೆ ನನ್ನಯ ಬಾಲ್ಯದ ಸವಿನೆನಪ...

ಮಾವಿನ  ಹೊಸ ಚಿಗುರಿನ ಕುಸುಮ ಹಾಗು ಕೋಗಿಲೆಯ ಇಂಪಾದ ಗಾನ ವಸಂತ ಋತುವಿನ ಆಗಮನವನ್ನು ಸಾರುತ್ತದೆ. ಮಾವು ವಸಂತ ಕಾಲದಲ್ಲಿ ಮಾತ್ರ ಚಿಗುರುವುದು ಹಾಗು ಕೋಗಿಲೆ ವಸಂತ ಕಾಲದಲ್ಲಿ ಮಾತ್ರ ಹಾಡುವುದು. ಈ ಪ್ರಕೃತಿಯ ನಿಯಮವನ್ನು ಎಸ್ಟೇ ಪ್ರಯತ್ನಿಸಿದರೂ ಬದಲಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಮನುಜ ಕುಲದ ಸಂತೋಷ ಭರಿತ ಜೀವನ ಪ್ರಕೃತಿಯ ಕಾಲ ನಿಯಮದ ಚೌಕಟ್ಟಿನಿಂದ ಬಹು ದೂರದಲ್ಲಿದೆ. 

ನಿಮ್ಮ ಜೀವನದಲ್ಲಿ ಮರೆಯಲಾರದ ಘಟನೆ ಯಾವುದು ಎಂದು ಪ್ರಶ್ನಿಸಿದಾಗ ಸಾಮಾನ್ಯವಾಗಿ ಎಲ್ಲರ ಯೋಚನೆ ಬಾಲ್ಯದ ಸವಿನೆನಪಿನತ್ತ ಸಾಗುತ್ತದೆ. ಮಾನವನ ಜೀವನ ಭೂತಕಾಲ, ವರ್ತಮಾನಕಾಲ ಹಾಗು ಭವಿಷ್ಯತ್ಕಾಲದಿಂದ ರೂಪುಗೊಂಡಿರುವುದು. ಬಹಳಷ್ಟು ಜನ ತಮ್ಮ ಜೀವನದಲ್ಲಿ ವರ್ತಮಾನದಲ್ಲಿ ತಮ್ಮ ಮಡಿಲಿಗೆ ಬಂದ ಸಂತೋಷದ ಕ್ಷಣಗಳನ್ನು ಅನುಭವಿಸದೆ ತಮ್ಮ ಜೀವನ ಚಕ್ರದ ವೇಗವನ್ನು ಎಷ್ಟರ ಮಟ್ಟಿಗೆ ಹೆಚಿಸಿದ್ದಾರೆಂದರೆ ವೃದ್ದಾಪ್ಯವನ್ನು ತಲುಪಿದಾಗ ಇದರ ಬಗ್ಗೆ ಚಿಂತಿಸುತ್ತಾರೆ. 

ಆದರೆ ಚಿನ್ಥನೆಗಿಂತ ಪ್ರಯತ್ನ ಮಹತ್ತರವಾದ ಬದಲಾವಣೆಯನ್ನು ತರುತ್ತದೆ. ವೃದ್ದಾಪ್ಯದಲ್ಲಿ ಜೀವನ ಚಕ್ರದ ವೇಗ ಏಕ ಏಕೀ ಕಡಿಮೆಯಾಗುತ್ತದೆ. ಕಾರಣ ತಾನು ಹಳೆ ಬೇರು ಇನ್ನೇನು ನಾಳೆ, ಇಂದು, ಈಗ ತನ್ನ ಜೀವನವೆಂಬ ಮರ ಉರುಳಿ ನಶಿಸುವುದೆಂಬ ಚಿಂತಯಿಂದ. ಮನುಷ್ಯನ ದೇಹಕ್ಕೆ ವಯಸಾಗುವುದೇ ಹೊರತು ಮನಸ್ಸಿಗಲ್ಲ. ನೀ ಚಿಗುರಿ ಬೆಳೆದು ಹೆಮ್ಮರವಾಗಿದ್ದರೀನಂತೆ ಮನುಜ ನಿನ್ನ ವ್ರುಧಪ್ಯದಲ್ಲಿ ಬರುವ ಪ್ರತಿ ಕ್ಷಣವನ್ನು ಹೊಸ ಚಿಗುರುಗಳ ನಡುವೆ ಸಂತಸದಿಂದ ಸವಿಯಲು ಪ್ರಯತ್ನಿಸು. 

ನಿನ್ನಯ ಕಾಲ ಚಕ್ರ ನಿನಗಾಗಿ ನೀ ಪ್ರತಿ ದಿನವೂ ದುಡಿಮೆಗಾಗಿ ಮುಡುಪಾಗಿಟ್ಟಿದ್ದ ಹತ್ತು ಗಂಟೆಯನ್ನು ಈಗ ನಿನಗೆ ಬಳುವಳಿಯಾಗಿ ನೀಡಿದೆ. ಎಷ್ಟು ವರ್ಷ ಬದುಕಿದೆ ಎನ್ನುವುದಕ್ಕಿಂತ ಹೀಗೆ ಬದುಕಿದೆ ಎನ್ನುವುದು ವೈಶಿಷ್ಟ್ಯ. 

ನಿನ್ನ ಭೂತಕಾಲದಲ್ಲಿ ಕತ್ತಲೆಯಲ್ಲಿ ಮರೆಯಾಗಿಸಿದ ನಿನ್ನ ಹವ್ಯಾಸವನ್ನು ಮತ್ತೆ ಜೀವಂತವಾಗಿಡಲು ಪ್ರಯತ್ನಿಸು. ನಿನ್ನಯ ಈ ಜೀವನ ಚಕ್ರದಲ್ಲಿ ಎಲ್ಲಾ ವಯಸ್ಸಿನವರೊಡನೆ ಹಾಗು ಪ್ರಕೃತಿಯ ಜೊತೆಯಲ್ಲಿ ಸ್ನೇಹದ ಬಾಳ್ವೆಯನ್ನು ಸಾಗಿಸಲು ಪ್ರಯತ್ನಿಸು. ನಿನ್ನ ಮನಸ್ಸಿನ ಸಂತೋಷ ನಿನ್ನ ಕೈಯಲ್ಲಿಯೇ ಇದೆ. ಒಂಟಿ ಮರವಾಗಿ ಬಡವಾಗಿ ಇರುವುದಕ್ಕಿಂತ ಸುಂದರವಾದ ಹೂತೋಟವನ್ನು ನಿನ್ನ ಸುತ್ತ ಸೃಷ್ಟಿಸಿ ಸದಾ ವರ್ತಮಾನದಲ್ಲಿ ಸಂತೋಷದಿಂದ ಸಾಗು. ಪ್ರತಿ ದಿನ ಸಿಗುವ 24  ಗಂಟೆಯಲ್ಲಿನ ಪ್ರತಿ ಕ್ಷಣವೂ ಸಹಾ ಅತ್ಯಮೂಲ್ಯವಾದ ಸವಿನೆನಪಿನ ಮಧುರವಾದ ಉಲ್ಲಾಸದ ಪರಿವರ್ತನೆ ಜೀವನಕ್ಕೆ ಹೊಸ ತಿರುವನ್ನು ಕೊಡುವುದು. ಈ ಪರಿವರ್ತನೆಯ ವಿಸ್ಮಯ ಶಾಶ್ವತವಾಗಿ  ಬಾಳನ್ನು ಬೆಳಗಿಸಲಿ. 




Wednesday, 22 February 2012

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ 




ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..
ತುಸುದೂರ ಸುಮ್ಮನೆ ಬೆಳಕನ್ನು ತಂದೆಯಾ...
ನಡುವೆಲ್ಲೋ ಮೆಲ್ಲಗೆ ಮಾಯವಾದೆಯಾ...

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..

ಇದ್ದಲ್ಲೇ ನಾ ನೋಡಬಲ್ಲೆ ನಾ ನಿನ್ನ ಪ್ರತಿನೆರಳು
ನನ್ನಲ್ಲಿ ನೀನಿರುವಾಗ ಮಾತ್ತೇಕೆ ರುಜುವಾತು
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹಾ...
ಅಳಿಸಲಾರೆ ನಾನೆಂದು ನಂದಿರುವ ಮನದದೀಪಾ
ಸರಿಯಾದರೇನೆ ನಂದಿರುವ ದೀಪ ಬೆಳಗುವುದು ಮತ್ತೆ ಇಂದು...
ನಾನಿಂದು ಕಂಡ ನಂದಿರುವ ದೀಪ ಬೆಳಕಾಗುವಂತೆ ನೋಡು...

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..

ಕತ್ತಲೆಯ ನನಮನವಿನ್ನು ಕಂಡಿಲ್ಲ ಹೊಂಬೆಳಕು
ಕತ್ತಲೆಯ ಬೆಳಗಿಸು ನೀನು ಮತ್ತೆಲ್ಲಾ ಆಮೇಲೆ
ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನು ನೀನು ನನ್ನ ಕುರಿತು
ಎದೆಯಾಳದಿಂದ ಒಂದು ಸಣ್ಣ ಕಿರಣ ತಂದಿರುವೆ ಬೆಳಕಿಗಾಗಿ
ನನ್ನ ಮನದ ದೀಪ ಇರಬೇಕೆ ಇಂದು ಕತ್ತಲೆಯ ಮುಸುಕಿನಲ್ಲಿ

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..






Tuesday, 21 February 2012

ನಿನಗಾಗಿ ...


ತುಂತುರು ಅಲ್ಲಿ ನೀರ ಹಾಡು
ನನ್ನಯ ಇಲ್ಲಿ  ಪ್ರೀತಿ ಹಾಡು... 
ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 

ನೋವಿರಲಿ   ನಲಿವಿರಲೀ... 
ನೀನಿರದೆ ಹೇಗಿರಲಿ 
ನನ್ನ ತುಂಬು ಹೃದಯ ನೀ ತುಂಬಿದೆ 
ನಿನ್ನ ಈ ತುಂಬು ಪ್ರೀತಿಯನು 
ಬಾಳ ಬೆಳಕಾಗಿ ಹಾಡುವೆನು...  


ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 

ಗಗನದ ಸೂರ್ಯ ಎಲ್ಲರಿಗೆ 
ನನ್ನಯ  ಸೂರ್ಯ ನೀ ಎನಗೆ
ಚಿಲಿಪಿಲಿ ಹಾಡು ಎಲೆಗಳಿಗೆ 
ನನ್ನ ಪ್ರೀತಿ ಹಾಡು ನಿನ್ನ ಬಾಳಿಗೆ 
ಗಾಳಿ ಗಾಳಿ ತಂಪು ಗಾಳಿ ಎಲ್ಲಾ ಕಡೆಯು ಇದೆಯೋ 
ನಿನ್ನ ಹೆಸರ ಗಾಳಿಯೊಂದೇ 
ನನ್ನ ಉಸಿರಲ್ಲಿದೆಯೋ 
ನಮ್ಮ ಸ್ನೇಹ ಬೆಳಗೋ ಇತಿಹಾಸವು 
ನಮ್ಮ ಬಾಳಿನ ಚೈತ್ರ 
ಅಲ್ಲಿ ನಮ್ಮ ಸ್ನೇಹವೇ ಅಮರ... 


ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 

ಮಗುವಿನ ನಿನ್ನ ಮುಗುಳುನಗೆ
ಹಗಲಲಿ ಇರುಳಲಿ ಬೇಡುವೆನು 
ನಮ್ಮಯ ಸ್ನೇಹದ ಬಂಧನಕೆ
ಚಂದ್ರನು ಮೆರಗಿ ಹೊಳೆಯುವನು
ನನ್ನ ಬಳಲಿ ಎಲ್ಲಾ ನೀನೆ
ಯಾಕೆ ಬೇರೆ ನಂಟು ...
ಸಾಕು ಎಲ್ಲಾ ಸಿರಿಗಳ ಮೀರೋ ನಿನ್ನ ಸ್ನೇಹದ ಗಂಟು 

ಜಗವೆಲ್ಲ ಮಾದರಿ ಈ ಸ್ನೇಹವೇ 
ನನ್ನ ಎದೆಯಾಳ ಧನಿ  ನೀನೇ...
ನಿನ್ನ ಸ್ನೇಹವೇ ಸಾಕೆನಗೆ...


ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು...

ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 
ಹಗಲಿರಲಿ, ಇರುಳಿರಲಿ...
ನೀನಿರದೆ ಹೇಗಿರಲಿ 
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು 
ಕಣ್ಣ ಬೆಳಕಾಗಿ ಬೆಳಗುವೆನು...

ನಿನ್ನ ಈ ತುಂಬು ಪ್ರೀತಿಯನು 
ಕಣ್ಣ ಬೆಳಕಾಗಿ ಬೆಳಗುವೆನು...








Wednesday, 15 February 2012

ಓ ನನ್ನ ಚೇತನ ...


ಪ್ರಕೃತಿ ಎಂದೊಡನೆ  ಕಣ್ಮನದಲಿ ಹರಿದಾಡುವುದು
ಸೂರ್ಯ, ಚಂದ್ರ, ನಕ್ಷತ್ರ, ಸರೋವರ, ಸುಂದರ ಹೂ ಹಸಿರಿನ ಸಿರಿ...
ಪ್ರಕೃತಿ ಎಂದೊಡನೆ  ಕಣ್ಮನದಲಿ ಹರಿದಾಡುವುದು


ಸೂರ್ಯ, ಚಂದ್ರ, ನಕ್ಷತ್ರ, ಸರೋವರ, ಸುಂದರ ಹೂ ಹಸಿರಿನ ಸಿರಿ...
ಬಾಡಿದ ಜೀವಕೆ ನವಚೈತನ್ಯವ ತುಂಬಲು ಭಗವಂತ ಕರುಣಿಸಿರುವನು ಈ ಪ್ರಕೃತಿಯ ಸಿರಿ...


ಓ ಮುಗ್ದ ಮನವೇ ನೀನಾಗಿರುವೆ ಎನಗೆ  ಈ ಪ್ರಕೃತಿಯ ಪ್ರತಿಬಿಂಬ,
ಓ ಮುಗ್ದ ಮನವೇ ನೀನಾಗಿರುವೆ ಎನಗೆ  ಈ ಪ್ರಕೃತಿಯ ಪ್ರತಿಬಿಂಬ,
ನಿನ್ನ ಮುಗ್ದ ಮೊಗವ ನೋಡಿದಾಗ ಸದಾ ನಾ ಕಾಣುವೆ
ನವ ಚೈತನ್ಯದ ಹೊಸಬಿಂಬ...


ಓ ನನ್ನ ಒಲವಿನ ಸಿರಿಯೇ
ನೀನಾಗಿಹೆ ಎನಗೆ ಮುಂಗಾರಿನ ಚೈತನ್ಯದ ಚಿಲುಮೆ...
ಓ ನನ್ನ ಒಲವಿನ ಸಿರಿಯೇ 
ನೀನಾಗಿಹೆ ಎನಗೆ ಮುಂಗಾರಿನ ಚೈತನ್ಯದ ಚಿಲುಮೆ...
ನೀ ಕರುಣಿಸಿದೆ ಎನಗೆ ಮತ್ತೆ ಚಿಗುರುವ ಒಲುಮೆ...


ಓ ನನ್ನ ಚೇತನ ನೀನಾಗಿಹೆ ಎನ್ನಯ ಜೀವನದ ಉಸಿರು...
ಓ ನನ್ನ ಚೇತನ ನೀನಾಗಿಹೆ ಎನ್ನಯ ಜೀವನದ ಉಸಿರು...
ಎನ್ನಯ ಕಂಗಳು ಸದಾ ಹರಸುವುದು ನೀನಾಗಿರು ಎಂದೂ ಬಾಡದ ಸುಂದರ ಹಸಿರು
ನೀನಾಗಿರು ಎಂದೂ ಬಾಡದ ಸುಂದರ ಹಸಿರು...


ಓ ನನ್ನ ಚೇತನ ... ಓ ನನ್ನ ಚೇತನ ... ನಿನಾಗಿಹೆ ನನ್ನಯ ಬಾಳಿನ ನವ ಚೈತನ್ಯ... ನವ ಚೈತನ್ಯ...











    

Tuesday, 14 February 2012

ಮನದಾಳದ ಮಾತು  


ಮಾನವ ತಂತ್ರಜ್ಞಾನದ ಯುಗದಲ್ಲಿ ಉತ್ತುಂಗದ ಶಿಖರವೇರಿ ಪ್ರತಿ ಕ್ಷಣವೂ ಒಂದು ಯಂತ್ರದಂತೆ ಜೀವನ ಸಾಗಿಸುತ್ತಿದ್ದಾನೆ. ಮಾನವನ ಜೀವನ ಪ್ರೀತಿ, ವಿಶ್ವಾಸ ಹಾಗೂ ಸಂಬಂಧಗಳಿಂದಾಗಿ ಮಾನವ ಎಂದು ನಾಮಂಕಿತನಾಗಿದ್ದಾನೆ ಎಂಬುದು ನನ್ನ ವಿಚಾರ.   

ಕನಸಿನ ಲೋಕದಲ್ಲಿ ಜೀವನ ಸಾಗಿಸುವುದು ಎಷ್ಟು ಸುಂದರ ಅನಿಸುವುದೋ ನನಸಿನ ಲೋಕದಲ್ಲಿ ಜೀವನ ಸಾಗಿಸುವುದು ಅಷ್ಟೇ  ಕಷ್ಟ ಎಂಬುದು ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ವಿಷಯ. ನಮ್ಮ ಜೀವನ ಶೈಲಿ ನಮ್ಮ ಜೀವನದ ಕನ್ನಡಿ ಇದ್ದಂತೆ. ಕಷ್ಟ ಯಾರಿಗೆತಾನೆ ಬರುವುದಿಲ್ಲ ಬರಿ ಮಾನವನಿಗೆ ಮಾತ್ರವಲ್ಲ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಸಹ  ಇದು ಕಟ್ಟಿಟ್ಟ ಬುತ್ತಿ. ಪ್ರತಿಯೊಂದು  ಪ್ರಶ್ನೆಗೂ ಒಂದು ಉತ್ತರವಿದ್ದೇ ಇರುತ್ತದೆ.  ಉತ್ತರ ಸಿಗದಿದ್ದಾಗ ಆ ಪ್ರಶ್ನೆಯನ್ನು ಮರೆತು ಸಂತೋಷದಿಂದ ಮುಂದೆ  ಸಾಗಬೇಕು. ತುಂತುರು ಮಳೆ ಎಂದಾಕ್ಷಣ ಮನಸ್ಸು ಉಲ್ಲಾಸಭರಿತವಾಗಿ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತದೆ. ಮನೆಯಲ್ಲಿ ಕುಳಿತು  ತುಂತುರು ಮಳೆಯ ನೋಡಿ  ಸವಿಯುವುದಕ್ಕಿಂತ ಪ್ರಕೃತಿಯ ಜೊತೆ ಪ್ರತಿಯೊಂದು ಮಳೆ ಹನಿಹೊಡನೆ ಎರೆಡು ನಿಮಿಷ ಉಲ್ಲಾಸದಿಂದ ನಲಿದು ನೋಡಿ... ಮೂಖವಿಸ್ಮಿತರಾಗಿ  ಅನುಭವವನ್ನು ಮಾತಿನಲ್ಲಿ ಬಣ್ಣಿಸಲಾಗದೆ ಮನವೆಂಬ ಕನ್ನಡಿಯಲ್ಲಿ ಉಲ್ಲಾಸದ ಚಿಗುರನ್ನು ಕಾಣುವಿರಿ ಎಂಬ ಸ್ವಂತ ಅನುಭವದ ಮಾತನ್ನು ಹೇಳಲಿಚ್ಛಿಸುತ್ತೇನೆ. 

ದುಡಿಮೆ ಮಾನವನ ಅಗತ್ಯ. ಆದರೆ ಈಗಿನ ಪ್ರಸ್ತುತ ಯುಗದಲ್ಲಿ ಬಹಳಷ್ಟು ಮಂದಿಗೆ ದುಡಿಮೆ, ಆಸ್ತಿಯನ್ನು ಮಾಡುವುದೇ ಜೀವನದ  ಮೂಲ ಉದ್ದೇಶವಾಗಿದೆ. ಕೆಲವೊಮ್ಮೆ ಪ್ರಪಂಚದಲ್ಲಿ ಎಲ್ಲಾರೂ ಹೀಗೆಯೇ ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತಿರುತ್ತದೆ. ಮಾನವನಿಗೆ ಜೀವನ ನಡೆಸಲು ಹಣದ ಅವಶ್ಯಕತೆ ಇದೆ ಹೌದು, ಆದರೆ ಪ್ರೀತಿ, ಸ್ನೇಹ, ಎಲ್ಲವನ್ನು  ಬದಿಗೊತ್ತಿ ಹಣವನ್ನುಗಳಿಸುತ್ತಾ ಅಗತ್ಯಕ್ಕಿನಂತ ಹೆಚ್ಚು ಬೇಕು ಎಂಬ ತೃಷೆಯ ಹಿಂದೆ ಹೋಗುವುದು ಮೂರ್ಖತನ. ಆದರೆ ಈ ಮೂರ್ಖತನದ ಇನ್ನೊಂದು ಮುಖ ಇದಕ್ಕೆ ತದ್ವಿರುದ್ದವಾಗಿದೆ. ಗಳಿಸಿದ ಹಣದಲ್ಲಿ ನಿಸ್ವಾರ್ಥಭಾವದಿಂದ ಸಮಾಜದ ಎಷ್ಟೋ ಮಂದಿಗೆ ಸಹಾಯ ಮಾಡಿ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು ನಿಜವಾಗಿಯೂ ನಮ್ಮ ಸಮಾಜವನ್ನು ಬೆಳಗುವ ಕರುಣಾಮಯಿಗಳು...

ಎಲ್ಲಾ ಸಂಬಂದಗಳಲ್ಲಿಯೂ ಸ್ನೇಹವನ್ನು ಕಾಣಬಹುದು. ಸಮಾಜದಲ್ಲಿ  friend ಎಂದಾಕ್ಷಣ ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ boy friend or girl friend?  ಆದರೆ ನನ್ನ ಪ್ರಕಾರ ಸ್ನೇಹಕ್ಕೆ ಯಾವುದೇ ಲಿಂಗಬೇಧವಿಲ್ಲ. 

ಪ್ರೀತಿ ಹಾಗು ವಿಶ್ವಾಸ raktha ಸಂಬಂಧದಿಂದ ಮಾತ್ರ ಸಿಗುವುದೇ? ಖಂಡಿತ ಇಲ್ಲ. ಒಡಹುಟ್ಟಿದವರಿಂದ ಮಾತ್ರವಲ್ಲ ಓಡನಾಡಿಗಳಿಂದಲೂ  ಸಿಗುವುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಗಳಿವೆ. ಈ ಸ್ನೇಹದ ಬೆಸುಗೆ ಪ್ರತಿಯೊಂದು ಯುಗದಲ್ಲಿಯೂ ಅದರ ಮಹತ್ವವನ್ನು ರಾರಾಜಿಸಿಕೊಂಡು ಬಂದಿದೆ. ಈ ಸಂಧರ್ಬದಲ್ಲಿ ನಾನು ನಮ್ಮ ಪುರಾಣದಲ್ಲಿ ಬರುವ ಕರ್ಣ - ದುರ್ಯೋಧನ, ಕೃಷ್ಣ - ಸುಧಮಾರನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. 

ನನ್ನ ಜೀವನದ ಹಾದಿಯಲ್ಲಿ ಸಿಕ್ಕಂತಹ ಸ್ನೇಹಿತರು ಅದೆಷ್ಟೋಮಂದಿ. ಒಂದು ಘಟನೆಯಲ್ಲಿ ಆಕಸ್ಮಿಕವಾಗಿ ಪರಿಚಯವಾದ ಒಂದು ಸ್ನೇಹದ ಚಿಗುರು ಹೆಮ್ಮರವಾಗಿ ನನ್ನ ಜೀವನದಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದಿದೆ. ಈ ಆಕಸ್ಮಿಕ ಪರಿಚಯ ಯಾವಾಗ ಸ್ನೇಹ, ಪ್ರೀತಿ - ವಿಶ್ವಾಸ ಹಾಗೂ ಭ್ರಾತೃತ್ವದಿಂದ ಬೆಸುಗೆಯಾಯಿತೋ ನನಗೆ  ತಿಳಿಯದು. ಜೊತೆಯಲ್ಲಿ ನಕ್ಕು ನಲಿದು ಸಂತಸದಿಂದ ಕಳೆದ ಪ್ರತಿ ಕ್ಷಣವೂ ಸದಾ ಮನದಾಳದಲ್ಲಿ ಅಚ್ಚಳಿಯದಂತೆ ಮನೆಮಾಡಿದೆ. 

ನನ್ನ ಸುಖ, ದುಃಖ, ನೋವು - ನಲಿವುಗಳಿಗೆ ಸ್ಪಂದಿಸಿ ಸ್ನೇಹ, ಪ್ರೀತಿ - ವಿಶ್ವಾಸದಿಂದ ನನಗೆ ಸ್ಪೂರ್ತಿ ನೀಡಿದ ನನ್ನ ಸ್ನೇಹಿತ, ನನ್ನ ತಮ್ಮ, ನನ್ನ ಸರ್ವಸ್ವ ನಿಜವಾಗಿಯೂ ನನ್ನ ಜೀವನದ ಗುರು. ಈ  ಗುರುವಿನ ಮೂರ್ತಿಯನ್ನು ಕರುಣಿಸಿದ ಭಗವಂತನಿಗೆ ನಾನು ಸದಾ ಚಿರರುಣಿ.

ಪ್ರತಿಯೊಬ್ಬರ ಜೀವನದಲ್ಲಿಯೂ ಭಗವಂತ ಸ್ನೇಹದ ಭಾಗ್ಯವನ್ನು ಕರುಣಿಸಿರುತ್ತಾನೆ. ನಿಮ್ಮ ಜೀವನದ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರನ್ನೂ ಒಂದು ಕ್ಷಣ ನಿಮ್ಮ busy schedule ನಿಂದ ಹೊರಬಂದು ಪ್ರೀತಿ - ವಿಶ್ವಾಸ ಹಾಗೂ ಸ್ನೇಹದಿಂದ ಕಾಣಿರಿ. ಆಗ ನೀವೂ ಕೂಡ ಪ್ರೀತಿ, ವಿಶ್ವಾಸ ಹಾಗೂ ಸ್ನೇಹದ ಸಿರಿತನವನ್ನು ಪಡೆಯುವಿರಿ. 

ಸ್ನೇಹನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಎಂದರೆ ಖಂಡಿತ ತಪ್ಪಾಗಲಾರದು ಅಲ್ಲವೇ? ಬನ್ನಿ ಸ್ನೇಹಿತರೆ  ಮನದಲ್ಲಿರುವ ಸ್ನೇಹದ ಬಾಗಿಲು ತೆರೆದು ಹೊಸದಾದ ಸ್ನೇಹ - ವಿಶ್ವಾಸದಿಂದ ಕೂಡಿದ ಮಾನವ ಲೋಕವನ್ನು ಸೃಷ್ಟಿಸೋಣ...

ಈ  ಲೇಖನ ನನ್ನ ಜೀವನದ ಮೊದಲ ಪ್ರಯತ್ನ. ಲೇಖನ ಬರೆಯುವುದು ನನ್ನ ಹವ್ಯಾಸವಲ್ಲ. ಆದರೆ ನನ್ನ ಗುರುವಿನ ಬರೆಯುವ  ಹವ್ಯಾಸ ಮುಸುಕಿನಲ್ಲಿ ಮರೆಯಾಗಿರುವುದು ನನಗೆ ಸದಾ ಕಾಡುತ್ತಿರುತ್ತದೆ. ಈ  ಮುಸುಕನ್ನು ಬೆಳಗಿಸುವ ಒಂದು ಸಣ್ಣ ಪ್ರಯತ್ನ ನಾನು ಲೇಖನ ಬರೆಯುವುದಕ್ಕೆ ನಾಂದಿಯಾಯಿತು. ಈ  ಲೇಖನ ನನ್ನ ಗುರುವಿಗೆ ನನ್ನ ಒಲುಮೆಯ ಪ್ರೀತಿಯ ಕಿರು ಕಾಣಿಕೆ. 

Yours  maddy



Aase

ಮೊಳಕೆ ಚಿಗುರಿ ಸಸಿಯಾಗಿ,
ಮರವಾಗಿ, ಹೂವಾಗಿ, ಕಾಯಾಗಿ,
ಎಲೆ ಉದುರಿ ಮತ್ತೆ ಚಿಗುರುವಂತಿರಬಾರದೆ ಜೀವನ...