ಹೊಸ ಚಿಗುರುಗಳ ನಡುವೆ
ನಿನ್ನಯ ಮೊಗದಲಿ ಕಾಣುತಿರುವೆ ನನ್ನಯ ಬಾಲ್ಯದ ಸವಿನೆನಪ...
ನಿನ್ನಯ ಮೊಗದಲಿ ಕಾಣುತಿರುವೆ ನನ್ನಯ ಬಾಲ್ಯದ ಸವಿನೆನಪ...
ಮಾವಿನ ಹೊಸ ಚಿಗುರಿನ ಕುಸುಮ ಹಾಗು ಕೋಗಿಲೆಯ ಇಂಪಾದ ಗಾನ ವಸಂತ ಋತುವಿನ ಆಗಮನವನ್ನು ಸಾರುತ್ತದೆ. ಮಾವು ವಸಂತ ಕಾಲದಲ್ಲಿ ಮಾತ್ರ ಚಿಗುರುವುದು ಹಾಗು ಕೋಗಿಲೆ ವಸಂತ ಕಾಲದಲ್ಲಿ ಮಾತ್ರ ಹಾಡುವುದು. ಈ ಪ್ರಕೃತಿಯ ನಿಯಮವನ್ನು ಎಸ್ಟೇ ಪ್ರಯತ್ನಿಸಿದರೂ ಬದಲಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಮನುಜ ಕುಲದ ಸಂತೋಷ ಭರಿತ ಜೀವನ ಪ್ರಕೃತಿಯ ಕಾಲ ನಿಯಮದ ಚೌಕಟ್ಟಿನಿಂದ ಬಹು ದೂರದಲ್ಲಿದೆ.
ನಿಮ್ಮ ಜೀವನದಲ್ಲಿ ಮರೆಯಲಾರದ ಘಟನೆ ಯಾವುದು ಎಂದು ಪ್ರಶ್ನಿಸಿದಾಗ ಸಾಮಾನ್ಯವಾಗಿ ಎಲ್ಲರ ಯೋಚನೆ ಬಾಲ್ಯದ ಸವಿನೆನಪಿನತ್ತ ಸಾಗುತ್ತದೆ. ಮಾನವನ ಜೀವನ ಭೂತಕಾಲ, ವರ್ತಮಾನಕಾಲ ಹಾಗು ಭವಿಷ್ಯತ್ಕಾಲದಿಂದ ರೂಪುಗೊಂಡಿರುವುದು. ಬಹಳಷ್ಟು ಜನ ತಮ್ಮ ಜೀವನದಲ್ಲಿ ವರ್ತಮಾನದಲ್ಲಿ ತಮ್ಮ ಮಡಿಲಿಗೆ ಬಂದ ಸಂತೋಷದ ಕ್ಷಣಗಳನ್ನು ಅನುಭವಿಸದೆ ತಮ್ಮ ಜೀವನ ಚಕ್ರದ ವೇಗವನ್ನು ಎಷ್ಟರ ಮಟ್ಟಿಗೆ ಹೆಚಿಸಿದ್ದಾರೆಂದರೆ ವೃದ್ದಾಪ್ಯವನ್ನು ತಲುಪಿದಾಗ ಇದರ ಬಗ್ಗೆ ಚಿಂತಿಸುತ್ತಾರೆ.
ಆದರೆ ಚಿನ್ಥನೆಗಿಂತ ಪ್ರಯತ್ನ ಮಹತ್ತರವಾದ ಬದಲಾವಣೆಯನ್ನು ತರುತ್ತದೆ. ವೃದ್ದಾಪ್ಯದಲ್ಲಿ ಜೀವನ ಚಕ್ರದ ವೇಗ ಏಕ ಏಕೀ ಕಡಿಮೆಯಾಗುತ್ತದೆ. ಕಾರಣ ತಾನು ಹಳೆ ಬೇರು ಇನ್ನೇನು ನಾಳೆ, ಇಂದು, ಈಗ ತನ್ನ ಜೀವನವೆಂಬ ಮರ ಉರುಳಿ ನಶಿಸುವುದೆಂಬ ಚಿಂತಯಿಂದ. ಮನುಷ್ಯನ ದೇಹಕ್ಕೆ ವಯಸಾಗುವುದೇ ಹೊರತು ಮನಸ್ಸಿಗಲ್ಲ. ನೀ ಚಿಗುರಿ ಬೆಳೆದು ಹೆಮ್ಮರವಾಗಿದ್ದರೀನಂತೆ ಮನುಜ ನಿನ್ನ ವ್ರುಧಪ್ಯದಲ್ಲಿ ಬರುವ ಪ್ರತಿ ಕ್ಷಣವನ್ನು ಹೊಸ ಚಿಗುರುಗಳ ನಡುವೆ ಸಂತಸದಿಂದ ಸವಿಯಲು ಪ್ರಯತ್ನಿಸು.
ನಿನ್ನಯ ಕಾಲ ಚಕ್ರ ನಿನಗಾಗಿ ನೀ ಪ್ರತಿ ದಿನವೂ ದುಡಿಮೆಗಾಗಿ ಮುಡುಪಾಗಿಟ್ಟಿದ್ದ ಹತ್ತು ಗಂಟೆಯನ್ನು ಈಗ ನಿನಗೆ ಬಳುವಳಿಯಾಗಿ ನೀಡಿದೆ. ಎಷ್ಟು ವರ್ಷ ಬದುಕಿದೆ ಎನ್ನುವುದಕ್ಕಿಂತ ಹೀಗೆ ಬದುಕಿದೆ ಎನ್ನುವುದು ವೈಶಿಷ್ಟ್ಯ.
ನಿನ್ನ ಭೂತಕಾಲದಲ್ಲಿ ಕತ್ತಲೆಯಲ್ಲಿ ಮರೆಯಾಗಿಸಿದ ನಿನ್ನ ಹವ್ಯಾಸವನ್ನು ಮತ್ತೆ ಜೀವಂತವಾಗಿಡಲು ಪ್ರಯತ್ನಿಸು. ನಿನ್ನಯ ಈ ಜೀವನ ಚಕ್ರದಲ್ಲಿ ಎಲ್ಲಾ ವಯಸ್ಸಿನವರೊಡನೆ ಹಾಗು ಪ್ರಕೃತಿಯ ಜೊತೆಯಲ್ಲಿ ಸ್ನೇಹದ ಬಾಳ್ವೆಯನ್ನು ಸಾಗಿಸಲು ಪ್ರಯತ್ನಿಸು. ನಿನ್ನ ಮನಸ್ಸಿನ ಸಂತೋಷ ನಿನ್ನ ಕೈಯಲ್ಲಿಯೇ ಇದೆ. ಒಂಟಿ ಮರವಾಗಿ ಬಡವಾಗಿ ಇರುವುದಕ್ಕಿಂತ ಸುಂದರವಾದ ಹೂತೋಟವನ್ನು ನಿನ್ನ ಸುತ್ತ ಸೃಷ್ಟಿಸಿ ಸದಾ ವರ್ತಮಾನದಲ್ಲಿ ಸಂತೋಷದಿಂದ ಸಾಗು. ಪ್ರತಿ ದಿನ ಸಿಗುವ 24 ಗಂಟೆಯಲ್ಲಿನ ಪ್ರತಿ ಕ್ಷಣವೂ ಸಹಾ ಅತ್ಯಮೂಲ್ಯವಾದ ಸವಿನೆನಪಿನ ಮಧುರವಾದ ಉಲ್ಲಾಸದ ಪರಿವರ್ತನೆ ಜೀವನಕ್ಕೆ ಹೊಸ ತಿರುವನ್ನು ಕೊಡುವುದು. ಈ ಪರಿವರ್ತನೆಯ ವಿಸ್ಮಯ ಶಾಶ್ವತವಾಗಿ ಬಾಳನ್ನು ಬೆಳಗಿಸಲಿ.
No comments:
Post a Comment