Monday, 25 June 2012

ಸುಖ ದುಖದ ಸಾಮರಸ್ಯ ...





ಮನುಷ್ಯನ ಜೀವವನ ಸುಖ ಹಾಗೂ  ದುಃಖ ಎಂಬ ಎರಡು ಮುಖದ ನಾಣ್ಯವಿದ್ದಂತೆ.  ಪ್ರಕೃತಿಯ ಕಾಲಚಕ್ರದಿಂದ ಆಗುವ ಋತುವಿನ ಬದಲಾವಣೆಗೆ ಒಂದು ಕಾಲಮಿತಿಇದ್ದು ಅದಕ್ಕೆ ಸರಿಯಾಗಿ ಮನುಷ್ಯ ಪ್ರತಿಸ್ಪಂದಿ ಜೀವನವನ್ನು ಸುಖಮಯವಾಗಿರಿಸಲು ಮುಂದಾಲೋಚಿಸುತ್ತಾನೆ. ಆದರೆ ಸುಖ ಹಾಗೂ  ದುಃಖ  ಮನುಷ್ಯನ ಪಾಲಿಗೆ ಯಾವಾಗ ಕರುಣಿಸುವುದು ಎಂದು ಯಾರೂ ಊಹಿಸಲಾಗದ  ಒಂದು ಕಟು  ಸತ್ಯ . ಯಾವುದೇ ಕಾಲಮಿತಿ  ಹಾಗು ಅನುಪಾತವಿಲ್ಲದ  ಈ  ಸುಖ ದುಃಖದ  ನಾಣ್ಯ ನನಗೆ ಕರುಣಿಸಿದ್ದು ಎಂದೂ ಮರೆಯಲಾಗದ ಮುಂಗಾರಿನ ಮಳೆ... ಹಾಗೂ  ಲಾವಾರಸ ಚಿಮ್ಮುವ volcano.

ನಮ್ಮ ಸೈನ್ಯ ವಾನರ ಸೈನ್ಯಕ್ಕಿಂತ ದೊಡ್ಡದಾದರೂ ಎಲ್ಲರೂ  ಸೇರುವುದು ಬಹಳ ಅಪರೂಪ. ಈ  ಅಪರೂಪದ ಕ್ಷಣವನ್ನು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿಸಿ  ಸಂತಸದಿಂದ ನಲಿಯುವುದು ತಾನಾಗಿಯೇ ನಡೆದುಕೊಂಡು  ಬಂದ ರೂಡಿ. 

23 ಜೂನ್ 2012ರಂದು ನಮ್ಮ ಸೈನ್ಯ ಎಣಿಕೆಯಸ್ಟಿದ್ದರೂ  ಜೂನ್ 24ರಂದು ಎಲ್ಲಿಯಾದರೂ ಹೋಗಬೇಕೆಂದು plan ಮಾಡಿದ್ವಿ. ಆದರೆ place  ಮಾತ್ರ ಯಾವುದು ಅಂತ ನಾವು ಎಲ್ರೂ  ಸೇರೋವರೆಗೆ ಯಾರಿಗೂ  ಗೊತ್ತಿರ್ಲಿಲ್ಲ. ಕಡೆಗೆ BRP  (ಲಕ್ಕವಳ್ಳಿ)ಗೆ ಅಂದ್ಕೊಂಡು ಬಸ್ ಸ್ಟ್ಯಾಂಡ್ ಹತ್ರ ಸೇರೋದು ಅಂತ ಆಯ್ತು . ನಮ್ಮ ಈ  ಸುಮಧುರ ಕ್ಷಣದ ಬಗ್ಗೆ ಹೇಳೋದಕ್ಕಿಂತ ಮೊದಲು ನಮ್ಮ ಕಿರು ಸೈನ್ಯದ ಪರಿಚಯ ಮಾಡಿಕೊಡ್ತೇನೆ.  

ಭವ್ಯ (ಲಿಚ್ಚಿ), ಕೃಷ್ಣ (ಕಿಟ್ಟಿ), ಕಿರಣ (ಗುಸ್ಸಿ), ರವಿ (boost), ರೋಹಿತ್ (ಸುಜ್  ಹಾಗೂ  ನಮ್ಮೆಲ್ಲರ ಪ್ರೀತಿಯ ಪುಟ್ಟ ತಮ್ಮ), ಸೌಜನ್ಯ (ಡಾರ್ಲಿಂಗ್ ಗೋಬಿ) ಹಾಗು ಸುಜಾತ (ಸುಜ್). ನಾನು ಸೇರಿ totally  8ರ ಪುಟ್ಟ ಸೈನ್ಯ... hello  excuse  ಮೇ ... 8 ಜನ ಇದ್ರೂ ಒಂದು ಸಾವಿರ ಆನೆ ಬಲಕ್ಕಿಂತ ಕಡಿಮೆಯೇನಿರ್ಲಿಲ್ಲ. 

ಕಿಟ್ಟಿ, ಬೂಸ್ಟ್ , ಸುಜ್, ಪುಟ್ಟ ಹಾಗು ನಾನು ಬೆಳಗ್ಗೆ 8:30 ಅಷ್ಟೊತ್ಗೆ  shimogga private  ಬಸ್ ಸ್ಟ್ಯಾಂಡ್ ಗೆ ಬಂದ್ವಿ. ಸ್ವಲ್ಪ ಹೊತ್ತಿಗೆ ನಮ್ಮ ಲಿಚ್ಚಿ  ಮತ್ತೆ ಗೊಬಿ join  ಅದ್ರು . ಆದ್ರೂ  ನಮ್ಮ ಸೈನ್ಯಕ್ಕೆ ಇನ್ನೂ  ಬಲ ಬಂದಿರ್ಲಿಲ್ಲ. ಯಾಕಂದ್ರೆ  ಸೂರ್ಯ ಎದ್ದು 3 ಗಂಟೆ ಆಗಿದ್ರೂ ನಮ್ಮ ಸೈನ್ಯದ centre  of  attraction  ನನ್ನ ಗುಸ್ಸಿ(ಕಿರಣ) ಎದ್ದಿದ್ದೇ  8 ಗಂಟೆಗೆ. ಆದ್ರೂ  ಪಾಪ ಅರ್ದ ಗಂಟೇಲಿ ready  ಆಗಿ  ಬಂದ.

ನಮ್ಮ ನಮ್ಮ ಲ್ಲಿನ  ಸಣ್ಣ ಪುಟ್ಟ ವಿಷಯ, ವಸ್ತು, ಸುತ್ತ ಮುತ್ತಲಿನ ಸಾರ್ವಜನಿಕರೇ ನಮ್ಮಯ ಖುಷಿಯ ಸಿರಿ.  ಅವತ್ತು ನಮ್ಮ ಲಿಚ್ಚಿ ಸಣ್ಣ ಪಾದಿಕೆ  ಹಾಕಿಕೊಂಡು ಬಂದಿದ್ಲು. ಅದರಲ್ಲಿ ಏನ್  ಸ್ಪೆಷಲ್... ಹೇಗೋ  ಸ್ವಲ್ಪ tight  ಇರೋದ್ನ adjust  ಮಾಡ್ಕೊಂದಿರ್ತಾಳೆ  ಅಂದ್ಕೊಂಡಿರ್ತಿರಾ ... ಆದರೆ ನಮ್ಮ ಲಿಚ್ಚಿ choice  ಎಲ್ಲರಿಗಿಂತ ವಿಭಿನ್ನ. ಅವಳು ಹಾಕಿಕೊಂಡಿದ್ದ ಆ  ಸಣ್ಣ ಪಾಡಿಕೆ ಕಿವಿಗೆ ತುಂಬಾ ಚೆನ್ನಾಗಿ ಕಾಣ್ತಿತ್ತು. ಗೊತ್ತು ಕಣ್ರೀ ಪಾದಿಕೆ  ಕಾಲಿಗೆ ಹಾಕೋದು ಅಂತ ಆದ್ರೆ ನಮ್ಮ ಲಿಚ್ಚಿ ಹಾಕಿದ್ದು ಪಾದಿಕೆಯ earrings. ಲಿಚ್ಚಿಗೆ   ರೆಗಾಡ್ಸ್ಕೊಂದು ಎಲ್ಲರ ಬಾಯಿನಲಿದ್ದ lollipop  ಖಾಲಿಯಾಗಕ್ಕೂ  ಬಸ್ ಬಂತು. ಬಸ್ನಲ್ಲಿ ಯಾರಿದರೆ ಏನು  ಗಮನ ಕೊಡದೆ ನಮ್ಮ ಪಾಡಿಗೆ ಮಜಾ ಮಾಡ್ಕೊಂಡು ಕೂತಿದ್ವಿ.. ಕಿಟ್ಟಿ ಮತ್ತೆ ಗುಸ್ಸಿ ಕೂತಿದ್ದ adjacent  seat ನಲ್ಲಿ   ಇಬ್ರು ladies  ಕೂತಿದ್ರು ... ಅವರಿಬ್ಬರ ದೃಷ್ಟಿ ಎಲ್ಲಾ  ಆಟದಲ್ಲಿ ಪ್ರಸಿದ್ದಿಯಾಗಿರುವ ನಮ್ಮೆಲ್ಲರ great  player ...stadium ನೆ ನಡುಗಿಸೋ ಬಲ ಹೊಂದಿರುವ ಗುಸ್ಸಿ ಮೇಲಿತ್ತು. ನಾವು camera  ತೊಗೊಂಡು ಹೊಗಿರ್ಲಿಲ್ಲ... ಗುಸ್ಸಿ ಅವನ mobile  ನಿಂದಾನೆ  photo  ತಗಿತಿದ್ದ . ಒಂದೆರೆಡು snaps  ತೆಗೆದದ್ದಷ್ಟೇ ... ಬರಿ ನಿಮದ್ಗೆ  photo  ತೆಗಿತಿದಿಯಾ ನಾವು ಕಾಣ್ಸಕಿಲ್ವ  ನಿನ್ಗೆ  ಅಂತ ನಮ್ಮ ಇಬ್ರುದು photo  ತೆಗಿ  ಅಂತ ಮಾತು ಕೆಳ್ತಿದ್ದಹಾಗೆ  ಎಲ್ಲರ ಕಣ್ಣು ಆ  ಇಬ್ಬರ ಹೆಂಗಸರ ಕಡೆ ತಿರುಗಿತು.

ಹೆಂಗಸು : ಯಾಕೋ ನಮದ್ಗೆನು  ಫೋಟೋ ತಗಿಯೋ ...
ಗುಸ್ಸಿ : !!!!!!
ಹೆಂಗಸು : ನಮಗೆ ಬಿಳಿ  ಕೂದಲು ಆಗೈತೆ ಅಂತಾನ ...

ಪಾಪ ಗುಸ್ಸಿ ಕಷ್ಟ ಪಟ್ಟು ಒಂದು ಫೊಟೊ  ತೆಗೆದ... ತಕ್ಷಣ ಒಂದು ನಿಮಿಷ... ಇನ್ನೊಂದು snap  ತಗಿತೀನಿ  ಅಂತ click  ಮಾಡಿದ...

ಎರಡನೇ ಕ್ಲಿಕ್ ಏನಿಕ್ಕೆ  ಅಂತ ಗೊತ್ತಾ ... ಆ  ಇಬ್ರೂ  ಹೆಂಗಸ್ರು  ಬಹಳ ಜೋರಿದ್ರು ... ಮೊದಲನೇ shot  ಹೇಗೆ ತೆಗೆದಿದ್ನೋ ಗೊತ್ತ... ಮತ್ತೆ ತೋರ್ಸು ಅಂದ್ರೆ picture  ಬಿಡತ್ತೆ ಅಂತ ಮನವರಿಕೆ ಆಗಿ ಮತ್ತೊಂದು click  ಮಾಡಿದ...

ನಮ್ಮ ಗುಸ್ಸಿ ಅಂದ್ಕೊಂಡದ್ದು  ಸರಿಯಾಗೇ  ಇತ್ತು ...

ಹೆಂಗಸು : ಏ  ತೋರ್ಸು  ಹೆಂಗ್  ಬಂದೈತೆ ಅಂತಾ...

ಗುಸ್ಸಿ : ಹೂ .... ನೋಡಿ...

ಹೆಂಗಸು : ಅದಕ್ಕೆ ಸಾತಿ - ಪಾತಿ  ಅಂತ ಹೆಸರು ಕೊಡು...

ನಾವು ಕೇಳದೇ  ಅವರ ನಾಮದೆಯವ ಪರಿಚಯಿಸಿದ ಈ  ಮಹಿಳೆಯರು ಹಾಗೆ ಗುಸ್ಸಿಗೆ ಮಾತಾಡ್ಸ್ಲಿಕ್ಕೆ  ಶುರು ಮಾಡಿದ್ರು ...

ಸಾತಿ : (ಗುಸ್ಸಿ ಕಡೆ ನೋಡ್ತಾ... ಯಾವ ಊ ರು ನಿಮ್ದು ...

ಗುಸ್ಸಿ : ಇದೇ  ಊರು.

ಕಿಟ್ಟಿ : ಇಲ್ಲೇ ಚಿಕ್ಕಲ್ ಗುರುಪುರ...

ಸಾತಿ: ಎಲ್ಗೆ ಹೋಗ್ತಾ ಇದಿರಾ...

ಕಿಟ್ಟಿ : ಕಿರಣಗೆ   ಹುಡುಗಿ ನೋಡಕ್ಕೆ...

ಸಾತಿ: ಅಪ್ಪ - ಅಮ್ಮ ಇಲ್ಲದೆ ಹುಡುಗಿ ನೋಡಕ್ಕಾ ... ಎನ್  ಸುಳ್ಳುಹೆಳ್ತಿರಾ ...

ಕಿಟ್ಟಿ : ನನ್ನ ಮತ್ತೆ ಗೊಬಿಗೆ ತೋರ್ಸಿ ಇವರೇ ಅಂದ...

ನಮಗೋ  ನಗು ತಡಿಲಿಕ್ಕೆ ಆಗ್ತಿರ್ಲಿಲ್ಲ ... ಸಿಕ್ಕಾಪಟ್ಟೆ ನಗ್ತಾ ಇದ್ವಿ ...

ಸಾತಿ : ಇವ್ರು  ನೋಡಿಲ್ಲಿ ನಗ್ತಿರೋದು ಅಂತ ನಮ್ಕಡೆ ನೋಡಕ್ಕೆ ಶುರು ಮಾಡಿದ್ರು

ನಮಗೆ ಯಾಕೋ ಎಡವಟ್ಟು ಆಗೋಹಾಗೆ ಅನ್ಸ್ತು... ಸುಮ್ನೆ ನಮ್ಮ ಪಾಡಿಗೆ ನಾನು ಗೋಬಿ ಮಾತಾಡ್ತಾ ಕೂತ್ವಿ ...

ಯಾವಾಗ ಇವರು ಇಳಿತಾರೋ  ಅಂತ ಕಾಯ್ತಾ ಇದ್ವಿ ... ಕಾಚಿನಕಟ್ಟೆ ಹತ್ರ ಅರುಣ - ಕಿರುಣ  ಬರ್ತೀವಿ  ಅಂತ ಸದ್ಯ   ಇಳಿದ್ರು ...

ಕಂಡಕ್ಟರ್ : ಬೆಳಗ್ಗೆ ಬೆಳಗ್ಗೆನೇ tight  ಆಗಿದ್ರು ಅನ್ಸತ್ತೆ...

ಹಾಗೆ ಮಾತಾಡ್ತಾ ನಾವು ನಮ್ಮ destination  ತಲಪಿದ್ವಿ ... ಅಲ್ಲೇ ಸ್ವಲ್ಪ ಮುಂದೆ ice  cream , ಕಡ್ಲೆಕಾಯಿ ತೊಗೊಂಡು ಡ್ಯಾಂ  ಹತ್ರ ಬಂದ್ವಿ... ice  cream  ತಿಂದು ಎಲ್ಲರ ಮುಖ ಬೆಣ್ಣೆ ತಿಂದ ಮಂಗನ ಹಾಗಾಗಿತ್ತು... ಪೀ... ಅಂತ ಎಲ್ಲೋ sound  ಕೇಳಿಸ್ತು... ನೋಡಿದರೆ ನಮ್ಮ ಗುಸ್ಸಿ ಏನೋ experiment  ಮಾಡ್ತಿದ್ದ ... ಎಲೆ ಕಿತ್ತಿ  ಪೀಪಿ ಮಾಡಿ ಊದ್ತಇದ್ದ . ಎಲ್ರೂ  ಕಿರಣ ಹೆಂಗೋ ... ಮಾಡೋದು... ನಮಗೂ ಮಾಡ್ಕೋಡೊ ಅಂತ ಒಂದಿಷ್ಟು ಪೀಪಿ ಮಾಡಿ ಊದಿದ್ದೂ  ಆಯ್ತು ... sound  ಬರದೆ ಬರಿ ಗಾಳಿ ಬಿಟ್ಟಿದ್ದೂ   ಆಯ್ತು.

ಸರಿ back  water  ಹತ್ರ ಹೋಗುವ ಅಂತ ಹೊರಟ್ವಿ...

ನಾವು ನಿಜವಾಗ್ಲೂ BRP (ಲಕ್ಕವಳ್ಳಿ) ಗೆ ಬಂದಿದೀವೋ ಅಥವಾ ಊಟಿಗೆ ಬಂದಿದೀವೋ ಅನ್ಸ್ತಾ ಇತ್ತು... ಯಾಕೆಂದರೆ ನಾವು ಎಲ್ಗೆ ಹೋದರು ಜೋಡಿ ಹಕ್ಕಿಗಳು ಕಣ್ಣಿಗೆ ಬೀಳ್ತಿದ್ರು... ಇವರನ್ನ ನೋಡಿ ನಮಗೇನು ಕೆಲಸ ಅಂದ್ಕೊಂಡ್ರಾ.. ನಾವು ಹುಡುಗಿ ಕಾಲು ಕುತ್ತಿಗೆ ನೋಡಿ licence  ಇದಿಯೋ ಇಲ್ವೋ.. ಅಂತ ಚೆಕ್ ಮಾಡ್ತಿದ್ವಿ... ಪಾಪ ಹಕ್ಕಿಗಳು ಮಾತ್ರ ಅವರ ಪಾಡಿಗೆ ಅವರದೇ ಆದ ಲೋಕದಲ್ಲಿ ಇದ್ರು ...

ಪುಟ್ಟಂಗೆ  ನೀರಿಗೆ ಹೋಗಿ ಆಡಬೇಕು ಅಂತಾ  ಸಕತ್ ಖುಷಿಲಿ ಬಂದಿದ್ದ... ಅವನ help ಇಂದ ನಾನು ಗೋಬಿ ಕೆಳಗೆ ನೀರಿನ ಹತ್ರ ಬಂದ್ವಿ ... ಎಲ್ರೂ  bag  ಒಂದ್ಕಡೆ ಹೊತ್ತಾಕಿ ನೀರಿಗೆ ಇಳಿದ್ವಿ ... ಒಬ್ರಿಗೊಬ್ರು ನೀರನ್ನ ಎರಚಾಡ್ಲಿಕ್ಕೆ ಶುರು ಮಾಡಿದ್ವಿ... ಲಿಚ್ಚಿ  ಸುಜ್ ಗೆ ನೀರು ಹಾಕ್ತಿದ್ಲು ... ಹೇಗಾದ್ರು ಮಾಡಿ ಸುಜ್ ಗೆ ನೀರಲ್ಲಿ ಮುಳುಗಿಸ್ಬೇಕು ಅಂತ ನಾನು ಪುಟ್ಟಂಗೆ  ಹೇಳಿ ಸುಜ್ ಗೆ ನೀರಿಗೆ ತಳ್ಳಿದೆ... ಪಾಪ ಮಂಡಿಗೆ ಕಲ್ಲು ತಾಗಿ ಸರೀ ಪೆಟ್ಟಾಯ್ತು ... ಪಾಪ... m  sorry  suj ...

 ನೀರಲ್ಲಿ ಆಡ್ತಾ ಒಂದು ಸಣ್ಣ ಹಸಿರು ಹಾವು ಕಾಣಿಸ್ತು... ಎಲ್ರೂ  ಕೂಗಿದ್ದೇ... ಕಿಟ್ಟಿ ಅದನ್ನಾ  ದಡಕ್ಕೆ ತಂದು ಬಚಾವ್ ಮಾಡ್ದ... ನಾನು ಈ  ವಿಷಯದಲ್ಲಿ ಹೆದರಿ ಕೂಗೋದು ಜಾಸ್ತಿ ... ನನ್ನ ಕೂಗಿಗೆ ಅಕ್ಕ ಪಕ್ಕ ಇರೋರು ಸೇರಿದ್ರು ... ಹಸಿರು ಹಾವು... ಹೆಬ್ಬಾವಿನ ಮ... ವಿಷ ಇದೆ... ಹಾರತ್ತೆ  ಮುಟ್ಬೇಡಿ  ... ಸಾಯಿಸ್ರಿ  ಅಂತ ಕಲ್ಲು ತೊಗೊಂಡು ಚಚ್ಚಿ ಕೊನೆಗೂ ಪರಲೋಕಕ್ಕೆ ಕಳ್ಸಿದ್ರು... ನಾನು ಕೂಗದೆ ಇದ್ದಿದ್ರೆ... ಪಾಪ  ಇನ್ನೂ  ಬದುಕಿರ್ತಿತ್ತು...

Back  water  ಆಗಿದ್ರೂ  ನಮಗೆ ಯಾವುದೊ Sea  shore  ಹತ್ರ ಬಂದಿದೀವಿ ಅನ್ಸ್ತಿತ್ತು ... ಎಲ್ರೂ  ನೀರಲ್ಲಿ ಆಡಿ  ಈಜು  ಬರ್ದೇ ಇದ್ರೂ ದಡದಲ್ಲಿ ಇಜು ಬರೋರ್ತರ pose  ಕೊಟ್ಟಿದ್ದೋ  ಕೊಟ್ಟಿದ್ದು... ಈ  ವಿಷಯದಲ್ಲಿ ನಮ್ಮ VIP  (ಗುಸ್ಸಿ) mobileಗೂ thanks  ಹೇಳ್ಬೇಕು ...

ತಂದಿದ್ದ ಚಿಪ್ಸ್, ಕೋಲ್ಡ್ ಡ್ರಿಂಕ್ಸ್ ಸುಜ್  ಅಮ್ಮ  ಪ್ರೀತಿ ಇಂದ ಮಾಡ್ಕೊಟ್ಟ ನೀರ್ ದೋಸೆ ಎಲ್ಲಾ  ಖಾಲಿ ಮಾಡಿದ್ರೂ  ಹಸಿವಾಗಿತ್ತು... ಹತ್ರ ಎಲ್ಲೂ  hotel  ಇರ್ಲಿಲ್ಲ... ಶಿಮೊಗ್ಗ ಬಸ್ ಹತ್ತಿ famous  ಮೀನಾಕ್ಷಿ ಭವನ್ ಗೆ ಬಂದು ಹೊಟ್ಟೆ ತುಂಬಾ  ತಿಂದು ಮರೆಯಲಾಗದ ಸವಿ ನೆನಪಿನೊಂದಿಗೆ ನಮ್ಮ ನಮ್ಮ ಮನೆ ಕಡೆ ಸಾಗಿತು ನಮ್ಮ ಪಯಣ.


ಎಷ್ಟೋ ದಿನಗಳ ನಂತರ ಮನದಲಿ ಸಂತೋಷದ ಚಿಲುಮೆಯ ಸವಿ ನೆನಪಿನೊಂದಿಗೆ ಮನೆಗೆ ಸಾಗಿದೆ...  ಮನೆಗೆ ಬರುವ ಹಾದಿಯಲ್ಲಿ ನನ್ನ ಹೂ ತೋಟದ ಕುಸುಮಗಳನು ನೋಡಿ ಮಾತನಾಡಿಸುವ ಆಸೆಯೊಂದಿಗೆ phone  ಮಾಡಿ ಸಿಗ್ತಿರಾ   ಬರ್ತೀನಿ ಅಂದೇ... ಹೂ ... ಎಂದ ಕುಸುಮಗಳು ಕರುಣಿಸಿದ್ದು  ... ಮೌನದ ತಿರಸ್ಕಾರ...ಸರಿ ನಾ ಹೊರಡ್ತೀನಿ ಅಂತ ಹೊರಟೆ...  ನನ್ನ ಸ್ವಪ್ರತಿಷ್ಟೆ ನನಗೆ ತುಂಬಾ ಮುಖ್ಯ. ಸಾಮಾನ್ಯವಾಗಿ ಎಲ್ಲರು ಅವರ ಖುಷಿಗೊಸ್ಕಾರ ನಿರ್ದಾರ ತೊಗೋತಾರೆ ಆದರೆ ನಾನು ನನ್ನ ಹೂ ತೋಟದಕುಸುಮಗಳಿಗೊಸ್ಕಾರ ... ಖುಶಿಗೊಸ್ಕಾರ ನನ್ನ ನಿರ್ದಾರ ಬದಲಾಯಿಸಿದ್ದೂ ಉಂಟು... ಸದಾ ನವ ಚೈತನ್ಯದ ಚಿಲುಮೆಯನ್ನು ಕರುಣಿಸಿದ ನನ್ನ (ಹುಡುಗರು...) ಕುಸುಮಗಳು ನನ್ನ life ನಲ್ಲಿ ನನ್ನ ಖುಷಿನಾ ಅರ್ಥ ಮಾಡ್ಕೊಳ್ದೆ ಇಂದು ನನಗೆ ಸಿಡಿಲಿನ  ಮಿಂಚೊಂದನ್ನು ಕರುಣಿಸಿ ಹೃದಯದಲ್ಲಿ ಎಂದೂ ಆರದ ಅಗ್ನಿ ಪರ್ವತವನ್ನು ಉಡುಗೊರೆಯಾಗಿ ನೀಡಿದ್ದಾರೆ.


ನನ್ನ ಕುಸುಮಗಳು ಕರುಣಿಸಿದ ಈ  ತುಂಬು ಹೃದಯದ ಉಡುಗೊರೆ ನನ್ನ ಬಾಳಿನಲಿ ಎಂದೆಂದಿಗೂ  ಅಮರ.

ನನ್ನೊಲುಮೆಯ ಕುಸುಮಗಳೆ  ನಿಮ್ಮ ಬಾಳು ಸದಾ ವಸಂತವಾಗಿರಲಿ...









       

Saturday, 5 May 2012











Panchatara wow... wow...     
Panchatara wow... wow...    

Ice ತಿನ್ತಾ ಕೇಳಿದ್ನಿಮ್ಮ
hostel life history ಯನ್ನ 
ಸ್ವಲ್ಪ ಮಟ್ಟಿಗೆ ತಿಳಕೊಂಡ್ನನಗೆ 
ಬರಿಯೋಆಸೆ ಶುರುವಾಗೊಯ್ತು 
ನಿಮ್ಮ history ನೇ
Panchatara wow... wow...  

ಪೆನ್ನು ಪೇಪರ್ ಇಟ್ಕೊಂಡು ಕೂತೆ
ಕಣ್ಣ ಮುಂದೆ ನಿಮ್ಮ history 
ಒಂದೊಂದಾಗೆ ನೆನಪಿಗೆ ಬಂತು 
ಅದುವೇ ಇಲ್ಲಿದೆ ಎಲ್ಲರಿಗಾಗಿ 
ಪಂಚತಾರ wow... wow... 

ಬೆಳಗಾಗೆದ್ದು hostel ಬಿಟ್ಟು 
class room ನಲ್ಲಿ ಕಣ್ ಬಿಟ್ಕೊಂಡು 
ನಿದ್ದೆ ಮಾಡಿದ favourite students ಈಗಲೂ ನೀವೇನೇ. ..
ಪಂಚತಾರ wow... wow... 

ಡಿಗ್ರಿ life ನಲ್ಲಿ ನೀವು ಕಲಿತ 
p & F ಸ್ವಾಪಿಂಗ್ ಪಾಠ  
ನನಗೂ ಕಲಿಸಿದ great friends ನೀವು ಇಬ್ರೆನೇ...
Fanchatara wow... wow..

exam ಇದ್ರು carom ಆಡಿ
placement ನಲ್ಲಿ ಕೆಲಸ ಪಡೆದು 
masters ಮಾಡ್ತಿರೋ ನಿಮ್ಮ life ಒಂದು mystery ನೇ
Fanchatara wow... wow..

hostel ಮುಂದೆ Bar ಇದ್ರು 
Barನ  ಮುಂದೆ ಓಡಾಡಿದ್ರು
ಇವರು ಮಾತ್ರ ಹಾಕ್ತ ಇದ್ರು 
ಭಟ್ಟ ಮಾಡಿರೋ 30 ml hot ಡ್ರಿಕನ್ನೇ 
Fanchatara wow... wow..

ಅಡಿಗೆ ಭಟ್ಟಂಗೆ ಮೊಟ್ಟೆ ಒಡೆದು
ಅಜ್ಜನ ಪಕ್ಕದಲಿ ಪಟಾಕಿ ಸಿಡಿಸಿ 
ಕೊರೆಯೋ ಚಳಿಲಿ ಕುಂದಾದ್ರಿ ಹತ್ತಿ 
ಪೋಲಿಸ್ ಮಾಮಂಗೆ ಎದ್ರಾಕೊಂಡು
ಬೈಕ್ ನಲ್ಲಿ ತ್ರಿಲೋಕ ಸುತ್ತಿದ 
ನಿಮ್ಮ trip great mysteryನೆ 
Fanchatara wow... wow..

Degree ಲೈಫ್, hostel life 
ಎರಡೂ ಮುಗಿದು ದೂರ ಇದ್ರೂ
ವರ್ಷಕ್ಕೊಮ್ಮೆ ಸೇರೋನೀವು 
ಯವಾಗ್ಲೂನು   ಮಾಡ್ತಾಇರಬೆಕ್ 
great mysteryನೇ  

Thursday, 3 May 2012

True Love


ನನ್ನಯ ಬಾಳಿನಲ್ಲಿ ನನ್ನ ಭಾವನೆಗೆ ಸ್ಪಂದಿಸಿ ವಿಶ್ವಾಸದ ಹಾಗು ಪ್ರೀತಿಯ ಬೆಸುಗೆಯನ್ನು ನಿಸ್ವಾರ್ಥದಿಂದ ಬೆಸೆದ ಅಪೂರ್ವ ಹಾಗು ವಿಸ್ಮಯದ ಗೆಳೆಯರ ಪರಿ ಇದು. ವಿಶ್ವಾಸ ಹಾಗು ಪ್ರೀತಿಯ ಸಿರಿಯನ್ನು ನಿಸ್ವಾರ್ಥದಿಂದ ಕರುಣಿಸುವ ಪ್ರಾಣಿಗಳೆಂದರೆ ನನಗೆ ತುಂಬಾ ಪ್ರೀತಿ. ನನ್ನ ಮನೆಯ ಹತ್ತಿರ ನನಗೆ ಮೊದಲು ಹತ್ತಿರ ಆಗಿದ್ದು Don. ತುಂಬಾ simple ಯಾರಿಗೂ ತೊಂದರೆ ಕೊಡ್ತಿರ್ಲಿಲ್ಲ. ಮನೆಯಲ್ಲಿ ಎಲ್ಲರು ಅವನ ಹತ್ರ ಹೋಗಬೇಡ ಅಂತ ಬೈತಿದ್ರು. ಆದರು ನಾನು ಸುಮ್ನಿರ್ತಿರ್ಲಿಲ್ಲ. ಮನೇಲಿ ಯಾರಿಗೂ ಗೊತ್ತಿಲ್ಲದಹಾಗೆ ಚಪಾತಿ ಹಾಲು ಹಾಕ್ತಿದ್ದೆ. ಒಂದು ಆಶ್ಚರ್ಯ ಅಂದ್ರೆ ಇವನು ಬೋಗಳಿದ್ದೆ ನೋಡಿಲ್ಲ. ಇವನು ಏನ್ ಮಾಡಿದ್ರು ಸುಮ್ನಿರ್ತಾನೆ ಅಂತ ಕಣ್ಣ ಹತ್ತಿರ ಬೆರಳಿಡಲಿಕ್ಕೆ ಹೋದ ಆಗಲೇ ಗೊತ್ತಾಗಿದ್ದು ಅವನ ಸಿಟ್ಟು ಏನು ಅಂತ ಅವತ್ತೇ first ಅವನು ಬೊಗಳಿದ್ದು. ಗಾಯ ಮಾಡಿಕೊಂಡು ಬಂದ್ರೆ ಅವನಿಗೆ ನಂದೇ treatment. ನಾನು ಏನೇ ಮಾಡಿದ್ರು ಅವನ ಒಳ್ಳೆದಿಕ್ಕೆ ಅಂತ ಅವನಿಗೆ ಅನ್ಸಿತ್ತು ಅನ್ಸತ್ತೆ ಸುಮ್ನೆ ಇರ್ತಿದ್ದ. ಸ್ವಲ್ಪ ದಿನದ ನಂತರ ಒಂದು ವಾರ ಆದ್ರೂ ಮನೆಕಡೆ ಬಂದಿರಲಿಲ್ಲ. ನನ್ನ ಒಂದು ಕೂಗಿಗೆ ಓಡೋಡಿ ಬರ್ತಿದ್ದೊನು ಎಷ್ಟು ಕೂಗಿದ್ರೂ ಕಾಣಿಸಲಿಲ್ಲ. ಆಮೇಲೆ ಗೊತ್ತಾಯಿತು municipality ಅವರು ಅವನ್ನ ಕರಕೊಂಡು ಹೋಗಿದಾರೆ ಅಂತ. life ನಲ್ಲಿ ಒಬ್ಬ friend ಕಳಕೊಂಡು ತುಂಬಾ ಬೇಜಾರಾಗಿತ್ತು.

ಅನಂತರದ ಸಮಯದಲ್ಲಿ ಪರಿಚಯ ಆಗಿದ್ದು Mounty. ಪ್ರತಿ ದಿನ ಕಾಲೇಜ್ ಗೆ ಹೋಗ್ಬೇಕಿದ್ರೆ ಬಸ್ ಸ್ಟಾಪ್ ತನಕ ಬಿಟ್ಟು ಹೋಗ್ತಿದ್ಲು. ಮನೆ ಹತ್ರ ಎಲ್ಲೇ ಹೋದರು ನನಜೋತೆ ಬರ್ತಿದ್ಲು. ಒಂದು ದಿನ ರಾತ್ರಿ walk ಹೋಗ್ಬೇಕಿದ್ರೆ ಕಬ್ಬಿನ ಗಾಡಿಇಂದ ಕಬ್ಬು ಕಿತ್ತಿ ತಿಂತಿದ್ದೆ. ಜೊತೆಗಿದ್ದ Mounty ತನಿಗೂ ಬೇಕು ಅಂತ jump ಮಾಡಿ ಕೊಡು ಅಂತ ಹಟ ಮಾಡ್ಲಿಕ್ಕೆ ಶುರು ಮಾಡ್ದ. ನನಗೆ ಕೊಡಲಿಕ್ಕೆ ಹೆದರಿಕೆ ಆದ್ರೂ ಅವನು ಮಾಡೋದು ನೋಡ್ಲಿಕ್ಕಾಗದೆ ಒಂದು ಸಣ್ಣ ತುಂಡು ಕೊಟ್ಟೆ. ನನಿಗೆ ನಂಬಲಿಕ್ಕಾಗಲಿಲ್ಲ. ಸಿಪ್ಪೆಲಿರೋ ರಸ ಹೀರ್ಕೊಂಡು ಸಿಪ್ಪೆ ಬಿಸಾಕ್ತಿದ್ಲು... ತಾನು ಮರಿ ಹಾಕೋ time ನಲ್ಲೂ ಕೂಡ ನನ್ನ ಎದುರಿಗೆ ಬಂದು ಬೌ ಬೌ ಅಂತ ಅಂದ್ಲು... ನಾನು ಎನಿಕ್ಕೆ ಅಂತ ಅವಳ ಹಿಂದೆ ಹೋದೆ. ಪಕ್ಕದ ಮನೆ car shed ನಲ್ಲಿ ಜಾಗ ಮಾಡಿಕೊಂಡು ಮಲಗಿದ್ಲು. ನಾನು ಸ್ವಲ್ಪ ಹೊತ್ತು ಅಲ್ಲೇ ಇದ್ದೆ 4 ಮರಿ ಹಾಕಿದ್ಲು ಹಸಿವಾಗಿರತ್ತೆ ಅಂತ ಚಪಾತಿ ಕೊಟ್ಟೆ ಹತ್ರ ಹೋದರು ಏನು ಮಾಡಲಿಲ್ಲ ಸುಮ್ನೆ ಊಟ ಮಾಡಿದ್ಲು. 

ಮನೇಲಿ ನಾನು ಇವರ ಜೊತೆ ಇಷ್ಟೊಂದು attachment ಇಟ್ಕೊಂಡಿರೋದು ನೋಡಿ uncle ಒಬ್ರು ನಮ್ಮ ಮನೇಲಿ German Shepherd - Doberman cross breed ಇದೆ ಬೇಕಾ ಅಂದ್ರು. ಸಕತ್ ಖುಷಿಲಿ ನಾನೇ uncle ಮನೆಗೆ ಹೋಗಿ ಒಂದು ಸಣ್ಣ bag ನಲ್ಲಿ ಕರಕೊಂಡು ಬಂದೆ. ಅವನೇ ನನ್ನ Rockey. Actually ಅವಳು but ನಾನು ಮಾತಾಡ್ಬೇಕಿದ್ರೆ ಅವನು ಅಂತಾನೆ use ಮಾಡ್ತೇನೆ.

ನಮ್ಮ ಮನೇಲಿ ನಾನು ಕೊನೆಯ ಮಗಳಾಗಿದ್ದೆ ಆದ್ರೆ Rockey ಬಂದಮೇಲೆ ಇವನು ನಮ್ಮೆಲ್ಲರ ಮುದ್ದಿನ ಮಗುವಾಗಿದ್ದ. ನಾನು ಇವನಿಗೆ ಮನೆಗೆ ಕರಕೊಂಡು ಬಂದಿದ್ದು ಜನವರಿ 5 1998. ಹಾಗಾಗಿ ಅವತ್ತೇ ಅವನ Birthday Celebrate ಮಾಡೋದು. Birthday ಗೆ ಅವನಿಗೆ ಇಷ್ಟ ಇರೋ ಎಲ್ಲ items ಕೊಡ್ತೀನಿ. Military Discipline ಇವನಿಗೆ ಅದೆಲಿಂದ ಬಂದಿತ್ತೋ ಗೊತ್ತಿಲ್ಲ. ಬೆಳಿಗ್ಗೆ ಒಂದು egg ಒಂದು glass ಹಾಲು... ಬರಿ ಹಾಲು ಕೊಟ್ರೆ bowl ಕಡೆ ತಿರುಗಿ ಕೂಡ ನೋಡ್ತಿರ್ಲಿಲ್ಲ. ಚಪಾತಿ ಕೊಟ್ರೆ ಮಾತ್ರ ತಿಂತಿದ್ದ. ಅಮ್ಮ ಒಂದು ದಿನ ರಾಗಿ ತುಂಬಾ ಒಳ್ಳೇದು ಅಂತ ರೊಟ್ಟಿ ಮಾಡಿ ಕೊಟ್ರು ಅದನ್ನ ನೋಡ್ತಿದ್ದಹಾಗೆ ಕೂಗಾಡ್ಲಿಕ್ಕೆ ಶುರು ಮಾಡ್ದ. ಯಾವ ಕ್ಯಾಲೆಂಡರ್ ಕೂಡ ನೋಡ್ದೆ ಇವತ್ತು Sunday ಅಂತ ಮಂಚದ ಕೆಳಗೆ ಕೂತ್ಕೊತಿದ್ದ ಯಾಕೆಂದರೆ ಅವತ್ತು ಸ್ನಾನ ಮಡ್ಸ್ತಾರೆ ಅಂತ. ಹಾಗಂತ ನೀರಿಗೆ ಏನು ಹೆದರ್ತಿರ್ಲಿಲ್ಲ. ಎಂಥಾ ಜೋರು ಮಳೆ ಇದ್ರು morning, evening and night walk ಆಗ್ಲೇ ಬೇಕಿತ್ತು. ಮಳೆ ಅಂತ ಕೆಲವಸಲ rain coat ಹಾಕಿ ಕರ್ಕೊಂಡ್ಹೋದ್ರೆ ಸಲೀಸಾಗಿ ಬರ್ತಿದ್ದ. ಸ್ನಾನ ಆದಮೇಲೆ towel ಇಂದ ವರಸ್ಕೊಲ್ದೆ ಒಳಗೆ ಹೋಗ್ತಿರ್ಲಿಲ್ಲ. ಕೈನಲ್ಲಿ brush (comb) ಹಿಡ್ಕೊಂಡ್ರೆ ಎದ್ರಿಗೆ ಬಂದು ಕೂತ್ಕೊತಿದ್ದ brush ಮಾಡು ಅಂತ. ನಾನು college ಇಂದ bicycle ನಲ್ಲಿ ಮನೆಗೆ ಬರ್ಬೇಕಿದ್ರೆ ಕೆಲವಸಲ ಅವನು walk ಮುಗಿಸಿ ಮನೆಗೆ ಹೊರಡೋವಾಗ ನಮ್ಮ race ಶುರು ಆಗೋದು. ಯಾವದೇ ಕಾರಣಕ್ಕೂ ಸೋಲ್ತಿರ್ಲಿಲ್ಲ ಪ್ರತಿಯೊಂದರಲ್ಲೂ ತಾನೇ first ಇರ್ಬೇಕು ಅವನಿಗೆ. ನನಗಿಂತ ಮೊದ್ಲು ಮನೆ ಸೇರ್ತಿದ್ದ. 

ಇವನದೊಂದು specialty ಏನಂದ್ರೆ ಮಲ್ಗೊದಿಕ್ಕೆ ಹಾಸಿಗೆ ದಿಂಬು ಇರಲೇ ಬೇಕು. ಮಲಗಿದ್ದಾಗ ಎಬ್ಬಿಸಿದ್ರೆ ತುಂಬಾ ಸಿಟ್ಟು. ಒಮ್ಮೆ ಎಲ್ಲರು ಹೊರಗೆ ಹೋಗಿದ್ವಿ ಮನೇಲಿ ಅಣ್ಣನ ಜೊತೆ ಅವನೊಬ್ನೆ ಇದ್ದ. ನಾವು ಮನೆಗೆ ಬಂದ ಮೇಲೆ ಖುಷಿಲಿ ಕುಣಿದಾಡಿದ ಆಮೇಲೆ ಬಿಟ್ಟು ಹೊಗಿದಕ್ಕೆ table ಮೇಲೆ ಇಟ್ಟಿದ್ದ paper ಗಳನ್ನ officer ತರ ಬಿಸಾಕಿದ್ದ. ಬೇರೆ ಮಕ್ಕಳನ್ನ ಎತ್ಕೊಳೋ ತಪ್ಪು ಮಾತ್ರ ನಾನು ಯಾವತ್ತು ಮಾಡ್ತಿರಲಿಲ್ಲ. ಏಕಂದ್ರೆ ಒಂದು ಸಲ ಅನುಭವ ಆಗಿತ್ತು. ಪಕ್ಕದ ಮನೆ ಆಂಟಿ ಮಗುನ ಎತ್ತ್ಕೊಂಡಿದ್ದು ನೋಡಿ ಮನೆಗೆ ಬಂದಮೇಲೆ ಸಿಟ್ಟಿನಲ್ಲಿ bow bow... bow.. boww.... ಅಂದ... ಇವನು ಏನು ಮಗುಗಿಂತ ಕಡಿಮೆ ಇರ್ಲಿಲ್ಲ. ಹೊರಗೆ ಹೋಗುವ ಬಾ ಅಂದ್ರೆ ಎರೆಡು ಕಾಲು ಕೊರಳಿಗೆ ಹಾಕಿ ಎತ್ಕೋ ಅಂತಿದ್ದ. ಮನೇಲಿ ಯಾವಾಗ್ಲೂ ನಾನು ಅವನು football ಆಡ್ತಿದ್ವಿ. ಅವನಿಂದ ball pass ಆಗೋಕೆ ಬಿಡ್ತಿರಲಿಲ್ಲ. Really good goal keeper. 

ಒಮ್ಮೆ ಮನೆಗೆ uncle ಬಂದಿದ್ರು. ಸಾಮಾನ್ಯವಾಗಿ ಯಾರೇ ಬಂದ್ರು ಅವರು ಹೋಗೋವರೆಗೂ ರೂಂ ನಲ್ಲಿ ನನ್ನ ಜೊತೆ ಇರ್ತಾನೆ. ಆದ್ರೆ uncle 2 ದಿನ ಇದ್ರು. ಒಂದು ದಿನ ಹೇಗೋ manage ಮಾಡ್ದೆ. ಎಲ್ರೂ ಒಟ್ಟಿಗೆ ಕೂತಾಗ ಅವನಿಗೂ chain ಹಾಕಿ ಕೂರ್ಸ್ಕೊತಿದ್ದೆ. ಅವರು ಎದುರಿಗೆ ಇದ್ರು ಏನು ಮಾಡ್ದೆ ಸುಮ್ನೆ ಕೂತಿದ್ದ. 2 ದಿನ ಆಗಿದೆ ಏನು ಮಾಡಲ್ಲ ಅಂತ ಅಣ್ಣ chain ಬಿಚಿದ್ದ. uncle ತಿಂಡಿ ತಿಂದು plate ತೊಲಿಲಿಕ್ಕೆ ಅಂತ ಹೊರಗೆ ಹೋದರು. ಅವರು ಹೋಗೋವರೆಗೂ ಸುಮ್ನೆ ಕೂತಿದ್ದ. ಅವರು ಮತ್ತೆ kitchen ಗೆ plate ಇಡಲಿಕ್ಕೆ ಬಂದಾಗ ಒಂದು ಚೂರು ಶಬ್ದ ಮಾಡ್ದೆ ಹೋಗಿ ಕಾಲಿಗೆ ಬಾಯಿ ಹಾಕಿದ್ದ. ನಾನು ಅಲ್ಲೇ ಇದ್ದೆ ಅವನಿಗೆ ಹಿಡ್ಕೊಂಡೆ ಬಚಾವ್. 

ಸ್ವಲ್ಪ ದಿನದಿಂದ ನನ್ನ Rockey ಗೆ ಹುಷಾರಿರಲಿಲ್ಲ. Sept 5 2006 ಅಮ್ಮ ಮಧ್ಯಾಹ್ನ ಚಪಾತಿ ತಿನ್ಸ್ತಾ ಇದ್ರು. ನಾನು ಹೊರಗೆ ಗಾರ್ಡನ್ನಲ್ಲಿದ್ದೆ. ಕಿಡಕಿ ಹತ್ರ ಬಂದು ನಾನು ಬರ್ತೀನಿ ಅಂತ ಸನ್ನೆ ಮಾಡಿದ. ಸರಿ ಅಂತ chain ಹಾಕಿ ಹೊರಗೆ ಕರಕೊಂಡು ಹೋದೆ. ಸ್ವಲ್ಪ ದೂರ ಹೋಗಿ vomit ಮಾಡಿ ಸುಸ್ತಾಗಿ ನನ್ನ ತೊಡೆ ಮೇಲೆ ಮಲಗಿದ. ಅಕ್ಕನಿಗೆ ನೀರು ತರಲಿಕ್ಕೆ ಹೇಳಿ doctor ಗೆ ಫೋನ್ ಮಾಡ್ಲಿಕ್ಕೆ ಹೇಳ್ದೆ. ನೀರು ಕುಡಿದು ನನ್ನನ್ನೇ ನೋಡ್ತಾ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು .... ಅಂತ ನನ್ನ ಮಡಿಲಲ್ಲಿ ಚಿರ ನಿದ್ರೆಯಲಿ ಸಾಗಿದ್ದ. ನನ್ನ ಹೃದಯ ಬಡಿತ ತಟಸ್ಥವಾಗಿ ದೇಹ ಇದ್ರು ಜೀವ ಇಲ್ಲದಂತಾಗಿತ್ತು ನನ್ನ ಪರಿಸ್ಥಿತಿ. ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವುದು ಹೊದ್ದು ಮಲಗು ಮಗುವೆ ಅಂತ ಜೋಗುಳ ಹಾಡಿ ಮಲಗಿಸ್ತಾ ಇದ್ದೆ ಆದರೆ ಇಂದು ಭೂತಾಯಿಯ ಮಡಿಲಲ್ಲಿ ಚಿರನಿದ್ರೆಯಲ್ಲಿದ್ದ. ಆಗಸವು ಕೂಡ ನನ್ನ Rockey ಗೆ ತುಂತುರು ಮಳೆ ಇಂದ ಕಂಬನಿಯ ಮಿಡಿದಿತ್ತು.

ಈ ಪರಿಸ್ಥಿತಿ ಇಂದ ನನಿಗೆ ಹೊರಗೆ ಬರಲಿಕ್ಕೆ ಆಗ್ತಿರ್ಲಿಲ್ಲ. ಈ ಸಮಯದಲ್ಲಿ ನನಗೆ ಸಹಾಯ ಮಾಡಿದ್ದು ನನ್ನ Lucy. ನನ್ನ ಅಕ್ಕ ರಾಜೇಶ್ವರಿ ಪ್ರೀತಿ ಇಂದ ಹಾಗೆ ಕರಿತೀನಿ. ಮನೇಲಿ ಯಾರಿಗೂ ಗೊತ್ತಿಲ್ಲದಹಾಗೆ ಐದು ಸಾವಿರ ಕೊಟ್ಟು German Shepard ಮರಿ ಕೊಡ್ಸಿದ್ಲು. ಒಂದು ತಿಂಗಳ ಮರಿ ಕರಕೊಂಡು ಬಂದೆ. ಇವನು ಕೂಡ Rockey ನೆ. ಇವನ Birthday August 2 ಅವತ್ತಿಂದ ಇವತ್ತಿನವರೆಗೂ ನಾ ಮನೇಲಿದ್ದಾಗ ಒಂದು ಕ್ಷಣ ಕೂಡ ನನ್ನ ಬಿಟ್ಟಿರಲ್ಲ. ನಾ ಮಲಗಿದಾಗ ಮಲಗ್ತಾನೆ ನಾ ಎದ್ದಾಗ ಏಳ್ತಾನೆ ಒಂದು ಕ್ಷಣ ಕಾಣಿಸಲಿಲ್ಲ ಅಂದ್ರೆ ಹುಡುಕಾಡ್ಲಿಕ್ಕೆ ಶುರು...

ಪ್ರತಿ Sunday ನನಗೆ ಸ್ವಲ್ಪ ಕೆಲಸ ಜಾಸ್ತಿ ಆದ್ರೂ ಸುಸ್ತು ಅಂತ ಅನ್ಸಲ್ಲ.. ಏಕೆಂದರೆ ಪ್ರತಿ ಹೆಜ್ಜೆಗೂ ನನ್ನ ಜೊತೆ ಹೆಜ್ಜೆ ಇಡೋ ಇವನ ಪ್ರೀತಿ ಎಲ್ಲಾನು ಮರೆಸುತ್ತದೆ. ಪ್ರತಿ ದಿನ ನಾ ಸ್ನಾನಕ್ಕೆ ಹೋದಾಗ್ಲು ಕೂಡ ನನ್ನ ಜೊತೆ ಬರ್ತಾನೆ... ಇವನು ಮಲಗೋದು ಕೂಡ ನನ್ನ ಪಕ್ಕದಲ್ಲೇ. ತನಗೆ ನಿದ್ದೆ ಬಂದಿಲ್ಲ ಅಂದ್ರು ನಾನು ಎಳೋವರೆಗೂ ಪಕ್ಕದಲ್ಲೇ ಇರ್ತಾನೆ. ನನಗೆ ಎಚ್ಚರ ಆಗಿದೆ ಆದ್ರೂ ಸುಮ್ನೆ ಮಲಗಿದಿನಿ ಅಂತ ಗೊತ್ತಾದ್ರೆ ಮಾತ್ರ ಎಳ್ಸೋತನಕ ಬಿಡಲ್ಲ. ಮನೇಲಿ ಯಾರಿಗಾದ್ರು ಹುಷಾರಿಲ್ಲ ಅಂದ್ರೆ ನಾವು ಹೇಳೋದೇ ಬೇಡ ಅವನೇ ಅರ್ಥ ಮಾಡ್ಕೊಂಡು ತೊಂದ್ರೆ ಕೊಡದೆ ದೂರ ಇರ್ತಾನೆ.

ಯಾವುದಕ್ಕೆ first priority ಕೊಡ್ಬೇಕು ಅಂತ ತುಂಬಾ ಚೆನ್ನಾಗಿ ಗೊತ್ತು ಇವನಿಗೆ. ಅಮ್ಮ ನಮಿಗೇನಾದ್ರು snacks ಕೊಟ್ರೆ ಅವನಿಗೆ beans, pedegree ಕೊಡ್ತಾರೆ. ಆದ್ರೆ first ನಮ್ಮ ಹತ್ರ ಹಟ ಮಾಡಿ ತಿಂಡಿ ಇಸ್ಕೊಂಡು ಆಮೇಲೆ ತನಿಗೆ ಕೊಟ್ಟಿರೋ items ಹೇಗಿದ್ರು ತನಿಗೆ ಅಂತ ತಿಂತಾನೆ. ನಮ್ಮ ಅಮ್ಮನಿಗೆ ತುಂಬಾ ಚೆನ್ನಾಗಿ blackmail ಮಾಡ್ತಾನೆ. ಏನಾದ್ರು ಸಾಮಾನು ಎತ್ಕೊಂಡು ಹೋಗಿ ದೂರದಲ್ಲಿ ಇಟ್ಕೊಂಡು ಕೂತ್ಕೊತಾನೆ. ಅಮ್ಮ biscuit ಕೊಡೊತನಕ ಬಿಡಲ್ಲ. 

ನೀರು ಮತ್ತೆ ball ಅಂದ್ರೆ ತುಂಬಾ ಇಷ್ಟ. ಸುಮಾರು 10 -12 ball ಹಾಳುಮಾಡಿದ್ದಾನೆ. ಈಗ steel ಚೊಂಬು, ತೆಂಗಿನಕಾಯಿನೆ ಅವನಿಗೆ ball. ಕಾಲೇಜ್ ಗೆ ಹೋಗ್ಬೇಕಿದ್ರೆ ಸುಮ್ನೆ ಇರ್ತಾನೆ. ಮನೆ ಹತ್ರ ಹೊರಗೆ ಹೋದ್ರೆ ಅದು ಹೇಗೆ ಅರ್ಥ ಆಗತ್ತೋ ಗೊತ್ತಿಲ್ಲ ಕೂಗಾಡ್ತಾನೆ. ಇವನು ಕೂಡ special ನೆಲದ ಮೇಲೆ ಏನಾದ್ರು ಹಾಸಿದರೆ ಮಾತ್ರ ನೆಲದ ಮೇಲೆ ಕೂರೋದು. chair mele ಶಿಸ್ತಿಂದ ಕುತ್ಕೊತಾನೆ. ಮಲಗಲಿಕ್ಕೆ ಹಾಸಿಗೆ ದಿಂಬು ಬೇಕು... ಇರಲಿಲ್ಲ ಅಂದ್ರೆ ಮಂಚದ ಪಟ್ಟಿನೆ ಅವನಿಗೆ ದಿಂಬು.

ನನ್ನ Rockey ಗೆ pinky ಅಂದ್ರೆ ತುಂಬಾ ಸಿಟ್ಟು. ಹಾ. .. Pinky, Minni ಇವರ ಬಗ್ಗೆ ನಾನು ಹೇಳಲೇ ಬೇಕು. ಇವರದು ತುಂಬಾ ದೊಡ್ಡ ಕುಟುಂಬ. ಒಂದು ವಾಮರ ಸೈನ್ಯನೇ ಮನೆಗೆ ಬರತ್ತೆ. ಒಂದು ವಿಚಿತ್ರ ಅಂದ್ರೆ ಎಲ್ಲರ ಮನೇಲಿ ಕದ್ದು ರಂಪ ಮಾಡಿ ಬಾರೋ ಇವರು ನಮ್ಮ ಮನೆಗೆ ಬಂದು ಶಬ್ದ ಮಾಡಿ ನಾವು ಬಂದಿದಿವಿ ಅಂತ signal ಕೊಡ್ತಾರೆ. Rockey ಗೆ ಗೊತ್ತಿಲ್ಲದಹಾಗೆ ಚಪಾತಿ ಕೊಡ್ತೀನಿ ಗೋರ್ .. ಅಂದ್ರೆ thanks ಹೇಳಿ ಹೋಗ್ತಾರೆ. Rockey Pinky, Minni ಬಂದಿದಾರೆ ಅಂದ್ರೆ ಓಡಿ ಹೋಗಿ terrase ನೋಡಿ ಓಡಿಸಲಿಕ್ಕೆ ಹೋಗ್ತಾನೆ. 

Beans, water melon,pedigree, egg, cake, bone stick ಅಂದ್ರೆ ತುಂಬಾ ಇಷ್ಟ. ಇವನ ಬಗ್ಗೆ ಸಾಮಾನ್ಯವಾಗಿ ಎಲ್ರಿಗೂ ಗೊತ್ತು. ನನಿಗೆ ಯಾರೇ ಫೋನ್ ಮಾಡ್ಲಿ ಇವನ ಬಗ್ಗೆ ಕೇಳ್ದೆ ಇರಲ್ಲ. 

ಮನೇಲಿ ಎಲ್ರೂ ಯಾಕೆ ತಂದೆ ಅಂತ ಬೈತಿದ್ರು. ಆದ್ರೆ ಎಲ್ಲರ ಮನಸ್ಸು ಒಲಿಸುವುದರಲ್ಲಿ ಯಶಸ್ವಿಯಾದ ನನ್ನ Rockeyಗೆ ಬೇರೆ ಹೆಸರು ಇಡಲಿಕ್ಕೆ ನನಗೂ ಮನಸ್ಸಿರಲಿಲ್ಲ. ನಾವಿಬ್ಬರು ಎರಡು ದೇಹ ಒಂದು ಜೀವ ಅಂತಾನೆ. ಒಬ್ಬರನ್ನೊಬ್ಬರು ಅರ್ಥಮಾಡ್ಕೋ ಬೇಕು ಅಂದ್ರೆ communication ತುಂಬಾ important ಅಂತಾರೆ. ಆದರೆ ನಮ್ಮ ನಡುವಿನ ಬಂಧನಕ್ಕೆ ಯಾವ language ಅವಶ್ಯಕತೆಯೂ ಇಲ್ಲ. ನನ್ನ ಉಸಿರಾಗಿ ನನ್ನ ಪ್ರತಿ ಹೆಜ್ಜೆಗೂ ಸಾತ್ ಕೊಡ್ತಿದ್ದಾನೆ. ಎಲ್ರೂ ಸಾಮಾನ್ಯವಾಗಿ ಪ್ರತಿ ದಿನ ಜೋತೆಲಿದ್ರೆ ಪ್ರೀತಿ ಕಡಿಮೆ ಅದರ ಅರಿವು ದೂರ ಇದ್ದಾಗ ಮಾತ್ರ ಗೊತ್ತಾಗೋದು ಅಂತಾರೆ. ಆದ್ರೆ ನಮ್ಮಿಬ್ಬರ ವಿಷಯದಲ್ಲಿ ಇದು not applicable. ನನಗೆ ಮತ್ತೆ ಜೀವ ತುಂಬಿದ ನನ್ನ Lucy ಗೆ ಎಷ್ಟು thanks ಹೇಳಿದ್ರು ಕಡಿಮೆ. 

Thanks a lot Lucy... Love you.... 

ಪ್ರತಿ ಸಲವೂ ಏನಾದ್ರು wish ಕೇಳಬೇಕು ಅಂದ್ರೆ ನಾನು ಕೇಳೋದು ಮಾತ್ರ ಒಂದೇ ಒಂದು ... ಸಾವು ಅನ್ನೋದು ಸಹಜ ಅದು ಈಗಲಾದರು ಬರಲಿ ಯಾವಗ್ಲಾದ್ರೂ ಬರಲಿ ಹೆದರಿಕೆ ಇಲ್ಲ ಆದ್ರೆ ನಾನು ಮತ್ತೆ ನನ್ನ Rockey ಇಬ್ರು ಒಟ್ಟಿಗೆ ಚಿರನಿದ್ರೆಯಲ್ಲಿರಬೇಕು ಅಂತ. 

ಯುಗ ಯುಗಗಳೇ ಸಾಗಲಿ...ನಮ್ಮ ಪ್ರೇಮ ಶಾಶ್ವತ 
ಗಿರಿ ಗಗನವೇ ಬೀಳಲಿ ... ನಮ್ಮ ಪ್ರೀತಿ ಶಾಶ್ವತ
ರವಿ ಸಾಗರ ಕೆರಳಲಿ ... ನಮ್ಮ ಪ್ರೇಮ ಶಾಶ್ವತ...
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ...





Monday, 26 March 2012

Olumeya Siri

ಒಲುಮೆಯ ಸಿರಿ...


ಪ್ರೀತಿ ವಿಶ್ವಾಸ ಎನ್ನುವುದು ಪದಗಳಿಂದ ವರ್ಣಿಸಲಾಗದ, ಚೌಕಟ್ಟುಗಳಿಲ್ಲದ ಆಕಾಶದ ಹಾಗೆ. ಒಬ್ಬ ವ್ಯಕ್ತಿಯನ್ನಾಗಲಿ, ವಸ್ತುವನ್ನಾಗಲಿ ನಾವು ಗುಣಲಕ್ಷಣಗಳಿಂದ ಸಾಮಾನ್ಯವಾಗಿ ಇಷ್ಟಪಡುವುದು ಸಹಜ. ಆದರೆ ನಿಜವಾದ ಪ್ರೀತಿ ವಿಶ್ವಾಸದ ಬಂಧನಕ್ಕೆ ಆರಂಭವಿದೆಯೋ ಹೊರತು ಅದಕ್ಕೆ ಅಂತ್ಯವಿಲ್ಲ. ಆರಂಭದ ಅರಿವಿಲ್ಲದೆ ಬೆಳೆದ ಪ್ರೀತಿ ವಿಶ್ವಾಸದ ಈ ಚಿಗುರು ಆಳದ ಮರದ ಹಾಗೆ ಬೃಹದಾಕಾರವಾಗಿ ಅರಿವಿಲ್ಲದೆ ಬೆಳೆಯುವುದು. 


ಮನುಷ್ಯ ಸಾಮಾನ್ಯವಾಗಿ ತನಗಿಷ್ಟವಾದುದನ್ನು ಬೇರೆಯವರಲ್ಲಿ ಕಂಡಾಗ ಇಷ್ಟ ಪಡುವುದು ಸಹಜ. ಆದರೆ  ನಮಗಿಷ್ಟವಿಲ್ಲದ್ದನ್ನು ನಾವು ಪ್ರೀತಿಸುವವರಲ್ಲಿ ಕಂಡರೂ ಅವರನ್ನು ಇನ್ನು ಹೆಚ್ಹುವಿಶ್ವಾಸ, ಪ್ರೀತೀಂದ ಕಾಣುವುದೇ ನಿಜವಾದ ಪ್ರೀತಿಯ ಬೆಸುಗೆ. ಈ ಅನುಭವ ನನಗಾಗಿದ್ದು ಇದೇ ಮೊದಲು. ನನ್ನ ಜೀವನದಲ್ಲಿ ನಾನು ಅತಿಯಾಗಿ ದ್ವೆಶಿಸುವುದನ್ನು ಸ್ವೀಕರಿಸಿದ್ದೂ  ಕೂಡ ಇದು ಮೊದಲ ಸಲ.  ಈ ನನ್ನ ಒಲುಮೆಯ ಬಂಧನದ ಸಿರಿ ಆಗಸದಲ್ಲಿ ಎಲ್ಲವನ್ನೂ ಮೀರಿ ಮುಗಿಲೆತ್ತರಕ್ಕೆ ಸಾಗಿದೆ. 


ಈ ನನ್ನ ಒಲುಮೆಯ ಬಂಧನದ ಸಿರಿ ನನ್ನ ಬಾಳಿನಲ್ಲಿ  ನಿತ್ಯ, ನಿರಂತರ ಹಾಗು ಅಮರ.

Wednesday, 14 March 2012

ಮೌನದ ಸದ್ದು....

ಓ ನನ್ನ ಚೇತನ ... ಓ ನನ್ನ ಚೇತನ...
ಅರಿಯದೆ ಮನದ ಮಾತು ಕರುಣಿಸಿದೆ ನನಗೆ ಮೌನದ ಸದ್ದು
ಅರಿಯದೆ ಮನದ ಮಾತು ಕರುಣಿಸಿದೆ ನನಗೆ ಮೌನದ ಸದ್ದು
ಸಾವಿರ ಧನಿ ಕೇಳಿದರೂ ಮನದಲಿ ಕೊರೆಯುತಿಹುದು ನಿನ್ನಯ ಮೌನದ ಸದ್ದು
ಸಾವಿರ ಧನಿ ಕೇಳಿದರೂ ಮನದಲಿ ಕೊರೆಯುತಿಹುದು ನಿನ್ನಯ ಮೌನದ ಸದ್ದು
ಜಟಿಲ ಕಾನನದ ತೊರೆಯಲಿ ಸಿಲುಕಿದ ತಾವರೆ ಮಾಡದ ತಪ್ಪಿಗೆ ಪರಿತಪಿಸಿದೆ
ಜಟಿಲ ಕಾನನದ ತೊರೆಯಲಿ ಸಿಲುಕಿದ ತಾವರೆ ಮಾಡದ ತಪ್ಪಿಗೆ ಪರಿತಪಿಸಿದೆ 

ಓ ನನ್ನ ಚೇತನ ಓ ನನ್ನ ಚೇತನ ನೀ ಏಕೆ ಕರುಣಿಸಿದೆ ನನಗೆ ಈ ಮೌನ...
ಓ ನನ್ನ ಚೇತನ ಓ ನನ್ನ ಚೇತನ ನೀ ಏಕೆ ಕರುಣಿಸಿದೆ ನನಗೆ ಈ ಮೌನ...







Wednesday, 7 March 2012

ಕೊಡಚಾದ್ರಿ ... (ತ್ರಿಲೋಕ ಸುತ್ತಿದ ಅನುಭವ)



ಹಲೋ  maddy  ಬೈಕ್ನಲ್ಲಿ ಕೊಡಚಾದ್ರಿ ಹೋಗುವ ಅಂತ ಗುರು phone ಮಾಡಿ ಕೇಳ್ದಾಗ ಸಕತ್  ಖುಷಿಲಿ ಹೂ ಅಂದೇ. ಆಮೇಲೆ ಯಾಕೋ ಹೆದರಿಕೆ ಶುರು ಆಯಿತು. ಮನೇಲಿ ಏನ್ ಹೇಳ್ತಾರೋ ಅಂತ. ಆದ್ರೂ ಗುರು ಇದಾನೆ ಅಂದ್ರೆ ಒಂದು ಧೈರ್ಯ ನಂಗೆ. ಅಮ್ಮನ ಹತ್ರ ಹೋಗಿ ಹೇಳ್ದೆ .. ಹೂ ಸರಿ ಹೋಗಿ ಬಾ ಅಂದ್ರು... ಬೈಕ್ ನಲ್ಲಿ ಅಂದೆ... ಆ...! ಬೈಕ್ನಲ್ಲಾ ... ಯಾರ ಜೊತೆ ಅಂದ್ರು... ಗುರು, ಶ್ಯಾಮ, ರಂಗ ಅಂದೆ. ಹೂ ಸರಿ ಹುಷಾರು ಅಂತ permission ಕೊಟ್ರು. ಅಮ್ಮಂಗೆ ಬಿಟ್ರೆ ಯಾರಿಗೂ ಬೈಕ್ ನಲ್ಲಿ ಹೋಗ್ತಿರೋದು ಅಂತ ಗೊತ್ತಿರ್ಲಿಲ್ಲ. ಬೈಕ್ ಅಂತ ಹೇಳಿದ್ರೆ ಅಪ್ಪ permission ಕೊಡ್ತಿರ್ಲಿಲ್ಲ. ಅಮ್ಮಂಗೆ ನನ್ನ ಮೇಲೆ ವಿಶ್ವಾಸ... ಎಲ್ಲೇ ಹೋದ್ರು ಜಯಿಸಿಕೊಂಡು ಬರ್ತೀನಿ ಅನ್ನೋ ಭರವಸೆ. ಹೊರಡೋ ಹಿಂದಿನ ದಿನ Blackey (ಕಪ್ಪುಗಿಲ್ರಿ  black colour ಗೂ ಇವನಿಗೂ ಗುರುಗೂ ಇವರ hostel ಗೂ ಒಂತರ ನಂಟು ಅದ್ಕೆ) ಶ್ಯಾಮ ಮನೆಗೆ ಬಂದಿದ್ದ. ಅಮ್ಮ ತಿನ್ಲಿಕ್ಕೆ ಏನೋ ಕೊಟ್ಟಿದ್ರು. ನನ್ನ Rockey room ನಲ್ಲಿದ್ದ. (ನನ್ನ ಜೀವ... ನನ್ನ pet). ನಾ ಬಂದಿದೀನಿ ಅಂತ ಗೊತ್ತಾಗಿ ಕೂಗಡ್ಲಿಕ್ಕೆ ಶುರು ಮಾಡ್ಕೊಂಡಿದ್ದ. ಅಮ್ಮ ಅಡಿಗೆ ಮನೆಯಿಂದ ಒಂದು ಕೈನಲ್ಲಿ ಟೀ ಕಪ್ ಇನ್ನೊಂದು ಕೈನಲ್ಲಿ 5 -6 beans ಹಿಡ್ಕೊಂಡು ಬಂದ್ರು. ಇದನ್ನಾ ನೋಡಿ Blackey ಇದೇನಪಾ ಇವರ ಮನೆಯಲ್ಲಿ  ಹೊಸ system ಎಲ್ರು ಮನೇಲಿ ಟೀ ಜೊತೆ ಬಿಸ್ಕೆಟ್ ಕೊಡ್ತಾರೆ ಆದ್ರೆ ... ಇಲ್ಲಿ beans...! ಅಷ್ಟೊತ್ತಿಗೆ ಅಮ್ಮ ಅವನಿಗೆ ಟೀ ಕೊಟ್ಟು Rockey  ಗೆ beans ಕೊಡಲಿಕ್ಕೆ ರೂಂ ಗೆ ಹೋದರು. ಹಾ... beans ಅಂದ್ರೆ ನನ್ನ Rockey ಗೆ ತುಂಬಾ ಇಷ್ಟ ಅದ್ಕೆ. ಸದ್ಯ ಬಚಾವಾದೆ ಅಂತ ಒಂದೇ ಉಸಿರು ಬಿಟ್ಟಿದ್ದ Blackey. ಅ ಸನ್ನಿವೇಶ ... ಅವನ್ನ ನೆನೆಸಿಕೊಂಡರೆ ನಮ್ಮಮ ಈಗಲೂ ಹಾಸ್ಯ ಮಾಡ್ತಾರೆ. ನಮ್ಮ ಅಮ್ಮಂಗೆ ಶ್ಯಾಮ ಅಂದ್ರೆ ಓ beans ಅಲಾ ಅಂತಾರೆ. ಅಷ್ಟು famous ಆಗಿದಾನೆ. ಹೊರಡಬೇಕಿದ್ರೆ ಅಮ್ಮ ಹುಷಾರಾಗಿ ಹೋಗಿ ಬನ್ನಿ ಅಂತ ಹೊರಗಡೆ ಬಂದು ಹೇಳಿದ್ರು. ಹೂ ಆಂಟಿ ನಾಳೆ ಬೆಳಗ್ಗೆ ಬರ್ತೀನಿ ಅಂತ ಹೋರಾಟ. ಬೆಳಗ್ಗೆ ಸುಮಾರು 2 -15 ಗೆ ಬೈಕ್ ದೂರದಲ್ಲೇ ನಿಲ್ಸಿ ಮನೆ ಹತ್ರ ಬಂದಿದ್ದ. ಕೊರೆಯೋ ಚಳಿಲಿ full pack ಆಗಿ ಇನ್ನೊಂದು ಸವಾರಿ ಗುರು ಮತ್ತೆ ರಂಗ ready  ಇದ್ರು. ಯಾರು ಇಲ್ಲ ರಸ್ತೇನೆ ನಮ್ಮದಾಗಿತ್ತು. 
ಜಿನಿ ಜಿನಿ ಜಿನಿಗೋ ಮಳೆ... ಕೈ ರೋಮವೆಲ್ಲವೂ ಎಳೆ ಎಳೆಯಾಗಿ ಬತ್ತದ ಪೈರಿನಂತೆ ಬಾಗುತ್ತಿತು. ಶಿವಮೊಗ್ಗದಿಂದ ಆಯನೂರಿನ ಹಾದಿಯಲ್ಲಿ ಜೋಳದ ತೆನೆ ಕಾಣಿಸಿದ್ದೇ ತಡ ಯಾರಗೂ ತೊಂದ್ರೆ ಕೊಡದೆ self  service hotel ಗೆ entry ಕೊಟ್ಟಹಾಗೆ ಹೋಗಿ parcel ತೊಗೊಂಡು ಹೊರಟ್ವಿ. ಅದು without payment ... ಹಲೋ ಕದ್ದಿದಲ್ರೀ ... high jump ಮಾಡಿ ಕತ್ತಲಲ್ಲಿ ಕಷ್ಟ ಪಟ್ಟು ಕಿತ್ತಿದ್ದು. 
ಮುಂದೆ ಹೊಗ್ತಿದ್ಹಾಗೆ ಕಾಣ್ಸಿದ್ದು... ಹುಲಿನೂ ಅಲ್ಲ... ಸಿಂಹಾನೂ ಅಲ್ಲ.. ಅಯನೂರಿನ ನರಿ. ಬೆಳ್ಳಂಬೆಳಗ್ಗೆ ನರಿ ನೋಡಿದ್ರೆ ತುಂಬಾ ಒಳ್ಳೇದಂತೆ ಅಂತ Blackey ಹೇಳಿದ್ದಷ್ಟೇ... ಬೈಕ್ ಇಂದ ಇಬ್ರೂ ದಿಕ್ಕಾಪಾಲಾಗಿ ಉತ್ತರ-ದಕ್ಷಿಣಕ್ಕೆ ಬಿದ್ದಿದ್ವಿ. ಇಬ್ರೂ ಹೆಂಗೊ ಎದ್ವಿ ಆದ್ರೆ third party ಮಾತ್ರ ಇನ್ನೂ ಹಾಗೆ ಮಲಗಿದ್ರು. ಬೈಕ್ ಅನ್ಕೊಂಡ್ರಾ ... ಆ ... ಹಾ... head light  ಇಲ್ಲದ four wheeler ... black colour ... ಹೆಸರು AMBA.  ಇದು ಯಾವ್ದೋ ಹೊಸ ಕಾರ್ ಅಂದ್ಕೊಂಡ್ರಾ ... ಅಲ್ರೀ... ಇದು road ನಲ್ಲಿ ಪುಕ್ಕಟೆ traffic police ಕೆಲಸ ಮಾಡುವ ದನ. ಪಾಪ ಯಾರ ಸಹಾಯವೂ ಇಲ್ಲದೆ 5 x 4 ಅಡಿಯ ದೇಹ ಕಷ್ಟ ಪಟ್ಟು ತನ್ನ ಕಾಲ್ಮೇಲೆ ಹೇಗೋ ನಿಂತ್ಕೊಳ್ತು. digree  ಮುಗಿಸಿ ತನ್ನ ಕಾಲ್ಮೇಲೆ ತಾನು ನಿಂತ್ಕೊಂಡೆ ಅನ್ನೋ ಖುಷಿ ಕೇವಲ ವಿದ್ಯಾರ್ಥಿಗಳಲ್ಲಿ ಮಾತ್ರ ಅಲ್ಲಾ... ಅಂದು ಪುನರ್ಜನ್ಮ ಪಡೆದ ದನದ ಮುಖದಲ್ಲೂ ಕಾಣಿಸ್ತಿತ್ತು. 
ಗುರು, ರಂಗ ಯಾವಾಗ spot ಗೆ ಬಂದ್ರು ಅಂತ ನನಿಗಂತೂ ಗೊತ್ತಾಗಲಿಲ್ಲ. ನನಗಿಂತ ಜಾಸ್ತಿ ಏಟು ಬಿದ್ದಿದ್ದು Blackey ಗೆ. ಎಷ್ಟೇ ಬೇಗ 108 ಬಂದು ಕೆಲಸ ಶುರು ಮಾಡೋ speed ನಲ್ಲಿ ಗುರು ಮತ್ತೆ ರಂಗ   Blackey ಗೆ  first -aid ಶುರು ಹಚ್ಕೊಂಡ್ರು. Book bind  ಮಾಡೋಕೆ gum tape ಹಚ್ಚೋತರ Blackey ಗೆ  ಆದ ಗಾಯದ ಮೇಲೆ  ಅಂಟಿಸ್ತಾ ಹೋದ್ರು. Blackey ಗೆ ಏನನ್ಸ್ತೋ ಗೊತ್ತಿಲ್ಲಾ... ನನಗೆ ಮಾತ್ರ ಯಮದೂತನಿಂದ escape ಆದ ಕರಾಳ ಅನುಭವ ಅದು. 

ಉ..ಆಹ್ ಆಚ್ ... ಅಂತ ನಮ್ಮ ಬೈಕ್ ಪಯಣ ಮುಂದೆ ಸಾಗಿತು. ಕತ್ಲಲ್ಲಿ ರಂಗನ ಬೈಕ್ head light  Blackey ಗೆ ಗಾಡಿ ಓಡಿಸಲಿಕ್ಕೆ ಸ್ಸತ್ ಕೊಡ್ತಿತ್ತು. ಸೂರ್ಯೋದಯ ನೋಡುವ ಕುತೂಹಲದಿಂದ ಸಾಗಿದ ನಮಗೆ ಇನ್ನೂ  ರಂಗನ ಬೈಕ್ head light  ದಾರಿ ತೋರಿಸ್ತಿತ್ತು ಅಂತ ಅಂದ್ಕೊಂಡ್ರಾ... ಸೂರ್ಯ ಕಾಣಿಸದೆ ಇದ್ರೂ ಅವನ ಬೆಳಕು ಮಾತ್ರ ಸುರ್ಯನ್ಗೆ good morning ಆಗಿ ತುಂಬಾ ಹೊತ್ತಾಗಿದೆ ಅಂತ ನಮಗೆ ಮನವರಿಕೆ ಮಾಡಿತು. 

ಕೊಚೆಲಿ circus ಮಾಡ್ಕೊಂಡು ಇನ್ಯಾವ ಅವನ್ತರವೂ ಆಗೋದು ಬೇಡ ಅಂತ ಬೈಕ್ side ನಲ್ಲಿ ನಿಲ್ಲಿಸಿ ಬೆಟ್ಟ ಹತ್ತೋಕೆ ಶುರು ಮಾಡಿದ್ವಿ. ನರಿ ಆಯಿತು... ದನ ಆಯಿತು ಇನ್ನೇನೂ ಅಂದ್ಕೊಂಡು ಮುಂದೆ ನೋಡಿದ್ರೆ ಏನಪ್ಪಾ ಅದು ಹಸಿರ ಹುಲ್ಲಿನ ಹಾಸಿನ ಮೇಲೆ ರಾಶಿ ರಾಶಿಯಾಗಿ ಬಿದ್ದಿತ್ತು automatic syringe . Blood  collect ಮಾಡ್ಕೊಂಡು report ಕೊಡದೆ ಮೂರ್ತಿ ಸಿಕ್ಕದಾದ್ರು ಕೀರ್ತಿ ದೊಡ್ಡದು ಎಂಬ ಗತ್ತಿನಿಂದ ಮೆರೆಯುತ್ತಿದ್ದ ಅ Leech ... Doctor  ಹೆಸರಲ್ರೀ ಅದೇ ಜಿಗಣೆ ..ಹಿಮ್ಳ ಅಂತಾರಲ ಅದು. ನಮಗಂತೂ ಇಷ್ಟ ಇಲ್ಲಾ ಅಂದ್ರೂ Blood Donate ಮಾಡೋ ಗತಿ ಬಂದಿದ್ದು. ಮೊದ್ಲೇ ಅದನ್ನಾ ನೋಡಿದ್ರೆ ನನಗೆ ಅಸಹ್ಯ ... ನಾ ಗುರು ಅಂದಿದ್ದೆ ತಡ ಪಾಪ ಗುರು ಅದನ್ನಾ ಕಿಟ್ಟಿ ಬಿಸಾಕ್ತಿದ್ದ.... Really  Guru  you  are  my  savior . 
ಕೊಡಚಾದ್ರಿಗೆ ಸಾಗೊವಾಗ ಸಾಮಾನ್ಯವಾಗಿ ಎಲ್ರೂ ಕೈನಲ್ಲಿ ನಾ ಕಂಡಿದ್ದು bottle . ಯಾವ bottle ಅಂತ ಹೇಳೋ ಅವಶ್ಯಕತೆ ಇಲ್ಲಾ ಅನ್ಕೊತಿನಿ. ನಮ್ಮ ಕೈನಲ್ಲಿ  bottle ಅಲ್ರೀ ... ಮೊಳಕೆ ಕಾಳು ಉಪ್ಪು - ಖಾರ ಮತ್ತೆ ಲಿಂಬು. ಮೊಳಕೆ ಕಾಳೆನೋ ಖಾಲಿ ಆಯಿತು. ಆದ್ರೆ ಈ ತ್ರೀಮೂರ್ತಿಗಳು polio drops ತಾರಾ ಒಂದು ಹನಿ ಲಿಂಬು ಒಂದು ಕಿಟಕಿ ಉಪ್ಪು ಅಂತ ಶುರು ಮಾಡ್ಕೊಂಡ್ರು. ಪಾಪ ರಂಗ ಬೇಡ ಅಂದ್ರೂ Blackey , ಗುರು ರಂಗನಿಗೆ ಸ್ವಲ್ಪ taste ನೋಡು ಅಂತ ಕೊಟ್ರು... ಅದು ಯಾವ range ಗೆ ಅವನಿಗೆ affect ಮಾಡ್ತು ಅಂದ್ರೆ ಲಿಂಬು ಸಿಪ್ಪೆ ಮಾತ್ರ ರಂಗನ ಕೈನಲ್ಲಿತ್ತು. ಅದು ಅರ್ದ break ಆಗಿರೋ Tennis Ball ಅನ್ನೋ ಮಟ್ಟಿಗೆ ಬಂದಿತ್ತು ಅದರ ಗತಿ. 
ಹಾಗೂ ಹೀಗೂ ಕೊಡಚಾದ್ರಿಯ ತುತ್ತ ತುದಿಯನೇರಿದ ನಮಗೆ ಸುಂದರ ಹಸಿರಿನ ಹಾಸು, ಮಂಜಿನ ಮುಸುಕು ತನ್ನ ವಿಸ್ಮಯ ಜಗತ್ತಿಗೆ ನಮ್ಮನ್ನ ಬರಮಾಡಿಕೊಂಡಿತು. ಜಿಗಿ ಜಿಗಿ ಮಳೆ, ತಣ್ಣನೆಯ ಗಾಳಿ ... ಯಮ ಲೋಕದ ಅನುಭವದಿಂದ ಸ್ವರ್ಗ ಲೋಕದ ಅನುಭವ ಮೂಡಿಸಿತು. ಬಿಸಿ ಬಿಸಿಯಾದ 30ml  ನಮ್ಮ ಮೈ ಸೇರ್ದಾಗ್ಲೆ ನಾವು ಚಳಿ ಇಂದ ಚೆತರ್ಸ್ಕೊಂಡಿದ್ದು... ಓ brand ಯಾವ್ದು ಅಂತ ಹೇಳಲಿಲ್ಲ ಅಲ್ವಾ... ಅದೇ ಬಣ್ಣ, ರುಚಿ ಮತ್ತು ಶಕ್ತಿ ಅಂತ ಮೂರೊತ್ತು TV ನಲ್ಲಿ ತೋರ್ಸಲ್ವಾ ಅದೇ ಟೀ. 
ವಿಸ್ಮಯ ಜಗತ್ತಿಗೆ bye  ಮಾಡುತ್ತಾ ಏರಿದ ಬೆಟ್ಟ ಮತ್ತೆ ಇಳಿಯಲಿಕ್ಕೆ ಶುರು ಮಾಡಿದ್ವಿ. ಇವರ ಕಣ್ಣಿಗೆ ಎಲ್ಲಿಂದ ಅ ಹಸಿರು ಹಾವು ಕಾನಿಸ್ತೋ ಗೊತ್ತಿಲ್ಲ... ಹೂವಿನ ಬಳ್ಳಿಯಂತೆ ಕೈನಲ್ಲಿ ಹಿಡ್ಕೊಂಡು ತಮ್ಮ study  ಶುರು ಮಾಡ್ಕೊಂಡ್ರು. .. ಏನ್ ಧೈರ್ಯಶಾಲಿಗಳು ಆಲ್ವಾ... ಜೀವ ಇಲ್ಲದ ಹಾವನ್ನ ಕೈನಲ್ಲಿ ಹಿಡಿಯೋದು ಅಂದ್ರೆ...  

ಮರಳಿ ಗೂಡಿಗೆ ಅಂತ ನಮ್ಮ ಪ್ರಯಾಣವು ಮನೆ ಕಡೆ ಸಾಗಿತು. ಮತ್ತೆ ಬೈಕ್ ಸಂಚಾರ ಶುರು ಆಯಿತು. ಅದೇ ದಾರಿ... ಅದೇ ಕತ್ತಲು... ಮತ್ತೆ ಯಮದೂತನ ಭಯ ಶುರುವಾಯಿತು ನನಗೆ. ಸದ್ಯ Traffic Police ಆಗ್ಲೇ ಮನೆ ಸೇರಿದ್ರು... ಬಚಾವಾದೆ. 
ಕೊನೆಗೂ ಸುರಕ್ಷಿತವಾಗಿ ತಲುಪಿದ ನನಗೆ ನಿಜವಾಗಿಯೂ ಪುನರ್ಜನ್ಮ ಸಿಕ್ಕಂತಾಗಿತ್ತು. ಒಂದೇ ದಿನದಲ್ಲಿ ಭೂಲೋಕ... ಯಮಲೋಕ... ಸ್ವರ್ಗಲೋಕ ವೀಕ್ಷಿಸಿ ... ಅನುಭವಿಸಿದ ಪ್ರತಿ ಕ್ಷಣದ ಅನುಭವ ಅನುಭವಿಸಿದವರಿಗೇ ಗೊತ್ತು... ಏನೇ ಹೇಳಿ ಇಂತಹ ಅನುಭವ ಇದ್ರೇನೆ ಅದು ಜೀವನ... ಏನಂತೀರ?

ನಿಸ್ವಾರ್ಥದಿಂದ ಸ್ವರ್ಥದೆಡೆಗೆ ...












ಪ್ರಕೃತಿಯ ಸೊಬಗು ತನ್ಮನ ಸೆಳೆದು ಸದಾ ಹರಸುವುದು ನಿಸ್ವಾರ್ಥದಿಂದ
ನಿನ್ನಂತೆಯೇ ನಾನಾಗಬೇಕೆಂಬ ಆಸೆಯಲಿ ನಾ ಕೂಡ ಸಾಗಿದೆ ನಿಸ್ವಾರ್ಥದಿಂದ...

ಕೊಳದಲಿ ಬೆಳೆದ ಕಮಲ ಕುಸುಮ ಸೇರಿತು ಕಡಲ ತೀರ
ಅಲೆಯ ರಭಸಕೆ ತಲ್ಲಣಿಸಿ ಬಾಡಿ ಮರುಗಿತು ಒಡಲ ತೀರ...
ಮನವೆಂಬ ಕನ್ನಡಿಯಲಿ ನಾ ಅಂದು ಕಂಡೆ ನನ್ನಯ ರೂಪ
ಬಾಡಿರುವ ಕುಸುಮವ ನೋಡಿ ಮೆಲುದನಿಯಲಿ ಮನವು ಹಾಡಿತು
ಕರುಣಿಸು ನಿನ್ನಯ ಮೊಗದಲಿ ಮಂದಹಾಸದ ಉಷೆಯ ರೂಪ...

ನನ್ನಯ ಅಂತರಾಳದಲಿ ನಗುವಿನ ಕುಸುಮ ಚಿಗುರಿ ಹಾಡತೊಡಗಿತು...
"ಈ ನಗುವು ನಿನಗಾಗಿ, ನೀ ಬಾಳು ನಿನಗಾಗಿ... ನಂತರ ಪರರಿಗಾಗಿ" ಎಂದು
ಗರಿಗೆದರಿ ಹಾರುವ ಸಂತಸದಿ ಸಾಗಿತು ಆಗಸದತ್ತ ನನ್ನಯ ನೋಟ...
ಮುದುಡಿದ ತಾವರೆಯ ಮತ್ತೆ ಅರಳಿಸಲು ನಾ ಅಂದು ಕಲಿತೆ
ನಿಸ್ವಾರ್ಥದಿಂದ ಸ್ವರ್ಥದೆಡೆಗೆ ಎಂಬ ಹೊಸ ಪಾಠ...

ಸ್ವಾರ್ಥದ ಬದುಕಿನ ಪಾಠವ ಕಳಿಸಿದ ಎಲ್ಲರಿಗೂ ನಾ ಸದಾ ಚಿರಋಣಿ.

                                                                             Lotus 

Tuesday, 28 February 2012

ಹೊಸ ಚಿಗುರುಗಳ ನಡುವೆ
ನಿನ್ನಯ ಮೊಗದಲಿ ಕಾಣುತಿರುವೆ ನನ್ನಯ ಬಾಲ್ಯದ ಸವಿನೆನಪ...

ಮಾವಿನ  ಹೊಸ ಚಿಗುರಿನ ಕುಸುಮ ಹಾಗು ಕೋಗಿಲೆಯ ಇಂಪಾದ ಗಾನ ವಸಂತ ಋತುವಿನ ಆಗಮನವನ್ನು ಸಾರುತ್ತದೆ. ಮಾವು ವಸಂತ ಕಾಲದಲ್ಲಿ ಮಾತ್ರ ಚಿಗುರುವುದು ಹಾಗು ಕೋಗಿಲೆ ವಸಂತ ಕಾಲದಲ್ಲಿ ಮಾತ್ರ ಹಾಡುವುದು. ಈ ಪ್ರಕೃತಿಯ ನಿಯಮವನ್ನು ಎಸ್ಟೇ ಪ್ರಯತ್ನಿಸಿದರೂ ಬದಲಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಮನುಜ ಕುಲದ ಸಂತೋಷ ಭರಿತ ಜೀವನ ಪ್ರಕೃತಿಯ ಕಾಲ ನಿಯಮದ ಚೌಕಟ್ಟಿನಿಂದ ಬಹು ದೂರದಲ್ಲಿದೆ. 

ನಿಮ್ಮ ಜೀವನದಲ್ಲಿ ಮರೆಯಲಾರದ ಘಟನೆ ಯಾವುದು ಎಂದು ಪ್ರಶ್ನಿಸಿದಾಗ ಸಾಮಾನ್ಯವಾಗಿ ಎಲ್ಲರ ಯೋಚನೆ ಬಾಲ್ಯದ ಸವಿನೆನಪಿನತ್ತ ಸಾಗುತ್ತದೆ. ಮಾನವನ ಜೀವನ ಭೂತಕಾಲ, ವರ್ತಮಾನಕಾಲ ಹಾಗು ಭವಿಷ್ಯತ್ಕಾಲದಿಂದ ರೂಪುಗೊಂಡಿರುವುದು. ಬಹಳಷ್ಟು ಜನ ತಮ್ಮ ಜೀವನದಲ್ಲಿ ವರ್ತಮಾನದಲ್ಲಿ ತಮ್ಮ ಮಡಿಲಿಗೆ ಬಂದ ಸಂತೋಷದ ಕ್ಷಣಗಳನ್ನು ಅನುಭವಿಸದೆ ತಮ್ಮ ಜೀವನ ಚಕ್ರದ ವೇಗವನ್ನು ಎಷ್ಟರ ಮಟ್ಟಿಗೆ ಹೆಚಿಸಿದ್ದಾರೆಂದರೆ ವೃದ್ದಾಪ್ಯವನ್ನು ತಲುಪಿದಾಗ ಇದರ ಬಗ್ಗೆ ಚಿಂತಿಸುತ್ತಾರೆ. 

ಆದರೆ ಚಿನ್ಥನೆಗಿಂತ ಪ್ರಯತ್ನ ಮಹತ್ತರವಾದ ಬದಲಾವಣೆಯನ್ನು ತರುತ್ತದೆ. ವೃದ್ದಾಪ್ಯದಲ್ಲಿ ಜೀವನ ಚಕ್ರದ ವೇಗ ಏಕ ಏಕೀ ಕಡಿಮೆಯಾಗುತ್ತದೆ. ಕಾರಣ ತಾನು ಹಳೆ ಬೇರು ಇನ್ನೇನು ನಾಳೆ, ಇಂದು, ಈಗ ತನ್ನ ಜೀವನವೆಂಬ ಮರ ಉರುಳಿ ನಶಿಸುವುದೆಂಬ ಚಿಂತಯಿಂದ. ಮನುಷ್ಯನ ದೇಹಕ್ಕೆ ವಯಸಾಗುವುದೇ ಹೊರತು ಮನಸ್ಸಿಗಲ್ಲ. ನೀ ಚಿಗುರಿ ಬೆಳೆದು ಹೆಮ್ಮರವಾಗಿದ್ದರೀನಂತೆ ಮನುಜ ನಿನ್ನ ವ್ರುಧಪ್ಯದಲ್ಲಿ ಬರುವ ಪ್ರತಿ ಕ್ಷಣವನ್ನು ಹೊಸ ಚಿಗುರುಗಳ ನಡುವೆ ಸಂತಸದಿಂದ ಸವಿಯಲು ಪ್ರಯತ್ನಿಸು. 

ನಿನ್ನಯ ಕಾಲ ಚಕ್ರ ನಿನಗಾಗಿ ನೀ ಪ್ರತಿ ದಿನವೂ ದುಡಿಮೆಗಾಗಿ ಮುಡುಪಾಗಿಟ್ಟಿದ್ದ ಹತ್ತು ಗಂಟೆಯನ್ನು ಈಗ ನಿನಗೆ ಬಳುವಳಿಯಾಗಿ ನೀಡಿದೆ. ಎಷ್ಟು ವರ್ಷ ಬದುಕಿದೆ ಎನ್ನುವುದಕ್ಕಿಂತ ಹೀಗೆ ಬದುಕಿದೆ ಎನ್ನುವುದು ವೈಶಿಷ್ಟ್ಯ. 

ನಿನ್ನ ಭೂತಕಾಲದಲ್ಲಿ ಕತ್ತಲೆಯಲ್ಲಿ ಮರೆಯಾಗಿಸಿದ ನಿನ್ನ ಹವ್ಯಾಸವನ್ನು ಮತ್ತೆ ಜೀವಂತವಾಗಿಡಲು ಪ್ರಯತ್ನಿಸು. ನಿನ್ನಯ ಈ ಜೀವನ ಚಕ್ರದಲ್ಲಿ ಎಲ್ಲಾ ವಯಸ್ಸಿನವರೊಡನೆ ಹಾಗು ಪ್ರಕೃತಿಯ ಜೊತೆಯಲ್ಲಿ ಸ್ನೇಹದ ಬಾಳ್ವೆಯನ್ನು ಸಾಗಿಸಲು ಪ್ರಯತ್ನಿಸು. ನಿನ್ನ ಮನಸ್ಸಿನ ಸಂತೋಷ ನಿನ್ನ ಕೈಯಲ್ಲಿಯೇ ಇದೆ. ಒಂಟಿ ಮರವಾಗಿ ಬಡವಾಗಿ ಇರುವುದಕ್ಕಿಂತ ಸುಂದರವಾದ ಹೂತೋಟವನ್ನು ನಿನ್ನ ಸುತ್ತ ಸೃಷ್ಟಿಸಿ ಸದಾ ವರ್ತಮಾನದಲ್ಲಿ ಸಂತೋಷದಿಂದ ಸಾಗು. ಪ್ರತಿ ದಿನ ಸಿಗುವ 24  ಗಂಟೆಯಲ್ಲಿನ ಪ್ರತಿ ಕ್ಷಣವೂ ಸಹಾ ಅತ್ಯಮೂಲ್ಯವಾದ ಸವಿನೆನಪಿನ ಮಧುರವಾದ ಉಲ್ಲಾಸದ ಪರಿವರ್ತನೆ ಜೀವನಕ್ಕೆ ಹೊಸ ತಿರುವನ್ನು ಕೊಡುವುದು. ಈ ಪರಿವರ್ತನೆಯ ವಿಸ್ಮಯ ಶಾಶ್ವತವಾಗಿ  ಬಾಳನ್ನು ಬೆಳಗಿಸಲಿ. 




Wednesday, 22 February 2012

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ 




ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..
ತುಸುದೂರ ಸುಮ್ಮನೆ ಬೆಳಕನ್ನು ತಂದೆಯಾ...
ನಡುವೆಲ್ಲೋ ಮೆಲ್ಲಗೆ ಮಾಯವಾದೆಯಾ...

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..

ಇದ್ದಲ್ಲೇ ನಾ ನೋಡಬಲ್ಲೆ ನಾ ನಿನ್ನ ಪ್ರತಿನೆರಳು
ನನ್ನಲ್ಲಿ ನೀನಿರುವಾಗ ಮಾತ್ತೇಕೆ ರುಜುವಾತು
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹಾ...
ಅಳಿಸಲಾರೆ ನಾನೆಂದು ನಂದಿರುವ ಮನದದೀಪಾ
ಸರಿಯಾದರೇನೆ ನಂದಿರುವ ದೀಪ ಬೆಳಗುವುದು ಮತ್ತೆ ಇಂದು...
ನಾನಿಂದು ಕಂಡ ನಂದಿರುವ ದೀಪ ಬೆಳಕಾಗುವಂತೆ ನೋಡು...

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..

ಕತ್ತಲೆಯ ನನಮನವಿನ್ನು ಕಂಡಿಲ್ಲ ಹೊಂಬೆಳಕು
ಕತ್ತಲೆಯ ಬೆಳಗಿಸು ನೀನು ಮತ್ತೆಲ್ಲಾ ಆಮೇಲೆ
ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು
ಕೇಳಬೇಡ ಇನ್ನೇನು ನೀನು ನನ್ನ ಕುರಿತು
ಎದೆಯಾಳದಿಂದ ಒಂದು ಸಣ್ಣ ಕಿರಣ ತಂದಿರುವೆ ಬೆಳಕಿಗಾಗಿ
ನನ್ನ ಮನದ ದೀಪ ಇರಬೇಕೆ ಇಂದು ಕತ್ತಲೆಯ ಮುಸುಕಿನಲ್ಲಿ

ಮನದಲ್ಲಿ ಸಣ್ಣ ಬೆಳಕೊಂದ ಸೂಸಿ ದೂರದ ದೀಪ ನೀನಾ
ನಾನಂದು ಕಂಡ ಮಂದಾರದೀಪ ನೀನಾಗಬೇಕು ಬೇಗ..






Tuesday, 21 February 2012

ನಿನಗಾಗಿ ...


ತುಂತುರು ಅಲ್ಲಿ ನೀರ ಹಾಡು
ನನ್ನಯ ಇಲ್ಲಿ  ಪ್ರೀತಿ ಹಾಡು... 
ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 

ನೋವಿರಲಿ   ನಲಿವಿರಲೀ... 
ನೀನಿರದೆ ಹೇಗಿರಲಿ 
ನನ್ನ ತುಂಬು ಹೃದಯ ನೀ ತುಂಬಿದೆ 
ನಿನ್ನ ಈ ತುಂಬು ಪ್ರೀತಿಯನು 
ಬಾಳ ಬೆಳಕಾಗಿ ಹಾಡುವೆನು...  


ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 

ಗಗನದ ಸೂರ್ಯ ಎಲ್ಲರಿಗೆ 
ನನ್ನಯ  ಸೂರ್ಯ ನೀ ಎನಗೆ
ಚಿಲಿಪಿಲಿ ಹಾಡು ಎಲೆಗಳಿಗೆ 
ನನ್ನ ಪ್ರೀತಿ ಹಾಡು ನಿನ್ನ ಬಾಳಿಗೆ 
ಗಾಳಿ ಗಾಳಿ ತಂಪು ಗಾಳಿ ಎಲ್ಲಾ ಕಡೆಯು ಇದೆಯೋ 
ನಿನ್ನ ಹೆಸರ ಗಾಳಿಯೊಂದೇ 
ನನ್ನ ಉಸಿರಲ್ಲಿದೆಯೋ 
ನಮ್ಮ ಸ್ನೇಹ ಬೆಳಗೋ ಇತಿಹಾಸವು 
ನಮ್ಮ ಬಾಳಿನ ಚೈತ್ರ 
ಅಲ್ಲಿ ನಮ್ಮ ಸ್ನೇಹವೇ ಅಮರ... 


ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 

ಮಗುವಿನ ನಿನ್ನ ಮುಗುಳುನಗೆ
ಹಗಲಲಿ ಇರುಳಲಿ ಬೇಡುವೆನು 
ನಮ್ಮಯ ಸ್ನೇಹದ ಬಂಧನಕೆ
ಚಂದ್ರನು ಮೆರಗಿ ಹೊಳೆಯುವನು
ನನ್ನ ಬಳಲಿ ಎಲ್ಲಾ ನೀನೆ
ಯಾಕೆ ಬೇರೆ ನಂಟು ...
ಸಾಕು ಎಲ್ಲಾ ಸಿರಿಗಳ ಮೀರೋ ನಿನ್ನ ಸ್ನೇಹದ ಗಂಟು 

ಜಗವೆಲ್ಲ ಮಾದರಿ ಈ ಸ್ನೇಹವೇ 
ನನ್ನ ಎದೆಯಾಳ ಧನಿ  ನೀನೇ...
ನಿನ್ನ ಸ್ನೇಹವೇ ಸಾಕೆನಗೆ...


ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು...

ತುಂತುರು ಅಲ್ಲಿ ನೀರ ಹಾಡು 
ನನ್ನಯ ಇಲ್ಲಿ ಪ್ರೀತಿ ಹಾಡು... 
ಹಗಲಿರಲಿ, ಇರುಳಿರಲಿ...
ನೀನಿರದೆ ಹೇಗಿರಲಿ 
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು 
ಕಣ್ಣ ಬೆಳಕಾಗಿ ಬೆಳಗುವೆನು...

ನಿನ್ನ ಈ ತುಂಬು ಪ್ರೀತಿಯನು 
ಕಣ್ಣ ಬೆಳಕಾಗಿ ಬೆಳಗುವೆನು...








Wednesday, 15 February 2012

ಓ ನನ್ನ ಚೇತನ ...


ಪ್ರಕೃತಿ ಎಂದೊಡನೆ  ಕಣ್ಮನದಲಿ ಹರಿದಾಡುವುದು
ಸೂರ್ಯ, ಚಂದ್ರ, ನಕ್ಷತ್ರ, ಸರೋವರ, ಸುಂದರ ಹೂ ಹಸಿರಿನ ಸಿರಿ...
ಪ್ರಕೃತಿ ಎಂದೊಡನೆ  ಕಣ್ಮನದಲಿ ಹರಿದಾಡುವುದು


ಸೂರ್ಯ, ಚಂದ್ರ, ನಕ್ಷತ್ರ, ಸರೋವರ, ಸುಂದರ ಹೂ ಹಸಿರಿನ ಸಿರಿ...
ಬಾಡಿದ ಜೀವಕೆ ನವಚೈತನ್ಯವ ತುಂಬಲು ಭಗವಂತ ಕರುಣಿಸಿರುವನು ಈ ಪ್ರಕೃತಿಯ ಸಿರಿ...


ಓ ಮುಗ್ದ ಮನವೇ ನೀನಾಗಿರುವೆ ಎನಗೆ  ಈ ಪ್ರಕೃತಿಯ ಪ್ರತಿಬಿಂಬ,
ಓ ಮುಗ್ದ ಮನವೇ ನೀನಾಗಿರುವೆ ಎನಗೆ  ಈ ಪ್ರಕೃತಿಯ ಪ್ರತಿಬಿಂಬ,
ನಿನ್ನ ಮುಗ್ದ ಮೊಗವ ನೋಡಿದಾಗ ಸದಾ ನಾ ಕಾಣುವೆ
ನವ ಚೈತನ್ಯದ ಹೊಸಬಿಂಬ...


ಓ ನನ್ನ ಒಲವಿನ ಸಿರಿಯೇ
ನೀನಾಗಿಹೆ ಎನಗೆ ಮುಂಗಾರಿನ ಚೈತನ್ಯದ ಚಿಲುಮೆ...
ಓ ನನ್ನ ಒಲವಿನ ಸಿರಿಯೇ 
ನೀನಾಗಿಹೆ ಎನಗೆ ಮುಂಗಾರಿನ ಚೈತನ್ಯದ ಚಿಲುಮೆ...
ನೀ ಕರುಣಿಸಿದೆ ಎನಗೆ ಮತ್ತೆ ಚಿಗುರುವ ಒಲುಮೆ...


ಓ ನನ್ನ ಚೇತನ ನೀನಾಗಿಹೆ ಎನ್ನಯ ಜೀವನದ ಉಸಿರು...
ಓ ನನ್ನ ಚೇತನ ನೀನಾಗಿಹೆ ಎನ್ನಯ ಜೀವನದ ಉಸಿರು...
ಎನ್ನಯ ಕಂಗಳು ಸದಾ ಹರಸುವುದು ನೀನಾಗಿರು ಎಂದೂ ಬಾಡದ ಸುಂದರ ಹಸಿರು
ನೀನಾಗಿರು ಎಂದೂ ಬಾಡದ ಸುಂದರ ಹಸಿರು...


ಓ ನನ್ನ ಚೇತನ ... ಓ ನನ್ನ ಚೇತನ ... ನಿನಾಗಿಹೆ ನನ್ನಯ ಬಾಳಿನ ನವ ಚೈತನ್ಯ... ನವ ಚೈತನ್ಯ...











    

Tuesday, 14 February 2012

ಮನದಾಳದ ಮಾತು  


ಮಾನವ ತಂತ್ರಜ್ಞಾನದ ಯುಗದಲ್ಲಿ ಉತ್ತುಂಗದ ಶಿಖರವೇರಿ ಪ್ರತಿ ಕ್ಷಣವೂ ಒಂದು ಯಂತ್ರದಂತೆ ಜೀವನ ಸಾಗಿಸುತ್ತಿದ್ದಾನೆ. ಮಾನವನ ಜೀವನ ಪ್ರೀತಿ, ವಿಶ್ವಾಸ ಹಾಗೂ ಸಂಬಂಧಗಳಿಂದಾಗಿ ಮಾನವ ಎಂದು ನಾಮಂಕಿತನಾಗಿದ್ದಾನೆ ಎಂಬುದು ನನ್ನ ವಿಚಾರ.   

ಕನಸಿನ ಲೋಕದಲ್ಲಿ ಜೀವನ ಸಾಗಿಸುವುದು ಎಷ್ಟು ಸುಂದರ ಅನಿಸುವುದೋ ನನಸಿನ ಲೋಕದಲ್ಲಿ ಜೀವನ ಸಾಗಿಸುವುದು ಅಷ್ಟೇ  ಕಷ್ಟ ಎಂಬುದು ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವ ವಿಷಯ. ನಮ್ಮ ಜೀವನ ಶೈಲಿ ನಮ್ಮ ಜೀವನದ ಕನ್ನಡಿ ಇದ್ದಂತೆ. ಕಷ್ಟ ಯಾರಿಗೆತಾನೆ ಬರುವುದಿಲ್ಲ ಬರಿ ಮಾನವನಿಗೆ ಮಾತ್ರವಲ್ಲ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಸಹ  ಇದು ಕಟ್ಟಿಟ್ಟ ಬುತ್ತಿ. ಪ್ರತಿಯೊಂದು  ಪ್ರಶ್ನೆಗೂ ಒಂದು ಉತ್ತರವಿದ್ದೇ ಇರುತ್ತದೆ.  ಉತ್ತರ ಸಿಗದಿದ್ದಾಗ ಆ ಪ್ರಶ್ನೆಯನ್ನು ಮರೆತು ಸಂತೋಷದಿಂದ ಮುಂದೆ  ಸಾಗಬೇಕು. ತುಂತುರು ಮಳೆ ಎಂದಾಕ್ಷಣ ಮನಸ್ಸು ಉಲ್ಲಾಸಭರಿತವಾಗಿ ಮುಖದಲ್ಲಿ ಮಂದಹಾಸವನ್ನು ಮೂಡಿಸುತ್ತದೆ. ಮನೆಯಲ್ಲಿ ಕುಳಿತು  ತುಂತುರು ಮಳೆಯ ನೋಡಿ  ಸವಿಯುವುದಕ್ಕಿಂತ ಪ್ರಕೃತಿಯ ಜೊತೆ ಪ್ರತಿಯೊಂದು ಮಳೆ ಹನಿಹೊಡನೆ ಎರೆಡು ನಿಮಿಷ ಉಲ್ಲಾಸದಿಂದ ನಲಿದು ನೋಡಿ... ಮೂಖವಿಸ್ಮಿತರಾಗಿ  ಅನುಭವವನ್ನು ಮಾತಿನಲ್ಲಿ ಬಣ್ಣಿಸಲಾಗದೆ ಮನವೆಂಬ ಕನ್ನಡಿಯಲ್ಲಿ ಉಲ್ಲಾಸದ ಚಿಗುರನ್ನು ಕಾಣುವಿರಿ ಎಂಬ ಸ್ವಂತ ಅನುಭವದ ಮಾತನ್ನು ಹೇಳಲಿಚ್ಛಿಸುತ್ತೇನೆ. 

ದುಡಿಮೆ ಮಾನವನ ಅಗತ್ಯ. ಆದರೆ ಈಗಿನ ಪ್ರಸ್ತುತ ಯುಗದಲ್ಲಿ ಬಹಳಷ್ಟು ಮಂದಿಗೆ ದುಡಿಮೆ, ಆಸ್ತಿಯನ್ನು ಮಾಡುವುದೇ ಜೀವನದ  ಮೂಲ ಉದ್ದೇಶವಾಗಿದೆ. ಕೆಲವೊಮ್ಮೆ ಪ್ರಪಂಚದಲ್ಲಿ ಎಲ್ಲಾರೂ ಹೀಗೆಯೇ ಎಂಬ ಪ್ರಶ್ನೆ ಸದಾ ನನ್ನನ್ನು ಕಾಡುತ್ತಿರುತ್ತದೆ. ಮಾನವನಿಗೆ ಜೀವನ ನಡೆಸಲು ಹಣದ ಅವಶ್ಯಕತೆ ಇದೆ ಹೌದು, ಆದರೆ ಪ್ರೀತಿ, ಸ್ನೇಹ, ಎಲ್ಲವನ್ನು  ಬದಿಗೊತ್ತಿ ಹಣವನ್ನುಗಳಿಸುತ್ತಾ ಅಗತ್ಯಕ್ಕಿನಂತ ಹೆಚ್ಚು ಬೇಕು ಎಂಬ ತೃಷೆಯ ಹಿಂದೆ ಹೋಗುವುದು ಮೂರ್ಖತನ. ಆದರೆ ಈ ಮೂರ್ಖತನದ ಇನ್ನೊಂದು ಮುಖ ಇದಕ್ಕೆ ತದ್ವಿರುದ್ದವಾಗಿದೆ. ಗಳಿಸಿದ ಹಣದಲ್ಲಿ ನಿಸ್ವಾರ್ಥಭಾವದಿಂದ ಸಮಾಜದ ಎಷ್ಟೋ ಮಂದಿಗೆ ಸಹಾಯ ಮಾಡಿ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದವರು ನಿಜವಾಗಿಯೂ ನಮ್ಮ ಸಮಾಜವನ್ನು ಬೆಳಗುವ ಕರುಣಾಮಯಿಗಳು...

ಎಲ್ಲಾ ಸಂಬಂದಗಳಲ್ಲಿಯೂ ಸ್ನೇಹವನ್ನು ಕಾಣಬಹುದು. ಸಮಾಜದಲ್ಲಿ  friend ಎಂದಾಕ್ಷಣ ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ boy friend or girl friend?  ಆದರೆ ನನ್ನ ಪ್ರಕಾರ ಸ್ನೇಹಕ್ಕೆ ಯಾವುದೇ ಲಿಂಗಬೇಧವಿಲ್ಲ. 

ಪ್ರೀತಿ ಹಾಗು ವಿಶ್ವಾಸ raktha ಸಂಬಂಧದಿಂದ ಮಾತ್ರ ಸಿಗುವುದೇ? ಖಂಡಿತ ಇಲ್ಲ. ಒಡಹುಟ್ಟಿದವರಿಂದ ಮಾತ್ರವಲ್ಲ ಓಡನಾಡಿಗಳಿಂದಲೂ  ಸಿಗುವುದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಗಳಿವೆ. ಈ ಸ್ನೇಹದ ಬೆಸುಗೆ ಪ್ರತಿಯೊಂದು ಯುಗದಲ್ಲಿಯೂ ಅದರ ಮಹತ್ವವನ್ನು ರಾರಾಜಿಸಿಕೊಂಡು ಬಂದಿದೆ. ಈ ಸಂಧರ್ಬದಲ್ಲಿ ನಾನು ನಮ್ಮ ಪುರಾಣದಲ್ಲಿ ಬರುವ ಕರ್ಣ - ದುರ್ಯೋಧನ, ಕೃಷ್ಣ - ಸುಧಮಾರನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. 

ನನ್ನ ಜೀವನದ ಹಾದಿಯಲ್ಲಿ ಸಿಕ್ಕಂತಹ ಸ್ನೇಹಿತರು ಅದೆಷ್ಟೋಮಂದಿ. ಒಂದು ಘಟನೆಯಲ್ಲಿ ಆಕಸ್ಮಿಕವಾಗಿ ಪರಿಚಯವಾದ ಒಂದು ಸ್ನೇಹದ ಚಿಗುರು ಹೆಮ್ಮರವಾಗಿ ನನ್ನ ಜೀವನದಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದಿದೆ. ಈ ಆಕಸ್ಮಿಕ ಪರಿಚಯ ಯಾವಾಗ ಸ್ನೇಹ, ಪ್ರೀತಿ - ವಿಶ್ವಾಸ ಹಾಗೂ ಭ್ರಾತೃತ್ವದಿಂದ ಬೆಸುಗೆಯಾಯಿತೋ ನನಗೆ  ತಿಳಿಯದು. ಜೊತೆಯಲ್ಲಿ ನಕ್ಕು ನಲಿದು ಸಂತಸದಿಂದ ಕಳೆದ ಪ್ರತಿ ಕ್ಷಣವೂ ಸದಾ ಮನದಾಳದಲ್ಲಿ ಅಚ್ಚಳಿಯದಂತೆ ಮನೆಮಾಡಿದೆ. 

ನನ್ನ ಸುಖ, ದುಃಖ, ನೋವು - ನಲಿವುಗಳಿಗೆ ಸ್ಪಂದಿಸಿ ಸ್ನೇಹ, ಪ್ರೀತಿ - ವಿಶ್ವಾಸದಿಂದ ನನಗೆ ಸ್ಪೂರ್ತಿ ನೀಡಿದ ನನ್ನ ಸ್ನೇಹಿತ, ನನ್ನ ತಮ್ಮ, ನನ್ನ ಸರ್ವಸ್ವ ನಿಜವಾಗಿಯೂ ನನ್ನ ಜೀವನದ ಗುರು. ಈ  ಗುರುವಿನ ಮೂರ್ತಿಯನ್ನು ಕರುಣಿಸಿದ ಭಗವಂತನಿಗೆ ನಾನು ಸದಾ ಚಿರರುಣಿ.

ಪ್ರತಿಯೊಬ್ಬರ ಜೀವನದಲ್ಲಿಯೂ ಭಗವಂತ ಸ್ನೇಹದ ಭಾಗ್ಯವನ್ನು ಕರುಣಿಸಿರುತ್ತಾನೆ. ನಿಮ್ಮ ಜೀವನದ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರನ್ನೂ ಒಂದು ಕ್ಷಣ ನಿಮ್ಮ busy schedule ನಿಂದ ಹೊರಬಂದು ಪ್ರೀತಿ - ವಿಶ್ವಾಸ ಹಾಗೂ ಸ್ನೇಹದಿಂದ ಕಾಣಿರಿ. ಆಗ ನೀವೂ ಕೂಡ ಪ್ರೀತಿ, ವಿಶ್ವಾಸ ಹಾಗೂ ಸ್ನೇಹದ ಸಿರಿತನವನ್ನು ಪಡೆಯುವಿರಿ. 

ಸ್ನೇಹನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಎಂದರೆ ಖಂಡಿತ ತಪ್ಪಾಗಲಾರದು ಅಲ್ಲವೇ? ಬನ್ನಿ ಸ್ನೇಹಿತರೆ  ಮನದಲ್ಲಿರುವ ಸ್ನೇಹದ ಬಾಗಿಲು ತೆರೆದು ಹೊಸದಾದ ಸ್ನೇಹ - ವಿಶ್ವಾಸದಿಂದ ಕೂಡಿದ ಮಾನವ ಲೋಕವನ್ನು ಸೃಷ್ಟಿಸೋಣ...

ಈ  ಲೇಖನ ನನ್ನ ಜೀವನದ ಮೊದಲ ಪ್ರಯತ್ನ. ಲೇಖನ ಬರೆಯುವುದು ನನ್ನ ಹವ್ಯಾಸವಲ್ಲ. ಆದರೆ ನನ್ನ ಗುರುವಿನ ಬರೆಯುವ  ಹವ್ಯಾಸ ಮುಸುಕಿನಲ್ಲಿ ಮರೆಯಾಗಿರುವುದು ನನಗೆ ಸದಾ ಕಾಡುತ್ತಿರುತ್ತದೆ. ಈ  ಮುಸುಕನ್ನು ಬೆಳಗಿಸುವ ಒಂದು ಸಣ್ಣ ಪ್ರಯತ್ನ ನಾನು ಲೇಖನ ಬರೆಯುವುದಕ್ಕೆ ನಾಂದಿಯಾಯಿತು. ಈ  ಲೇಖನ ನನ್ನ ಗುರುವಿಗೆ ನನ್ನ ಒಲುಮೆಯ ಪ್ರೀತಿಯ ಕಿರು ಕಾಣಿಕೆ. 

Yours  maddy



Aase

ಮೊಳಕೆ ಚಿಗುರಿ ಸಸಿಯಾಗಿ,
ಮರವಾಗಿ, ಹೂವಾಗಿ, ಕಾಯಾಗಿ,
ಎಲೆ ಉದುರಿ ಮತ್ತೆ ಚಿಗುರುವಂತಿರಬಾರದೆ ಜೀವನ...