ಮನದಾಳದ ಮಾತು
ಮಾನವ ತಂತ್ರಜ್ಞಾನದ ಯುಗದಲ್ಲಿ ಉತ್ತುಂಗದ ಶಿಖರವೇರಿ ಪ್ರತಿ ಕ್ಷಣವೂ ಒಂದು ಯಂತ್ರದಂತೆ ಜೀವನ ಸಾಗಿಸುತ್ತಿದ್ದಾನೆ. ಮಾನವನ ಜೀವನ ಪ್ರೀತಿ, ವಿಶ್ವಾಸ ಹಾಗೂ ಸಂಬಂಧಗಳಿಂದಾಗಿ ಮಾನವ ಎಂದು ನಾಮಂಕಿತನಾಗಿದ್ದಾನೆ ಎಂಬುದು ನನ್ನ ವಿಚಾರ.
ಕನಸಿನ ಲೋಕದಲ್ಲಿ ಜೀವನ ಸಾಗಿಸುವುದು ಎಷ್ಟು ಸುಂದರ ಅನಿಸುವುದೋ ನನಸಿನ ಲೋಕದಲ್ಲಿ ಜೀವನ ಸಾಗಿಸುವುದು ಅಷ್ಟೇ ಕಷ್ಟ ಎಂಬುದು ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ವಿಷಯ. ನಮ್ಮ ಜೀವನ ಶೈಲಿ ನಮ್ಮ ಜೀವನದ ಕನ್ನಡಿ ಇದ್ದಂತೆ. ಕಷ್ಟ ಯಾರಿಗೆತಾನೆ ಬರುವುದಿಲ್ಲ ಬರಿ ಮಾನವನಿಗೆ ಮಾತ್ರವಲ್ಲ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಸಹ ಇದು ಕಟ್ಟಿಟ್ಟ ಬುತ್ತಿ. ಪ್ರತಿಯೊಂದು ಪ್ರಶ್ನೆಗೂ ಒಂದು ಉತ್ತರವಿದ್ದೇ ಇರುತ್ತದೆ. ಉತ್ತರ ಸಿಗದಿದ್ದಾಗ ಆ ಪ್ರಶ್ನೆಯನ್ನು ಮರೆತು ಸಂತೋಷದಿಂದ ಮುಂದೆ ಸಾಗಬೇಕು. ತುಂತುರು ಮಳೆ ಎಂದಾಕ್ಷಣ ಮನಸ್ಸು ಉಲ್ಲಾಸಭರಿತವಾಗಿ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತದೆ. ಮನೆಯಲ್ಲಿ ಕುಳಿತು ತುಂತುರು ಮಳೆಯ ನೋಡಿ ಸವಿಯುವುದಕ್ಕಿಂತ ಪ್ರಕೃತಿಯ ಜೊತೆ ಪ್ರತಿಯೊಂದು ಮಳೆ ಹನಿಹೊಡನೆ ಎರೆಡು ನಿಮಿಷ ಉಲ್ಲಾಸದಿಂದ ನಲಿದು ನೋಡಿ... ಮೂಖವಿಸ್ಮಿತರಾಗಿ ಅನುಭವವನ್ನು ಮಾತಿನಲ್ಲಿ ಬಣ್ಣಿಸಲಾಗದೆ ಮನವೆಂಬ ಕನ್ನಡಿಯಲ್ಲಿ ಉಲ್ಲಾಸದ ಚಿಗುರನ್ನು ಕಾಣುವಿರಿ ಎಂಬ ಸ್ವಂತ ಅನುಭವದ ಮಾತನ್ನು ಹೇಳಲಿಚ್ಛಿಸುತ್ತೇನೆ.
ದುಡಿಮೆ ಮಾನವನ ಅಗತ್ಯ. ಆದರೆ ಈಗಿನ ಪ್ರಸ್ತುತ ಯುಗದಲ್ಲಿ ಬಹಳಷ್ಟು ಮಂದಿಗೆ ದುಡಿಮೆ, ಆಸ್ತಿಯನ್ನು ಮಾಡುವುದೇ ಜೀವನದ ಮೂಲ ಉದ್ದೇಶವಾಗಿದೆ. ಕೆಲವೊಮ್ಮೆ ಪ್ರಪಂಚದಲ್ಲಿ ಎಲ್ಲಾರೂ ಹೀಗೆಯೇ ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತಿರುತ್ತದೆ. ಮಾನವನಿಗೆ ಜೀವನ ನಡೆಸಲು ಹಣದ ಅವಶ್ಯಕತೆ ಇದೆ ಹೌದು, ಆದರೆ ಪ್ರೀತಿ, ಸ್ನೇಹ, ಎಲ್ಲವನ್ನು ಬದಿಗೊತ್ತಿ ಹಣವನ್ನುಗಳಿಸುತ್ತಾ ಅಗತ್ಯಕ್ಕಿನಂತ ಹೆಚ್ಚು ಬೇಕು ಎಂಬ ತೃಷೆಯ ಹಿಂದೆ ಹೋಗುವುದು ಮೂರ್ಖತನ. ಆದರೆ ಈ ಮೂರ್ಖತನದ ಇನ್ನೊಂದು ಮುಖ ಇದಕ್ಕೆ ತದ್ವಿರುದ್ದವಾಗಿದೆ. ಗಳಿಸಿದ ಹಣದಲ್ಲಿ ನಿಸ್ವಾರ್ಥಭಾವದಿಂದ ಸಮಾಜದ ಎಷ್ಟೋ ಮಂದಿಗೆ ಸಹಾಯ ಮಾಡಿ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು ನಿಜವಾಗಿಯೂ ನಮ್ಮ ಸಮಾಜವನ್ನು ಬೆಳಗುವ ಕರುಣಾಮಯಿಗಳು...
ಎಲ್ಲಾ ಸಂಬಂದಗಳಲ್ಲಿಯೂ ಸ್ನೇಹವನ್ನು ಕಾಣಬಹುದು. ಸಮಾಜದಲ್ಲಿ friend ಎಂದಾಕ್ಷಣ ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ boy friend or girl friend? ಆದರೆ ನನ್ನ ಪ್ರಕಾರ ಸ್ನೇಹಕ್ಕೆ ಯಾವುದೇ ಲಿಂಗಬೇಧವಿಲ್ಲ.
ಪ್ರೀತಿ ಹಾಗು ವಿಶ್ವಾಸ raktha ಸಂಬಂಧದಿಂದ ಮಾತ್ರ ಸಿಗುವುದೇ? ಖಂಡಿತ ಇಲ್ಲ. ಒಡಹುಟ್ಟಿದವರಿಂದ ಮಾತ್ರವಲ್ಲ ಓಡನಾಡಿಗಳಿಂದಲೂ ಸಿಗುವುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಗಳಿವೆ. ಈ ಸ್ನೇಹದ ಬೆಸುಗೆ ಪ್ರತಿಯೊಂದು ಯುಗದಲ್ಲಿಯೂ ಅದರ ಮಹತ್ವವನ್ನು ರಾರಾಜಿಸಿಕೊಂಡು ಬಂದಿದೆ. ಈ ಸಂಧರ್ಬದಲ್ಲಿ ನಾನು ನಮ್ಮ ಪುರಾಣದಲ್ಲಿ ಬರುವ ಕರ್ಣ - ದುರ್ಯೋಧನ, ಕೃಷ್ಣ - ಸುಧಮಾರನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ.
ನನ್ನ ಜೀವನದ ಹಾದಿಯಲ್ಲಿ ಸಿಕ್ಕಂತಹ ಸ್ನೇಹಿತರು ಅದೆಷ್ಟೋಮಂದಿ. ಒಂದು ಘಟನೆಯಲ್ಲಿ ಆಕಸ್ಮಿಕವಾಗಿ ಪರಿಚಯವಾದ ಒಂದು ಸ್ನೇಹದ ಚಿಗುರು ಹೆಮ್ಮರವಾಗಿ ನನ್ನ ಜೀವನದಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದಿದೆ. ಈ ಆಕಸ್ಮಿಕ ಪರಿಚಯ ಯಾವಾಗ ಸ್ನೇಹ, ಪ್ರೀತಿ - ವಿಶ್ವಾಸ ಹಾಗೂ ಭ್ರಾತೃತ್ವದಿಂದ ಬೆಸುಗೆಯಾಯಿತೋ ನನಗೆ ತಿಳಿಯದು. ಜೊತೆಯಲ್ಲಿ ನಕ್ಕು ನಲಿದು ಸಂತಸದಿಂದ ಕಳೆದ ಪ್ರತಿ ಕ್ಷಣವೂ ಸದಾ ಮನದಾಳದಲ್ಲಿ ಅಚ್ಚಳಿಯದಂತೆ ಮನೆಮಾಡಿದೆ.
ನನ್ನ ಸುಖ, ದುಃಖ, ನೋವು - ನಲಿವುಗಳಿಗೆ ಸ್ಪಂದಿಸಿ ಸ್ನೇಹ, ಪ್ರೀತಿ - ವಿಶ್ವಾಸದಿಂದ ನನಗೆ ಸ್ಪೂರ್ತಿ ನೀಡಿದ ನನ್ನ ಸ್ನೇಹಿತ, ನನ್ನ ತಮ್ಮ, ನನ್ನ ಸರ್ವಸ್ವ ನಿಜವಾಗಿಯೂ ನನ್ನ ಜೀವನದ ಗುರು. ಈ ಗುರುವಿನ ಮೂರ್ತಿಯನ್ನು ಕರುಣಿಸಿದ ಭಗವಂತನಿಗೆ ನಾನು ಸದಾ ಚಿರರುಣಿ.
ಪ್ರತಿಯೊಬ್ಬರ ಜೀವನದಲ್ಲಿಯೂ ಭಗವಂತ ಸ್ನೇಹದ ಭಾಗ್ಯವನ್ನು ಕರುಣಿಸಿರುತ್ತಾನೆ. ನಿಮ್ಮ ಜೀವನದ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರನ್ನೂ ಒಂದು ಕ್ಷಣ ನಿಮ್ಮ busy schedule ನಿಂದ ಹೊರಬಂದು ಪ್ರೀತಿ - ವಿಶ್ವಾಸ ಹಾಗೂ ಸ್ನೇಹದಿಂದ ಕಾಣಿರಿ. ಆಗ ನೀವೂ ಕೂಡ ಪ್ರೀತಿ, ವಿಶ್ವಾಸ ಹಾಗೂ ಸ್ನೇಹದ ಸಿರಿತನವನ್ನು ಪಡೆಯುವಿರಿ.
ಸ್ನೇಹನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಎಂದರೆ ಖಂಡಿತ ತಪ್ಪಾಗಲಾರದು ಅಲ್ಲವೇ? ಬನ್ನಿ ಸ್ನೇಹಿತರೆ ಮನದಲ್ಲಿರುವ ಸ್ನೇಹದ ಬಾಗಿಲು ತೆರೆದು ಹೊಸದಾದ ಸ್ನೇಹ - ವಿಶ್ವಾಸದಿಂದ ಕೂಡಿದ ಮಾನವ ಲೋಕವನ್ನು ಸೃಷ್ಟಿಸೋಣ...
ಈ ಲೇಖನ ನನ್ನ ಜೀವನದ ಮೊದಲ ಪ್ರಯತ್ನ. ಲೇಖನ ಬರೆಯುವುದು ನನ್ನ ಹವ್ಯಾಸವಲ್ಲ. ಆದರೆ ನನ್ನ ಗುರುವಿನ ಬರೆಯುವ ಹವ್ಯಾಸ ಮುಸುಕಿನಲ್ಲಿ ಮರೆಯಾಗಿರುವುದು ನನಗೆ ಸದಾ ಕಾಡುತ್ತಿರುತ್ತದೆ. ಈ ಮುಸುಕನ್ನು ಬೆಳಗಿಸುವ ಒಂದು ಸಣ್ಣ ಪ್ರಯತ್ನ ನಾನು ಲೇಖನ ಬರೆಯುವುದಕ್ಕೆ ನಾಂದಿಯಾಯಿತು. ಈ ಲೇಖನ ನನ್ನ ಗುರುವಿಗೆ ನನ್ನ ಒಲುಮೆಯ ಪ್ರೀತಿಯ ಕಿರು ಕಾಣಿಕೆ.
Yours maddy
No comments:
Post a Comment